ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep) ತಮ್ಮ ಮುಂಬರುವ ಹುಟ್ಟುಹಬ್ಬದ ಆಚರಣೆಯ ಕುರಿತು ಅಭಿಮಾನಿಗಳನ್ನುದ್ದೇಶಿಸಿ ನಾಲ್ಕು ಪುಟಗಳ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
ಬಲವಾದ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಈ ವರ್ಷ ಸೆಪ್ಟೆಂಬರ್ 2 ರಂದು ಅಭಿಮಾನಿಗಳ ಜೊತೆ ಜನ್ಮದಿನ(Birth Day) ಆಚರಿಸಿಕೊಳ್ಳದಿರಲು ಅವರು ತೀರ್ಮಾನಿಸಿದ್ದು, ಆ ದಿನದಂದು ತಾವು ಮನೆಯಲ್ಲಿ ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಪತ್ರದಲ್ಲಿ “ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ” ಎಂಬ ಖಡಕ್ ಡೈಲಾಗ್ ಉಲ್ಲೇಖಿಸುವ ಮೂಲಕ, ಮುಂದಿನ ಬಿಗ್ ಪ್ರಾಜೆಕ್ಟ್‌ಗಳಿಗೆ ಭರ್ಜರಿಯಾಗಿ ಸಜ್ಜಾಗುತ್ತಿರುವ ಸ್ಪಷ್ಟ ಸುಳಿವನ್ನು ನೀಡಿದ್ದಾರೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಅಬ್ಬರ – ಮೊದಲ ದಿನವೇ 140 ಕೋಟಿ ಬಾಚಿದ ಟಾಕ್ಸಿಕ್
View this post on Instagram
ಸತ್ಕಾರಗಳು ಗದ್ದಲವಾಗಬಾರದು ಎಂಬ ಸಂಸ್ಕಾರಯುತ ಸಂದೇಶ ನೀಡಿರುವ ಕಿಚ್ಚ, ಯಾರೂ ಮನೆಯ ಬಳಿ ಬಂದು ಕಾಯುವುದು ಬೇಡ ಎಂದು ಕೈಮುಗಿದು ಮನವಿ ಮಾಡಿದ್ದಾರೆ.
ಸೆಪ್ಟೆಂಬರ್ 2 ಕೇವಲ ಒಂದು ಸಾಮಾನ್ಯ ದಿನಾಂಕವಷ್ಟೇ. ಆದರೆ ಕಳೆದ 30 ವರ್ಷಗಳಿಂದ ಆ ದಿನವನ್ನು ಅದ್ಧೂರಿ ಹಬ್ಬವನ್ನಾಗಿ ಪರಿವರ್ತಿಸಿದವರು ನೀವೇ. ನೀವು ನಿಮ್ಮ ಊರುಗಳಲ್ಲಿ ಮಾಡುವ ಸಮಾಜಮುಖಿ ಕಾರ್ಯಗಳೇ ನನಗೆ ಶ್ರೀರಕ್ಷೆ ಹಾಗೂ ನಿಜವಾದ ಆಶೀರ್ವಾದ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ನನ್ನ ಮತ್ತು ನಿಮ್ಮ ನಡುವಿನ ಸಂಬಂಧವನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ, ಶೀಘ್ರದಲ್ಲೇ ನಾವೆಲ್ಲರೂ ಮುಖಾಮುಖಿ ಭೇಟಿಯಾಗೋಣ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಈ ಮೂಲಕ ಈ ವರ್ಷದ ಸೆಪ್ಟೆಂಬರ್ 2 ರಂದು ತಮ್ಮ ನಿವಾಸದ ಬಳಿ ನಡೆಯುತ್ತಿದ್ದ ಸಂಭ್ರಮಾಚರಣೆಗೆ ಕಿಚ್ಚ ಸುದೀಪ್ ಬ್ರೇಕ್ ಹಾಕಿದ್ದು, ತಮ್ಮ ಹೊಸ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾಗುತ್ತಿದ್ದಾರೆ.
