ನೆಲಮಂಗಲ: ಸಂಬಳ ಸರಿಯಾಗಿ ಬರದ ಕಾರಣಕ್ಕೆ ಆರ್ಥಿಕವಾಗಿ ಮನನೊಂದಿದ್ದ, ಕೆಎಸ್‌ಆರ್‌ಟಿಸಿ ನೌಕರ ವಿಷಸೇವನೆ ಮಾಡಿ ತನ್ನ ಮನೆಯಲ್ಲಿ ಸಾವಿಗೀಡಾಗಿದ್ದಾರೆ.
Advertisement
ಬೆಂಗಳೂರು ಹೊರವಲಯ ನೆಲಮಂಗಲ ನಗರದ ವಾಜರಹಳ್ಳಿಯಲ್ಲಿ ವಾಸವಾಗಿದ್ದ ವೆಂಕಟೇಶ್ ಆತ್ಮಹತ್ಯೆಗೆ ಶರಣಾದ ನೌಕರ. ಘಟಕ 01 ರ ಬೆಂಗಳೂರು ಕೇಂದ್ರಿಯ ವಿಭಾಗದಲ್ಲಿ ಚಾಲಕ-ನಿರ್ವಾಹಕ ಹುದ್ದೆಯಲ್ಲಿ ವೆಂಕಟೇಶ್ ಕೆಲಸ ಮಾಡುತ್ತಿದ್ದರು. ಈ ನಡುವೆ ಸರಿಯಾಗಿ ಸಂಬಳ ಬರದ ಕಾರಣ ವೆಂಕಟೇಶ್ ಆರ್ಥಿಕವಾಗಿ ಮನನೊಂದ್ದು, ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನೀರು ಕುಡಿಯಲು ಬಂದು ಅಕ್ರಮ ವಿದ್ಯುತ್‍ಗೆ ವ್ಯಕ್ತಿ ಬಲಿ
Advertisement
Advertisement
ಆತ್ಮಹತ್ಯೆ ಮಾಡಿಕೊಂಡ ವೆಂಕಟೇಶ್ ಮೃತ ದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.