ಬೆಂಗಳೂರು: ಗೆಳೆಯ ವೈಶಾಕ್‌ನ ಅಂತಿಮ ದರ್ಶನ ಪಡೆಯಲು ಬಂದ ನಟಿ ಕೃಷಿ ತಾಪಂಡಗೆ ಕೊನೆಕ್ಷಣದಲ್ಲಿ ಸ್ನೇಹಿತನ ಮುಖ ನೋಡುವ ಅವಕಾಶ ಸಿಗದೇ ಕಣ್ಣೀರಿಡುತ್ತಾ ವಾಪಸ್ಸಾಗಿದ್ದಾರೆ.
ಚಾಮರಾಜಪೇಟೆಯ (Chamarajapete) ಚಿತಾಗಾರದಲ್ಲಿ ಉದ್ಯಮಿ ವೈಶಾಕ್ ಅವರ ಅಂತ್ಯಕ್ರಿಯೆ ನೆರವೇರಿದೆ. ಚಿತಾಗಾರಕ್ಕೆ ಕೃಷಿ ಆಗಮಿಸುವಷ್ಟರಲ್ಲೇ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಿತ್ತು. ಕೊನೆಯ ಗಳಿಗೆಯಲ್ಲೂ ಸ್ನೇಹಿತನ ಮುಖ ನೋಡಲಾಗದೇ ಕೃಷಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಗೆಳೆಯನ ಆತ್ಮಹತ್ಯೆ ವಿಚಾರ ಪೊಲೀಸರಿಗೆ ತಿಳಿಸಿದ್ದೇ ಕೃಷಿ ತಾಪಂಡ
ಈ ವೇಳೆ ವೈಶಾಕ್ ಕುಟುಂಬಸ್ಥರು ಕೃಷಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ನೀನು ನೋಡೋ ಅವಶ್ಯತಕೆ ಇಲ್ಲ. ಇಲ್ಲಿಂದು ಹೊರಡು ಎಂದಿದ್ದಾರೆ. ಇದರಿಂದ ಬೇಸತ್ತ ಕೃಷಿ ಹಾಗೆಯೇ ವಾಪಸ್ಸಾಗಿದ್ದು, ಕಾರಿನಲ್ಲಿ ಕುಳಿತು ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾರೆ.
ಆಗಿದ್ದೇನು?
ಕೃಷಿ ತಾಪಂಡ ವಾಸವಾಗಿದ್ದ ಆರ್‌ಆರ್ ನಗರದ ಬಿ ಬ್ಲಾಕ್ 403ನೇ ಫ್ಲಾಟ್‌ನಲ್ಲಿ ಬುಧವಾರ (ಜೂ.24) ರಾತ್ರಿ ವೈಶಾಖ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಮಯದಲ್ಲಿ ಕೃಷಿ ನೆಲಮಂಗಲದಲ್ಲಿದ್ದರು. ಆತ್ಮಹತ್ಯೆಗೂ ಮುನ್ನ ಹಲವು ಬಾರಿ ಕೃಷಿಗೆ ವೈಶಾಖ್ ಕರೆ ಮಾಡಿದ್ದರು. ಆದರೂ ನಟಿ ಕಾಲ್ ರಿಸಿವ್ ಮಾಡಿರಲಿಲ್ಲ. ರಾತ್ರಿ 8:30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೈಶಾಖ್ ಮೆಸೇಜ್ ಕಳಿಸಿದ್ದರು.
ಮನೆಗೆ ಬರುತ್ತಿದ್ದಂತೆ ವಿಚಾರ ತಿಳಿದ ಕೃಷಿ ವೈಶಾಖ್ ಮನೆಯವರಿಗೆ ತಿಳಿಸಿದ್ದರು. ಅನೇಕ ದಿನಗಳಿಂದ ಕೃಷಿ ಮನೆಯಲ್ಲಿ ವೈಶಾಕ್ ವಾಸವಾಗಿದ್ದರು. ಇಬ್ಬರ ಬಳಿಯೂ ಮನೆಯ ಕೀ ಇತ್ತು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಮೊಬೈಲ್‌ನಲ್ಲೂ ಯಾವುದೇ ವಿಡಿಯೋವನ್ನೂ ಮಾಡಿಲ್ಲ.ಇದನ್ನೂ ಓದಿ: ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ಆತ್ಮಹತ್ಯೆ
