ನವದೆಹಲಿ: ಮೊದಲು ಮಿಚೆಲ್ ಸ್ಟಾರ್ಕ್(Mitchell Starc) ಬೌಲಿಂಗ್, ಕೊನೆಯಲ್ಲಿ ನಾಯಕ ಅಕ್ಷರ್ ಪಟೇಲ್ (Axar Patel) ಮತ್ತು ಅಶುತೋಷ್ ಶರ್ಮಾ(Ashutosh Sharma ) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ರಾಜಸ್ಥಾನದ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 193 ರನ್ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 197 ರನ್ ಹೊಡೆದು ಜಯಗಳಿಸಿತು.
ಕೊನೆಯ 24 ಎಸೆತಗಳಲ್ಲಿ ಡೆಲ್ಲಿಗೆ 43 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ ಸ್ಟಬ್ಸ್ ವಿಕೆಟ್ ಕಳೆದುಕೊಂಡ ಡೆಲ್ಲಿ 8 ರನ್ ಹೊಡೆದರೆ, ಫೆರೀರಾ ಎಸೆದ 18ನೇ ಓವರ್‌ನಲ್ಲಿ 18 ರನ್ ಬಂತು. ಬ್ರಿಜೇಶ್ ಶರ್ಮಾ ಎಸೆದ 19ನೇ ಓವರಿನ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಔಟಾದರೂ ಈ ಓವರ್‌ನಲ್ಲಿ 12 ರನ್ ಸಿಕ್ಕಿತು. ಕೊನೆಯ ಓವರ್ ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸ್ ಸಿಡಿಸುವ ಮೂಲಕ ಅಶುತೋಷ್ ಡೆಲ್ಲಿ ತಂಡಕ್ಕೆ ಜಯನ್ನು ತಂದುಕೊಟ್ಟರು. ಇದನ್ನೂ ಓದಿ: IPL Playoffs | ಆರ್‌ಸಿಬಿ ತಂಡದ `ಗೇಮ್ ಚೇಂಜರ್ʼ ಹೇಜಲ್‌ವುಡ್
Ashutosh Sharma dials 6️⃣ 📞 @DelhiCapitals dial in 2⃣ points ✅
They remain alive in the Race for the Playoffs 💙❤️
Scorecard ▶️ https://t.co/JwHkQQ1ayi #TATAIPL | #KhelBindaas | #DCvRR pic.twitter.com/g44IaiOCqr
— IndianPremierLeague (@IPL) May 17, 2026
ಅಶುತೋಷ್ ಔಟಾಗದೇ 18 ರನ್( 5 ಎಸೆತ, 1 ಬೌಂಡರಿ, 2 ಸಿಕ್ಸ್) ಅಕ್ಷರ್ ಪಟೇಲ್ ಔಟಾಗದೇ 34 ರನ್(18 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿದರು. ಅಭಿಷೇಕ್ ಪೊರೆಲ್ ಮತ್ತು ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟಿಗೆ 61 ಎಸೆತಗಳಲ್ಲಿ 105 ರನ್ ಜೊತೆಯಾಟವಾಡಿದರು. ಅಭಿಷೇಕ್ 51 ರನ್(31 ಎಸೆತ, 7 ಬೌಂಡರಿ, 1 ಸಿಕ್ಸ್), ಕೆಎಲ್ ರಾಹುಲ್ 56 ರನ್(42 ಎಸೆತ, 1 ಬೌಂಡರಿ, 1 ಸಿಕ್ಸ್) ಹೊಡೆದು ಔಟಾದರು. ಇದನ್ನೂ ಓದಿ: ಪ್ಲೇ ಆಫ್ ಪ್ರವೇಶಿಸಿ ಮುಂಬೈ ಸಾಧನೆ ಸರಿಗಟ್ಟಿದ ಆರ್‌ಸಿಬಿ
Brutal on the pull 🔥
Classy down the ground 👌KL Rahul putting his elite range on full display 🤩
Updates ▶️ https://t.co/JwHkQQ1ayi #TATAIPL | #KhelBindaas | #DCvRR | @klrahul pic.twitter.com/cQySYXDV0A
— IndianPremierLeague (@IPL) May 17, 2026
ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದರೆ ಲುಂಗಿ ಎನ್‌ಗಿಡಿ ಮತ್ತು ಮಾಧವ್ ತಿವಾರಿ ತಲಾ 2 ವಿಕೆಟ್ ಪಡೆದರು. ಇನ್ಸಿಂಗ್ಸ್‌ನ 15ನೇ ಓವರಿನ ಸ್ಟಾರ್ಕ್ ರಿಯಾನ್ ಪರಾಗ್, ಫೆರೀರಾ, ರವಿ ಸಿಂಗ್ ಅವರನ್ನು ಔಟ್ ಮಾಡುವ ಮೂಲಕ ರಾಜಸ್ಥಾನ ರನ್ ಓಟಕ್ಕೆ ರೋಚಕ ತಿರುವು ನೀಡಿದರು.

