ವಿಚ್ಛೇದನದ ನಂತರ ಮೌನಿ ರಾಯ್ (Mouni Roy) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಮದುವೆ ಫೋಟೋಗಳನ್ನು ಅಳಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಆ ಫೋಟೋಗಳು ಇನ್ನೂ ಅವರ ಖಾತೆಯಲ್ಲಿ ಕಾಣಿಸುತ್ತಿದ್ದು, ಸೂರಜ್ ನಂಬಿಯಾರ್ (Suraj Nambiar) ಜೊತೆಗಿದ್ದ ಪೋಸ್ಟ್‌ಗಳು ಮತ್ತೇ ವೈರಲ್ ಆಗಿವೆ.
View this post on Instagram
ಬಾಲಿವುಡ್ ನಟಿ (Actrss Bollywood) ಮೌನಿ ರಾಯ್ ಮತ್ತು ಸೂರಜ್ ವಿಚ್ಛೇದನ ಪಡೆದಿರುವ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದಂಪತಿ ಜಂಟಿ ಹೇಳಿಕೆಯ ಮೂಲಕ ತಮ್ಮ ಬೇರ್ಪಟ್ಟ ವಿಚಾರವನ್ನು ಬಹಿರಂಗಪಡಿಸಿದ ಬಳಿಕ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮದುವೆ ಚಿತ್ರಗಳ (Wedding Photos) ಜೊತೆಗೆ ಸೂರಜ್ ನಂಬಿಯಾರ್ ಅವರೊಂದಿಗಿನ ಹಲವು ಆತ್ಮೀಯ ಕ್ಷಣಗಳ ಫೋಟೋಗಳು ಇನ್ನೂ ಮೌನಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಉಳಿದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸೂರಜ್ ಜೊತೆಗಿನ ಹೊಸ ಪೋಸ್ಟ್ಗಳನ್ನು ಅವರು ಹಂಚಿಕೊಂಡಿಲ್ಲ.

ಮೌನಿ ಅವರ ಹಳೆಯ ಪೋಸ್ಟ್ಗಳು ಮತ್ತೆ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಏನಾಯಿತು?, ಇದನ್ನು ಇನ್ನೂ ನಂಬಲಾಗುತ್ತಿಲ್ಲ, ಇಷ್ಟು ಸುಂದರ ಜೋಡಿ ಏಕೆ ಬೇರ್ಪಟ್ಟರು? ಎಂಬ ಪ್ರತಿಕ್ರಿಯೆಗಳು ಹೆಚ್ಚಾಗಿ ಕಂಡುಬಂದಿವೆ. ಕೆಲ ಅಭಿಮಾನಿಗಳು ವಿಚ್ಛೇದನದ ಸುದ್ದಿ ಬೇಸರವಾಗಿದೆ ಎಂದು ಹೇಳಿದ್ದು, ಇಬ್ಬರೂ ಮತ್ತೆ ಒಂದಾಗಲಿ ಎಂದು ಆಶಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಚಾರವೂ ಗಮನ ಸೆಳೆದಿದೆ. ಮೌನಿ ರಾಯ್ ಇನ್ನೂ ಸೂರಜ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದರೆ, ಸೂರಜ್ ಮಾತ್ರ ಮೌನಿಯನ್ನು ಫಾಲೋ ಮಾಡುತ್ತಿಲ್ಲ. ವಿಚ್ಛೇದನದ ಕುರಿತ ವದಂತಿಗಳು ಹರಡುತ್ತಿದ್ದ ಸಂದರ್ಭದಲ್ಲಿ ಸೂರಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿದ್ದರು ಎನ್ನಲಾಗಿದೆ. ವಿಚ್ಛೇದನದ ಕುರಿತು ಅಧಿಕೃತ ಪ್ರಕಟಣೆ ನೀಡುವ ವೇಳೆ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿದ್ದಾರೆ. ವಿಚ್ಛೇದನ ಪ್ರಕಟಣೆಯಲ್ಲಿ ಮೌನಿ ಮತ್ತು ಸೂರಜ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನಗತ್ಯ ಚರ್ಚೆಗಳು ಮತ್ತು ಸುಳ್ಳು ಸುದ್ದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಸಂಬಂಧದ ವಾಸ್ತವತೆಯನ್ನು ತಪ್ಪಾಗಿ ಚಿತ್ರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

