– ಇನ್ಮುಂದೆ ಉಚಿತ ಆರೋಗ್ಯ ಸೇವೆ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ (Bengaluru University) ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಸಾಲು ಸಾಲು ರಸ್ತೆ ಅಪಘಾತಗಳು ಆಗ್ತಿವೆ. ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಕುಲಪತಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ಹೆಲ್ತ್ ಇನ್ಶುರೆನ್ಸ್ (ಅರೋಗ್ಯ ವಿಮೆ) (Health Insurance) ನೀಡಲು ನಿರ್ಧಾರ ಮಾಡಿದ್ದಾರೆ. ಕುಲಪತಿಗಳ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.


ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಸಾಲು ಸಾಲು ರಸ್ತೆ ಅಪಘಾತಗಳು ಆಗ್ತಿದ್ದು, ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರು ವಿವಿ ಕುಲಪತಿ ಶಿವರಾಜ್ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಹೆಲ್ತ್ ಇನ್ಶುರೆನ್ಸ್ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ.
ದಾಖಲಾತಿ ಆಗುವ ವೇಳೆ ಪ್ರತಿ ವಿದ್ಯಾರ್ಥಿ 100 ರೂಪಾಯಿ ಹಣ ಪಾವತಿಸಬೇಕಾಗುತ್ತದೆ. ಅಚಾನಕ್‌ಆಗಿ ಕ್ಯಾಂಪಸ್ ಮಾತ್ರವಲ್ಲ, ಹೊರಗಡೆಯಲ್ಲಿ ಅಪಘಾತಗಳಿಗೆ ಒಳಗಾದರೂ ವಿದ್ಯಾರ್ಥಿಗಳಿಗೆ ನಿಗದಿತ ಬೆಲೆಯಲ್ಲಿ ಉಚಿತ ಆರೋಗ್ಯ ಸೇವೆ ಪಡೆಯಬಹುದು. ಈ ಸೇವೆ ಕಾಲೇಜು ಮುಗಿಯುವ ತನಕ ಇರಲಿದೆ. ಈಗಾಗಲೇ ಇನ್ಶುರೆನ್ಸ್ ಕಂಪನಿಗಳ ಜೊತೆಗೂ ಕುಲಪತಿಗಳು ಮಾತನಾಡಿದ್ದಾರೆ.

ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಬಡ ಮಕ್ಕಳೇ ಹೆಚ್ಚಿರೋದರಿಂದ ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಇದು ಮುಖ್ಯವಾಗಿತ್ತು. ಮಕ್ಕಳ ಆರ್ಥಿಕ ಸ್ಥಿತಿ ಹಾಗೂ ಆರೋಗ್ಯದ ಕಾಳಜಿಯಿಂದ ಈ ನಿರ್ಧಾರ ಮಾಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿವಿಯ ಎಲ್ಲಾ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದ್ದು, ಕುಲಪತಿಗಳ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
