ಜಕಾರ್ತಾ: ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ (PM Modi) ಇಂಡೋನೇಷ್ಯಾದ (Indonesia) ಅತ್ಯುನ್ನತ `ಬಿಂಟಾಂಗ್ ಆದಿಪೂರ್ಣ’ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ.
ಭಾರತ ಮತ್ತು ಇಂಡೋನೇಷ್ಯಾ ದೇಶಗಳ ನಡುವಿನ ಉತ್ತಮ ಬಾಂಧವ್ಯಕ್ಕಾಗಿ ಅಧ್ಯಕ್ಷ ಪ್ರಬೋವೋ ಸುಬಿಯಾಂಟೋ (Prabowo Subianto) ಅವರು ಪ್ರಧಾನಿ ಮೋದಿಗೆ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. `ಬಿಂಟಾಂಗ್ ಆದಿಪೂರ್ಣ’ (Bintang Adipurna) ಮೆಡಲ್ ಆಫ್ ಆನರ್ ಇದು ಇಂಡೋನೇಷ್ಯಾದ ಅತ್ಯುನ್ನತ ಗೌರವವಾಗಿದೆ. ಇದನ್ನು ಇಂಡೋನೇಷ್ಯಾದ ಒಗ್ಗಟ್ಟು, ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಅಸಾಧಾರಣ ಸೇವೆ ಸಲ್ಲಿಸಿದ ಗಣ್ಯರಿಗೆ ಈ ಗೌರವವನ್ನು ನೀಡಲಾಗುತ್ತದೆ. ಇದನ್ನೂ ಓದಿ: ಇಂದಿನಿಂದ 6 ದಿನ ಮೋದಿ ವಿದೇಶಿ ಪ್ರವಾಸ – ಇಂಡೋನೇಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗೆ ಭೇಟಿ
ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಧಾನಿ ಮಾತನಾಡಿ, ಪ್ರಪಂಚದಲ್ಲಿ ಈಗ ಉದ್ವಿಗ್ನ ವಾತಾವರಣವಿದೆ. ಇಂತಹ ಸಮಯದಲ್ಲಿ ಯಾವುದೇ ಸಮಸ್ಯೆಯನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಭಾರತ ನಂಬುತ್ತದೆ. ನಮ್ಮಿಬ್ಬರ ಇತಿಹಾಸದಲ್ಲಿ ಒಂದೇ ರೀತಿಯ ಸಂಸ್ಕೃತಿ ಇದೆ, ಪರಸ್ಪರ ನಂಬಿಕೆ ಇದೆ ಮತ್ತು ಭವಿಷ್ಯದಲ್ಲಿ ಜೊತೆಯಾಗಿ ಬೆಳೆಯುವ ಗುರಿ ಇದೆ. ನಾವಿಬ್ಬರೂ ಸೇರಿ ಇಂಡೋನೇಷ್ಯಾದ `ಇಂಡೋನೇಷ್ಯಾ ಎಮಾಸ್’ ಮತ್ತು ಭಾರತದ `ವಿಕಸಿತ ಭಾರತ’ ಕನಸನ್ನು ನನಸು ಮಾಡಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Held productive discussions with President Prabowo Subianto at Istana Merdeka in Jakarta. Over the past few years, India-Indonesia relations have acquired new momentum and greater depth. Today’s talks covered various subjects such as trade, human development, agriculture, food… pic.twitter.com/FvVqXEpDDZ
— Narendra Modi (@narendramodi) July 7, 2026
ಇನ್ನೂ ಮೋದಿ ಯುನೆಸ್ಕೋ ವಿಶ್ವ ಪರಂಪರೆಯ-ಪಟ್ಟಿಯಲ್ಲಿರುವ ಪ್ರಂಬನನ್ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಇದು ಎರಡೂ ದೇಶಗಳ ನಡುವಿನ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಪ್ರತಿಬಿಂಬಿಸಲಿದೆ.
Addressing the joint press meet with President Prabowo Subianto of Indonesia.@prabowo https://t.co/LrvzAuUjzi
— Narendra Modi (@narendramodi) July 7, 2026
ಸದ್ಯ ಪ್ರಧಾನಿ ಮೋದಿ ಮೂರು ದೇಶಗಳ ಪ್ರವಾಸಲ್ಲಿದ್ದು, ಸದ್ಯ ಇಂಡೋನೇಷ್ಯಾಗೆ ಭೇಟಿ ನೀಡಿದ್ದಾರೆ. ಜು.8ರಂದು ಇಂಡೋನೇಷ್ಯಾದಿಂದ ಆಸ್ಟ್ರೇಲಿಯಾಗೆ ತೆರಳಲಿದ್ದು, ಅಲ್ಲಿ ಅವರು ಪ್ರಧಾನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಆಸ್ಟ್ರೇಲಿಯಾದ (Australia) ಗವರ್ನರ್ ಜನರಲ್ ಸ್ಯಾಮ್ ಮೋಸ್ಟಿನ್ ಎಸಿ ಅವರನ್ನು ಸಹ ಭೇಟಿ ಮಾಡಲಿದ್ದಾರೆ. ಅದಾದ ಬಳಿಕ ಜು.10ರಂದು ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಭೇಟಿಗಾಗಿ ನ್ಯೂಜಿಲೆಂಡ್‌ಗೆ (New Zealand) ಪ್ರಯಾಣಿಸಲಿದ್ದಾರೆ. ಈ ಭೇಟಿಯು ನಾಲ್ಕು ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡುತ್ತಿರುವ ಮೊದಲ ಭೇಟಿಯಾಗಿದೆ. ಈ ವೇಳೆ ಅವರು ಆಕ್ಲೆಂಡ್‌ನಲ್ಲಿ (Auckland) ಪ್ರಧಾನಿ ಲಕ್ಸನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.ಇದನ್ನೂ ಓದಿ: ಭಾರತ ನಮ್ಮ ಪ್ರಬಲ ಮಿತ್ರರಲ್ಲಿ ಒಬ್ಬರು – ಅಮೆರಿಕ ಇಸ್ರೇಲ್‌ನ ಏಕೈಕ ಮಿತ್ರ ಎಂಬ ವ್ಯಾನ್ಸ್ ಹೇಳಿಕೆ ತಿರಸ್ಕರಿಸಿದ ನೆತನ್ಯಾಹು
