ಧರ್ಮಶಾಲಾ: ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ 23 ರನ್‌ಗಳ ಜಯ ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪ್ಲೇ ಆಫ್ ಪ್ರವೇಶಿಸುವ ಮೂಲಕ ಮುಂಬೈ ಕಿಂಗ್ಸ್(Mumbai Kings) ಸಾಧನೆ ಸರಿಗಟ್ಟಿದೆ.
18 ಐಪಿಎಲ್ ಆವೃತ್ತಿಗಳಲ್ಲಿ ಆರ್‌ಸಿಬಿ ಇಲ್ಲಿಯವರೆಗೆ 11 ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಆದರೆ ಇಲ್ಲಿಯವರೆಗೆ ಅತಿ ಹೆಚ್ಚು ಬಾರಿ ಪ್ಲೇ ಆಫ್ ಪ್ರವೇಶಿಸಿದ ತಂಡ ಎಂಬ ಹೆಗ್ಗಳಿಕೆಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಪಾತ್ರವಾಗಿದೆ.
ಚೆನ್ನೈ ಇಲ್ಲಿಯವರೆಗೆ 12 ಬಾರಿ ಈ ಸಾಧನೆ ಮಾಡಿದ್ದರೆ ಮುಂಬೈ 11 ಬಾರಿ ಪ್ರವೇಶಿಸಿತ್ತು. ಚೆನ್ನೈ 11 ಪಂದ್ಯಗಳಿಂದ 12 ಅಂಕ ಪಡೆದಿದೆ. ಮುಂದೆ ಸನ್ ರೈಸರ್ಸ್ ಮತ್ತು ಜಿಟಿ ವಿರುದ್ಧ ಉತ್ತಮ ರನ್‌ಗಳಿಂದ ಜಯಗಳಿಸಿದರೆ ಈ ಬಾರಿಯೂ ಚೆನ್ನೈ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆಯಿದೆ.
ಈಗಾಗಲೇ 12 ಪಂದ್ಯಗಳಿಂದ 8 ಅಂಕ ಸಂಪಾದಿಸಿರುವ ಮುಂಬೈ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರ ಬಿದ್ದಿದೆ. ಆರ್‌ಸಿಬಿ 2020 ರಿಂದ 2026 ರವರೆಗೆ ಸತತ 6 ಆವೃತ್ತಿಗಳಲ್ಲಿ ಪ್ಲೇ ಆಫ್ ಪ್ರವೇಶಿಸಿರುವುದು ವಿಶೇಷ. ಇದನ್ನೂ ಓದಿ: ಪಂಜಾಬ್ ವಿರುದ್ಧ ಅರ್ಧಶತಕ ಬಾರಿಸಿ 2 ದಾಖಲೆ ಬರೆದ ಕೊಹ್ಲಿ
Seizing the opportunity in style 👌
Updates ▶️ https://t.co/3u5qL0Zn75#TATAIPL | #KhelBindaas | #PBKSvRCB | @venkateshiyer pic.twitter.com/VMHmF39cr5
— IndianPremierLeague (@IPL) May 17, 2026
ಆರ್‌ಸಿಬಿ ಪ್ಲೇ-ಆಫ್ ವರ್ಷಗಳ ಪಟ್ಟಿ
2009: ರನ್ನರ್ಸ್-ಅಪ್ (ಫೈನಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲು) ಇದನ್ನೂ ಓದಿ: IPL 2026 | ʻಜೋಶ್ʼನಲ್ಲಿ ಗೆದ್ದ ಆರ್‌ಸಿಬಿ – ಪ್ಲೇ ಆಫ್‌ಗೆ ರಾಯಲ್ ಎಂಟ್ರಿ
2010: 3ನೇ ಸ್ಥಾನ (ಸೆಮಿಫೈನಲ್‌ನಲ್ಲಿ ಮುಂಬೈ ವಿರುದ್ಧ ಸೋತು, 3ನೇ ಸ್ಥಾನದ ಪಂದ್ಯ ಗೆದ್ದಿತು)
2011: ರನ್ನರ್ಸ್-ಅಪ್ (ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು)
2015: 3ನೇ ಸ್ಥಾನ (ಕ್ವಾಲಿಫೈಯರ್ 2 ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಸೋಲು)
2016: ರನ್ನರ್ಸ್-ಅಪ್ (ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು)
2020: 4ನೇ ಸ್ಥಾನ (ಎಲಿಮಿನೇಟರ್ ಪಂದ್ಯದಲ್ಲಿ ಎಸ್‌ಆರ್‌ಹೆಚ್ ವಿರುದ್ಧ ಸೋಲು)
2021: 4ನೇ ಸ್ಥಾನ (ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲು)
2022: 3ನೇ ಸ್ಥಾನ (ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು)
2024: 4ನೇ ಸ್ಥಾನ (ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಸೋಲು)
2025: ಚಾಂಪಿಯನ್ಸ್ (ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಕಪ್ ಗೆದ್ದಿತು

