ಧರ್ಮಶಾಲಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಟಿದಾರ್(Rajat Patidar) ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್(KKR) ವಿರುದ್ಧದ ಪಂದ್ಯದಲ್ಲಿ ಕಾರ್ತಿಕ್ ತ್ಯಾಗಿ ಬೌಲಿಂಗ್‌ನಲ್ಲಿ ಪಟಿದಾರ್ ಅವರ ಹೆಲ್ಮೆಟ್‌ಗೆ ಬಾಲ್ ಬಡಿದ ಕಾರಣ ಅವರ ತಲೆಗೆ ಪೆಟ್ಟು ಬಿದ್ದಿದೆ. ಹಾಗಾಗಿ ಅವರು ಧರ್ಮಶಾಲಾಗೆ ಬಂದಿಲ್ಲ ಮತ್ತು ಈ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿಯೂ ಅವರು ಕಾಣಿಸಿಕೊಂಡಿರಲಿಲ್ಲ. ಐಸಿಸಿ ಮಾರ್ಗಸೂಚಿಯ ಪ್ರಕಾರ ತಲೆಗೆ ಪೆಟ್ಟು ಬಿದ್ದ ಮೇಲೆ ಕನಿಷ್ಠ 7 ದಿನಗಳ ಕಾಲ ಪಂದ್ಯ ಆಡುವಂತಿಲ್ಲ. ಹಾಗಾಗಿ ಅವರು ಆಡುವ ಹನ್ನೊಂದರ ಬಳಗದಿಂದ ಹೊರಗುಳಿದಿದ್ದಾರೆ. ಇದನ್ನೂ ಓದಿ: ಇಂದು ಆರ್‌ಸಿಬಿ ಗೆದ್ದರೆ ಸಿಎಸ್‌ಕೆಗೆ ಲಕ್ – ಪ್ಲೇ ಆಫ್ ಹಾದಿ ಇನ್ನಷ್ಟು ಸುಲಭ
ರಜತ್ ಪಟಿದಾರ್ ಈ ಆವೃತ್ತಿಯಲ್ಲಿ 11 ಇನಿಂಗ್ಸ್ ಆಡಿದ್ದು 196.57 ಸ್ಟ್ರೈಕ್ ರೇಟ್‌ನೊಂದಿಗೆ 337 ರನ್ ಕಲೆ ಹಾಕಿದ್ದಾರೆ.

