ಬೆಂಗಳೂರು: ವಿಧಾನಸಭೆಯಿಂದ ಪರಿಷತ್(Vidhan Parishad) ಆಯ್ಕೆಗೆ ನಡೆಯುತ್ತಿರುವ ಚುನಾವಣೆ ರಂಗೇರಿದೆ. ಬಿಜೆಪಿಯಲ್ಲಿ (BJP) ಕೊನೆಗೂ ಅಳೆದು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ರಾಜ್ಯಸಭೆಯ 1 ಸ್ಥಾನ ಹಾಗೂ ಪರಿಷತ್‌ನ 2 ಸ್ಥಾನಗಳಿಗೆ ಬಿಜೆಪಿ (BJP) ವರಿಷ್ಠರು ತಡರಾತ್ರಿ ಅಭ್ಯರ್ಥಿಗಳ ಘೋಷಣೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿದ್ದರಿಂದ ಎಲ್ಲ ಅಭ್ಯರ್ಥಿಗಳೂ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೈಸೂರಿನ ಮಡಿವಾಳ ಸಮಯದಾಯಕ್ಕೆ ಸೇರಿದ, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಹಾಗೂ ಹುಬ್ಬಳ್ಳಿಯ ಪಂಚಮಸಾಲಿ ನಾಯಕ, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲರಿಗೆ ಟಿಕೆಟ್ ನೀಡಲಾಗಿದೆ.
ಸಿಎಂ ಡಿಕೆಶಿ ಆಪ್ತ ವಿನಯ್ ಕಾರ್ತಿಕ್ ಕಾಂಗ್ರೆಸ್‌ನಿಂದ (Congress) 5 ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಬಿಜೆಪಿ ಬೆಂಬಲದೊಂದಿಗೆ ಮೈತ್ರಿ ಅಭ್ಯರ್ಥಿಯಾಗಿ ಗೋವಿಂದರಾಜು ಕಣಕ್ಕಿಳಿದಿದ್ದಾರೆ. ಒಟ್ಟು 7 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ 5ನೇ ಅಭ್ಯರ್ಥಿ, ಜೆಡಿಎಸ್ ಅಭ್ಯರ್ಥಿ ನಡುವೆ ರಣಕಣ ಜೋರಾಗಿದೆ.
ಡಿ.ಸುಧಾಕರ್ ನಿಧನ, ವಿನಯ್ ಕುಲಕರ್ಣಿ ಶಾಸಕತ್ವ ರದ್ದಿನಿಂದ ವಿಧಾನಸಭೆ ಬಲ 222 ಆಗಿದೆ. ಸೂತ್ರದ ಪ್ರಕಾರ ಒಬ್ಬ ಅಭ್ಯರ್ಥಿ ಗೆಲ್ಲಲು 28 ಮತಗಳ ಅಗತ್ಯವಿದೆ. ಕಾಂಗ್ರೆಸ್ 4 ಸ್ಥಾನಗಳು, ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದೆ. ಕಾಂಗ್ರೆಸ್‌ನ 5ನೇ ಅಭ್ಯರ್ಥಿ, ಮೈತ್ರಿ ಅಭ್ಯರ್ಥಿಗೆ 2 ಮತಗಳ ಕೊರತೆ ಆಗಬಹುದು. ಹಾಗಾಗಿ ರಣಕಣ ರೋಚಕವಾಗಿದ್ದು, ಡಿಕೆ ಶಿವಕುಮಾರ್ ವರ್ಸಸ್ ಹೆಚ್‌ಡಿ ಕುಮಾರಸ್ವಾಮಿ(HD Kumaraswamy) ನಡುವಿನ ಮೊದಲ ಹಣಾಹಣಿ ಎನ್ನಬಹುದು. ಇದನ್ನೂ ಓದಿ: ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ಮಿಸ್; ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ: ಸುರೇಶ್ ಬಾಬು
ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ
> ಕಾಂಗ್ರೆಸ್ – 135
> ಬಿಜೆಪಿ – 62
> ಬಿಜೆಪಿ ಉಚ್ಚಾಟಿತ ಸದಸ್ಯರು – 03
> ಜೆಡಿಎಸ್ – 18
> ಕಲ್ಯಾಣ ರಾಜ್ಯ ಪ್ರಗತಿ ಪಕ್ಷ – 01
> ಸರ್ವೋದಯ ಕರ್ನಾಟಕ ಪಕ್ಷ – 01
> ಪಕ್ಷೇತರರು – 02
> ಖಾಲಿ ಸ್ಥಾನಗಳು – 02
ಎಲೆಕ್ಷನ್ ಲೆಕ್ಕಾಚಾರವೇನು?
ಪ್ರತಿ ಅಭ್ಯರ್ಥಿ ಗೆಲುವಿಗೆ 28 ಮತಗಳು ಅಗತ್ಯಗಳಿವೆ. ಕಾಂಗ್ರೆಸ್ ಬಳಿ 140 ಮತಗಳಿದ್ದು 5 ಅಭ್ಯರ್ಥಿಗಳೂ ಗೆಲ್ಲಬಹುದು. 135 ಜೊತೆಗೆ ಇಬ್ಬರು ಪಕ್ಷೇತರರು, ಇಬ್ಬರು ಬಿಜೆಪಿ ಉಚ್ಛಾಟಿತರು, ಸರ್ವೋದಯ ಪಕ್ಷ ಸೇರಿದ್ರೆ 140 ಆಗಲಿದೆ. ಇದನ್ನೂ ಓದಿ: 3 ಬಾರಿ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಪರಮೇಶ್ವರ್ ಬೇಸರ
