ವಿಕಲಚೇತನ ಅಭಿಮಾನಿಯನ್ನು ಭೇಟಿ ಮಾಡಿ ಕಿಚ್ಚ ಕಣ್ಣೀರು

1 Min Read

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಕಲಚೇತನ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಆ ಮಗುವಿನ ಸ್ಥಿತಿ ನೋಡಿ ಕಣ್ಣೀರು ಹಾಕಿದ್ದಾರೆ.

ಮಂಗಳೂರಿನ ದೀಪಿಕಾ ಕೈಕಾಲು ಸ್ವಾಧೀನ ಕಳೆದುಕೊಂಡು, ಸರಿಯಾಗಿ ಮಾತನಾಡದ ಸ್ಥಿತಿಗೆ ತಲುಪಿದ್ದಾಳೆ. ಇಷ್ಟೆಲ್ಲಾ ನೋವಿನ ನಡುವೆ ನೆಚ್ಚಿನ ನಟ ಸುದೀಪ್ ಅವರನ್ನು ನೋಡಿ ಖುಷಿ ಪಟ್ಟಿದ್ದಾಳೆ. ಅಲ್ಲದೆ ಅಭಿನಯ ಚಕ್ರವರ್ತಿಯನ್ನು ದೀಪಿಕಾ ‘ಮಾವ’ ಎಂದು ತಿಳಿದುಕೊಂಡಿದ್ದಾಳೆ.

ದೀಪಿಕಾ ಮೊದಲ ಬಾರಿಗೆ ಸುದೀಪ್ ಮಾವನನ್ನು ನೋಡಿದ ಸಂತಸದಲ್ಲಿ ಕನ್ನಡಕ ಕೊಟ್ಟು ಹಾಕಿಕೊಳ್ಳುವುದಕ್ಕೆ ಹೇಳಿದ್ದಾಳೆ. ಅಲ್ಲದೆ ‘ಮುಸ್ಸುಂಜೆ ಮಾತು’ ಚಿತ್ರದ `ಏನಾಗಲಿ ಮುಂದೆ ಸಾಗು ನೀ’ ಹಾಡನ್ನು ಹಾಡಿದ್ದಾಳೆ. ಪುಟ್ಟ ಕಂದ ಈ ಹಾಡು ಹಾಡುತ್ತಿದ್ದಂತೆ ಸುದೀಪ್ ಭಾವುಕರಾಗಿದ್ದಾರೆ.

ದೀಪಿಕಾ ಸ್ಥಿತಿ ನೋಡಿ ಕಿಚ್ಚ ಮರುಗಿ ಕಂಗಾಲಾಗಿದ್ದಾರೆ. ಇಷ್ಟೇ ಅಲ್ಲದೆ ಮೂಲ್ಕಿಯಲ್ಲಿರುವ ದೀಪಿಕಾ ಮನೆಗೂ ಬರುವುದಾಗಿ ಸುದೀಪ್ ಭರವಸೆ ಕೊಟ್ಟಿದ್ದಾರೆ. ಹೀಗೆ ಸುದೀಪ್ ಕೆಲವೇ ನಿಮಿಷಗಳಲ್ಲಿ ಆ ಬಾಲಕಿಗೆ ಸಮಾಧಾನ ಮಾಡಿ ನಗಿಸಿ, ಧೈರ್ಯ ತುಂಬಿದ್ದಾರೆ. ಜೊತೆಗೆ ಸಹಾಯ ಮಾಡುವ ಮಾತು ಕೊಟ್ಟಿದ್ದಾರೆ.

https://www.youtube.com/watch?v=HBNcdUCYzc4

Share This Article
Leave a Comment

Leave a Reply

Your email address will not be published. Required fields are marked *