Connect with us

Cinema

ಕೆಜಿಎಫ್-2 ಸಿನಿಮಾ ತಂಡ, ಯಶ್ ಕನ್ನಡಿಗರ ಮಾತ್ರವಲ್ಲ ದೇಶದ ಆಸ್ತಿ: ಯಶ್ ತಾಯಿ

Published

on

– ನನ್ನ ಮಗ ಹುಟ್ಟಿದಾಗಲೇ ಹೀರೋ
– ಚಿತ್ರತಂಡಕ್ಕೆ ಪುಷ್ಪಾ ಅಭಿನಂದನೆ
– ಯಶ್ ಟ್ಯಾಲೆಂಟ್‍ಗೆ ಇದು ಸಾಲದು

ಬೆಂಗಳೂರು: ಪ್ರತಿಯೊಬ್ಬ ತಾಯಿಗೂ ಅವರ ಮಕ್ಕಳು ಹಿರೋ ಆಗಿರುತ್ತಾರೆ. ನನ್ನ ಮಗ ಹುಟ್ಟಿದಾಗಲೇ ನನಗೆ ಹೀರೋ ಎಂದು ಗೊತ್ತಿತ್ತು. ಇದೀಗ ಕೆಜಿಎಫ್-2 ಟೀಸರ್ ಇಷ್ಟೊಂದು ದೊಡ್ಡಮಟ್ಟದ ಯಶಸ್ಸನ್ನು ಕಂಡುಕೊಂಡಿದೆ, 2021 ಎಲ್ಲರಿಗೂ ಒಳ್ಳೆದು ಮಾಡಲಿ ನನಗೆ ತುಂಬಾ ಸಂತೋಷವಾಗಿದೆ ಎಂದು ರಾಕಿಬಾಯ್ ತಾಯಿ ಪುಷ್ಪಾ ಹೇಳಿದ್ದಾರೆ.

ಶುಕ್ರವಾರ ರಾತ್ರಿಯಷ್ಟೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಇದೀಗ ಎಲ್ಲಾ ದಾಖಲೆಗಳನ್ನು ಸರಿಗಟ್ಟಿ ನಾಗಲೋಟದಲ್ಲಿ ಓಡುತ್ತಿದೆ. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಿರ್ಮಾಪಕ ವಿಜಯ್ ಕಿಗಂದೂರ್ ಅವರು ಹಾಗೂ ವಿಶ್ವದ ಜನ ಈ ಯಶಸ್ಸಿಗೆ ಕಾರಣರಾಗಿದ್ದಾರೆ. ನಿರ್ದೆಶಕ ಪ್ರಶಾಂತ್ ನೀಲ್ ಅವರು ಇಂತಹ ಒಳ್ಳೆಯ ಒಂದು ಕಥೆಯನ್ನು ಕೊಟ್ಟು ಇಷ್ಟೊಂದು ಒಳ್ಳೆಯ ಟೀಸರ್ ಅನ್ನು ಹೊರ ತಂದಿದ್ದಾರೆ ಎಂದರೆ ಅವರ ಶ್ರಮವಿದೆ ಎಂದರು.

ಕೆಜಿಎಫ್-2 ಸಿನಿಮಾ ತಂಡ ಹಾಗೂ ಯಶ್ ಕನ್ನಡಿಗರ ಆಸ್ತಿ ಮಾತ್ರವಲ್ಲ ಇಡೀ ದೇಶದ ಆಸ್ತಿಯಾಗಿದ್ದಾರೆ. ಪ್ರತಿಯೊಂದು ಸಿನಿಮಾರಂಗದಲ್ಲಿಯೂ ಇಂಹತ ಒಳ್ಳೆ ನಿರ್ಮಾಪಕರು ಸಿನಿಮಾಕ್ಕೆ ಸಿಗುವಂತಾಗಲಿ. ಇದೇ ರೀತಿಯ ಇನ್ನೂ ಹೆಚ್ಚು ಹೆಚ್ಚು ಚಿತ್ರ ನಿರ್ಮಾಣವಾಗುವಂತಾಗಲಿ. ಯಾವ ನಿರ್ಮಾಪಕರು ಧೈರ್ಯವಾಗಿ ಇಷ್ಟೊಂದು ಹಣವನ್ನು ನಿಸಿಮಾಕ್ಕೆ ಹೂಡಲು ಧೈರ್ಯ ಮಾಡುವುದಿಲ್ಲ, ಆದರೆ ವಿಜಯ್ ಕಿಗಂದೂರ್ ಇಂತಹ ಧೈರ್ಯವನ್ನು ಮಾಡಿದ್ದಾರೆ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಪ್ರಶಾಂತ್ ನೀಲ್ ಅವರ ತಂದೆ ತಾಯಿಗೆ ಧನ್ಯವಾದ ಹೇಳುತ್ತೇನೆ ಅವರ ತಾಳ್ಮೆ ಯಾರಿಗೂ ಬರಲು ಸಾಧ್ಯವಾಗುವುದಿಲ್ಲ, ಒಳ್ಳೆಯ ಕಥೆಯನ್ನು ಪ್ರಶಾಂತ್ ನೀಲ್ ನೀಡಿದ್ದಾರೆ. ಕೆಜಿಎ ಫ್-2 ಸಿನಿಮಾದಲ್ಲಿ ಕೆಲಸ ಮಾಡಿದ ಕ್ಯಾಮೆರಾ ಮೆನ್ ಹಾಗೂ ಇತರ ಸದಸ್ಯರಿಗೆ ಹಾಗೂ ಸಂಪೂರ್ಣ ಚಿತ್ರತಂಡಕ್ಕೆ ನನ್ನ ಅಭಿನಂದನೆ ಹೇಳುತ್ತೇನೆ ಎಂದಿದ್ದಾರೆ.

ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ ಒಳ್ಳೆಯ ಹೆಸರು ಬಂದೇ ಬರುತ್ತದೆ ಎಂದು ಈ ಮೊದಲೇ ನನಗೆ ಗೊತ್ತಿತ್ತು. ಯಾರೇ ಶ್ರದ್ಧೆಯಿಂದ ಕೆಲಸ ಮಾಡಿದರೂ ದೇವರ ಆಶೀರ್ವಾದ ಸಿಗುತ್ತದೆ. ಅಂತೆಯೇ ಈ ಸಿನಿಮಾಕ್ಕೂ ಸಿಕ್ಕಿದೆ. ಯಶ್ ಟ್ಯಾಂಲೆಂಟ್‍ಗೆ ಇದು ಸಾಲದು. ಇದೆನೋ ಮಾಡಿದ್ದಾನೆ ಎಂದು ಸುಮ್ಮನಾಗುವುದಲ್ಲ, ಸಾಧಿಸುವುದು ಇನ್ನೂ ಇದೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.

ನನ್ನ ಮಕ್ಕಳು ಸೊಸೆ, ಮೊಮ್ಮಕ್ಕಳ ಮೇಲೆ ಆಶೀರ್ವಾದ ಇರಲಿ ಎಂದು ಕೇಳಿಕೊಳ್ಳುತ್ತೇನೆ. ಎಂದು ಕೆಜಿಎಫ್ 2 ಟೀಸರ್ ದಾಖಲೆ ಬರೆದಿರುವ ಸಂತೋಷವನ್ನು ಹಂಚಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in