ನವದೆಹಲಿ: ದೆಹಲಿಯ ಎಐಸಿಸಿ (AICC) ಕಚೇರಿಯಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಸಭೆ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಹೈಕಮಾಂಡ್ ನಾಯಕರ ಸಮ್ಮುಖದಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಸಿಂಹಗರ್ಜನೆ ಮಾಡಿದ್ದಾರೆ.
ಅಧಿಕಾರ ಹಂಚಿಕೆಯ ಸೂತ್ರವನ್ನು ಮುಂದಿಟ್ಟುಕೊಂಡು ಡಿಕೆಶಿ ಹೈಕಮಾಂಡ್ ಅಂಗಳದಲ್ಲಿ ಮೂರು ಸ್ಫೋಟಕ ಷರತ್ತುಗಳನ್ನು ವಿಧಿಸಿ ಬಿಗಿಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಕೆಶಿ ಅವರ ಈ ಖಡಕ್ ನಿಲುವು ಈಗ ಹೈಕಮಾಂಡ್ ನಾಯಕರನ್ನೂ ಧರ್ಮಸಂಕಟಕ್ಕೆ ಸಿಲುಕಿಸಿದೆ.
ಷರತ್ತು 1: ಕೊಟ್ಟ ಮಾತು ಮುರಿಯಬೇಡಿ!
ಕರ್ನಾಟಕದಲ್ಲಿ ಸರ್ಕಾರ ರಚನೆಯಾಗುವಾಗ ಅಧಿಕಾರ ಹಂಚಿಕೆ ವಿಚಾರದಲ್ಲಿ ಏನು ಮಾತುಕತೆಯಾಗಿತ್ತೋ, ಆ ಮಾತನ್ನು ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಇಬ್ಬರೂ ಉಳಿಸಿಕೊಳ್ಳಬೇಕು. ಕಾಲಮಿತಿ ಮುಗಿದಿದ್ದು, ಈಗ ನಾಯಕತ್ವ ಬದಲಾವಣೆ ಆಗಲೇಬೇಕು. ಇದನ್ನೂ ಓದಿ: ದಿಲ್ಲಿಯಲ್ಲೂ ದೂರ ದೂರ – ಸಿಎಂ & ಟೀಂನಿಂದ ಅಂತರ ಕಾಯ್ದುಕೊಂಡ ಡಿಕೆಶಿ
ಷರತ್ತು 2: ಆಗಲ್ಲಾ ಅಂದ್ರೆ ಬಹಿರಂಗವಾಗಿ ಹೇಳಿ, ಗೊಂದಲಕ್ಕೆ ತೆರೆ ಎಳೆಯಿರಿ
ಒಂದು ವೇಳೆ ಸಿದ್ದರಾಮಯ್ಯ (Siddaramaiah) ಅವರನ್ನೇ ಸಿಎಂ ಆಗಿ ಮುಂದುವರಿಸಲು ನಿರ್ಧರಿಸಿದ್ದರೆ ಮತ್ತು ಕೊಟ್ಟ ಮಾತು ಈಡೇರಿಸಲು ಆಗುತ್ತಿಲ್ಲ ಎಂದಾದರೆ, ಅದನ್ನು ಹೈಕಮಾಂಡ್ ಹಾಗೂ ಸಿಎಂ ಇಬ್ಬರೂ ಜಂಟಿಯಾಗಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಒಪ್ಪಿಕೊಳ್ಳಲಿ. ದಿನನಿತ್ಯದ ಈ ಗೊಂದಲಕ್ಕೆ ಮತ್ತು ಕಾರ್ಯಕರ್ತರ ಆತಂಕಕ್ಕೆ ತಕ್ಷಣ ತೆರೆ ಎಳೆಯಿರಿ.
ಷರತ್ತು 3: ಹುದ್ದೆಯೂ ಬೇಡ, ಸಾಮಾನ್ಯ ಕಾರ್ಯಕರ್ತನಾಗುತ್ತೇನೆ
ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ನನಗೆ ಕೆಪಿಸಿಸಿ ಅಧ್ಯಕ್ಷ (KPCC President) ಸ್ಥಾನವೂ ಬೇಡ, ಉಪಮುಖ್ಯಮಂತ್ರಿ ಪಟ್ಟವೂ ಬೇಡ. ಎರಡೂ ಸ್ಥಾನಗಳಿಗೂ ನಾನು ರಾಜೀನಾಮೆ ನೀಡಲು ಸಿದ್ಧ. ನಾನು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡುತ್ತೇನೆ. ಇದನ್ನೂ ಓದಿ: ಹೈವೋಲ್ಟೇಜ್ ಸಭೆಗೂ ಮುನ್ನ ಎಐಸಿಸಿ ಕಚೇರಿಯಲ್ಲಿ ಸಿದ್ದು-ಡಿಕೆಶಿ ಮುಖಾಮುಖಿ
