Connect with us

Districts

ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮಾಸ್ಕ್ ದಂಡ 250 ರೂ.ಗೆ ಇಳಿಕೆ

Published

on

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಬಿಗಿ ನಿಯಮ ರೂಪಿಸಿ ಮಾಸ್ಕ್ ವಿಚಾರದಲ್ಲಿ ಸಾವಿರ ರೂ. ದಂಡ ವಿಧಿಸಿದ್ದ ಸರ್ಕಾರ ಪಬ್ಲಿಕ್ ಟಿವಿಯ ನಿರಂತರ ಅಭಿಯಾನಕ್ಕೆ ಮಣಿದಿದೆ.

ಇಂದು ಮಧ್ಯಾಹ್ನ ಪ್ರಕಟಣೆ ಹೊರಡಿಸಿ ದಂಡದ ಮೊತ್ತವನ್ನು ನಗರದ ಪ್ರದೇಶದಲ್ಲಿ 1 ಸಾವಿರ ರೂಗಳಿಂದ 250 ರೂ.ಗೆ ಇಳಿಸಿದೆ. ಗ್ರಾಮೀಣ ಭಾಗದಲ್ಲಿ ನಿಗದಿಯಾಗಿದ್ದ 500 ರೂ. ದಂಡ ಈಗ 100 ರೂ.ಗೆ ಇಳಿಕೆಯಾಗಿದೆ.

ಮಾಸ್ಕ್ ಧರಿಸದ್ದಕ್ಕೆ 1 ಸಾವಿರ ರೂ. ದಂಡ ವಿಧಿಸುತ್ತಿದ್ದ ಕ್ರಮಕ್ಕೆ ಸಾರ್ವಜನಿಕಾ ವಲಯದಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಕೆಲಸ ಇಲ್ಲ ನಾವು ಸಂಕಷ್ಟದಲ್ಲಿರುವಾಗ 1 ಸಾವಿರ ರೂ. ದಂಡವನ್ನು ಪಾವತಿಸುವುದು ಹೇಗೆ ಎಂದು ಪ್ರಶ್ನೆ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

Click to comment

Leave a Reply

Your email address will not be published. Required fields are marked *