– ಜೆಡಿಎಸ್-ಕಾಂಗ್ರೆಸ್ಸಿನಲ್ಲೂ ಲಾಭ ನಷ್ಟದ ಲೆಕ್ಕಾಚಾರ
ತುಮಕೂರು: ಸಚಿವ ವಿ.ಸೋಮಣ್ಣ (V Somanna) ರ ಪುತ್ರ ಅರುಣ್ ಸೋಮಣ್ಣಗೆ ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ಜವಾಬ್ದಾರಿ ಕೊಟ್ಟಿರೋದು ಭಾರೀ ಸಂಚಲನ ಮೂಡಿಸಿದೆ. ಗುಬ್ಬಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಅಥವಾ ಲೋಕಸಭಾ ಚುನಾವಣೆ (Lokasabha Election) ಗೆ ವೇದಿಕೆ ರೆಡಿಮಾಡಿಕೊಳ್ತಾರಾ ಎಂಬ ಲೆಕ್ಕಾಚಾರ ಶುರುವಾಗಿದೆ.
Advertisement
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ (Nalin Kumar Kateel) ಅವರು ಅರುಣ್ ಸೋಮಣ್ಣರನ್ನ ದಿಢೀರ್ ತುಮಕೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮಾಡಿರೋದು ಬಿಜೆಪಿ ವಲಯದಲ್ಲಿ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಗುಬ್ಬಿ ವಿಧಾನ ಸಭಾ ಕ್ಷೇತ್ರದಿಂದ ಅರುಣ್ ಸೋಮಣ್ಣ (Arun Somanna) ಸ್ಪರ್ಧಿಸಬಹುದು ಅಥವಾ ಲೋಕಸಭಾ ಚುನಾವಣೆಗೆ ಈಗಿನಿಂದಲೇ ವೇದಿಕೆ ಸಜ್ಜು ಮಾಡಿಕೊಳ್ಳಬಹುದು ಎಂಬ ಚರ್ಚೆ ಶುರುವಾಗಿದೆ. ಈ ನಡುವೆ ಅರುಣ್ ಎಂಟ್ರಿಗೆ ವಿರೋಧ ಮಾತುಗಳೂ ಕೇಳಿಬಂದಿದೆ. ಸ್ಥಳೀಯರಲ್ಲದ ವ್ಯಕ್ತಿಗೆ ಹೇಗೆ ಜಿಲ್ಲಾ ಬಿಜೆಪಿಯಲ್ಲಿ ಸ್ಥಾನ ಕೊಡಲಾಯ್ತು. ಹೊರಗಿನಿಂದ ಬಂದವರಿಗೆ ಗುಬ್ಬಿ ಕ್ಷೇತ್ರಕ್ಕೆ ಟಿಕೆಟ್ ಕೊಡುವ ಹುನ್ನಾರ ನಡೀತಿದೆ ಎಂಬ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಕೆಲ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಎರಡನೇ ಗೆಲುವಿನ ಕೊಡುಗೆ ನೀಡಲಿದೆಯೇ ಮೂಡುಬಿದಿರೆ ಕ್ಷೇತ್ರ?
Advertisement
Advertisement
ಅರುಣ್ ಸೋಮಣ್ಣರ ಎಂಟ್ರಿಯಿಂದ ಕೇವಲ ಬಿಜೆಪಿಯಲ್ಲಿ ಮಾತ್ರ ಅಲ್ಲ ಕಾಂಗ್ರೆಸ್, ಜೆಡಿಎಸ್‍ನಲ್ಲೂ ಲಾಭ ನಷ್ಟದ ಲೆಕ್ಕಾಚಾರ ಜೋರಾಗಿದೆ. ಬಿಜೆಪಿಯಿಂದ ಹೊರಗಿನ ಅಭ್ಯರ್ಥಿ ಹಾಕಿದ್ದರೆ ಜೆಡಿಎಸ್‍ಗೆ ಲಾಭ ಆಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಸ್ಥಳೀಯರಲ್ಲದವರಿಗೆ ಟಿಕೆಟ್ ಕೊಡೋದ್ರಿಂದ ಬಿಜೆಪಿಯಲ್ಲಿ ಭಿನ್ನಮತ ಭುಗಿಲೇಳುತ್ತದೆ. ಅದು ಜೆಡಿಎಸ್‍ಗೆ ವರವಾಗಲಿದೆ ಎಂಬ ವಿಮರ್ಶೆ ಮಾಡಲಾಗುತ್ತಿದೆ. ಅತ್ತ ಕಾಂಗ್ರೆಸ್‍ನಲ್ಲೂ ಜೆಡಿಎಸ್‍ನಿಂದ ಬಂದ ಎಸ್‍ಆರ್ ಶ್ರೀನಿವಾಸ್ (S R Srinivas) ವಿರುದ್ಧನೂ ಮೂಲ ಕಾಂಗ್ರೆಸ್ಸಿಗರೂ ಅಸಮಾಧಾನಗೊಂಡಿದ್ದಾರೆ. ಹೊರಗಿನ ಅಭ್ಯರ್ಥಿಯಿಂದ ಬಿಜೆಪಿಯಲ್ಲಿ ಭಿನ್ನಮತವಾದರೆ, ವಲಸೆ ಅಭ್ಯರ್ಥಿಯಿಂದ ಕಾಂಗ್ರೆಸ್ (Congress) ಅಸಮಾಧಾನ ಸ್ಫೋಟ ಸಾಧ್ಯತೆ ಇದೆ. ಇದೆಲ್ಲವೂ ಜೆಡಿಎಸ್‍ಗೆ ಪ್ಲಸ್ ಆಗಲಿದೆ ಎಂಬ ವಾದ ಮುನ್ನೆಲೆಗೆ ಬಂದಿದೆ.
Advertisement
ಲಿಂಗಾಯತರ ಪ್ರಾಬಲ್ಯ ಇರುವ ಗುಬ್ಬಿ ಕ್ಷೇತ್ರದಲ್ಲಿ ಇಷ್ಟು ದಿನ ಬೇರೆಯದ್ದೇ ಆಯಾಮದಲ್ಲಿ ಚರ್ಚೆ ಆಗುತಿತ್ತು. ಆದರೆ ಅರುಣ್ ಸೋಮಣ್ಣರ ಎಂಟ್ರಿಯಿಂದ ಮೂರೂ ಪಕ್ಷದಲ್ಲಿನ ಪಾಲಿಟಿಕಲ್ ಸ್ಟ್ರಾಟಜಿ ನಿಧಾನವಾಗಿ ಬದಲಾಗುವ ಲಕ್ಷಣ ಗೋಚರಿಸುತ್ತಿದೆ.