ಧರ್ಮಶಾಲಾ: ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ (Virat Kohli) ಎರಡು ದಾಖಲೆ ಬರೆದಿದ್ದಾರೆ.
ಕೊಹ್ಲಿ ಈ ಪಂದ್ಯದಲ್ಲಿ 58 ರನ್(37 ಎಸೆತ, 4 ಬೌಂಡರಿ, 3 ಸಿಕ್ಸ್) ಹೊಡೆಯುವ ಮೂಲಕ ಈ ಟೂರ್ನಿಯಲ್ಲಿ 542 ರನ್ ಹೊಡೆದಿದ್ದಾರೆ. ಈ ಮೂಲಕ 9 ಐಪಿಎಲ್ ಆವೃತ್ತಿಗಳಲ್ಲಿ 500 ರನ್‌ಗಳ ಗಡಿ ದಾಟದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಐಪಿಎಲ್‌ನ 2011, 2013, 2015, 2016, 208, 2023, 2024, 2025, 2026 ರಲ್ಲಿ ಕೊಹ್ಲಿ 500+ ರನ್ ಹೊಡೆದಿದ್ದಾರೆ. ಅದರಲ್ಲೂ 2023 ರಿಂದ ಸತತ 4 ಆವೃತ್ತಿಯಲ್ಲಿ 500ಕ್ಕೂ ಹೆಚ್ಚು ರನ್ ಚಚ್ಚಿದ್ದಾರೆ. ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ರಜತ್ ಪಟಿದಾರ್ ಗೈರಾಗಿದ್ದು ಯಾಕೆ?
Picking up from where he left in Raipur 😌
🎥 Elegance personified from @imVkohli 💪
Updates ▶️ https://t.co/3u5qL0Zn75#TATAIPL | #KhelBindaas | #PBKSvRCB | @RCBTweets pic.twitter.com/L069sdJ5DQ
— IndianPremierLeague (@IPL) May 17, 2026
ಈ ಸಾಧನೆಯ ಜೊತೆಗೆ ಒಂದೇ ಫ್ರಾಂಚೈಸಿ ಪರ ಆರಂಭಿಕರಾಗಿ ಕಣಕ್ಕಿಳಿದು 5,500 ರನ್ ಗಳಿಸಿದ ಮೊದಲ ಆಟಗಾರ ಎಂಬ ವಿಶಿಷ್ಟ ದಾಖಲೆ ಬರೆದಿದ್ದಾರೆ.
2026ರ ಟೂರ್ನಿಯಲ್ಲಿ ಕೊಹ್ಲಿ 1 ಶತಕ, 4 ಅರ್ಧಶತಕ ಸಿಡಿಸಿ ಅತಿ ಹೆಚ್ಚು ರನ್ ಹೊಡೆದ ಬ್ಯಾಟರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಸಾಯಿ ಸುದರ್ಶನ್(554 ರನ್), ಎರಡನೇ ಸ್ಥಾನದಲ್ಲಿ ಶುಭಮನ್ ಗಿಲ್ (552 ರನ್) ಇದ್ದಾರೆ.

