ನಿನ್ನೆಯಷ್ಟೇ ಕಾಂತಾರ (Kantara) ಸಿನಿಮಾ ಐವತ್ತು ದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಉಡುಪಿಯ ಕಾಪು ಬೀಚ್ ನಲ್ಲಿ ಕಾಂತಾರ 50ರ (Fifty Days) ಸಂಭ್ರಮದ ಮರಳುಶಿಲ್ಪವನ್ನು ರೆಡಿ ಮಾಡಿದ್ದಾರೆ ಸ್ಯಾಂಡ್ ಆರ್ಟ್ ಕಲಾವಿದರು. ಅದರಲ್ಲೂ ಪಂಜುರ್ಲಿ ಕಲಾಕೃತಿಯನ್ನೇ ಮರಳು ಶಿಲ್ಪ ಮಾಡಲು ಕಲಾವಿದರು ಆಯ್ಕೆ ಮಾಡಿಕೊಂಡಿದ್ದಾರೆ. ನಿನ್ನೆಯಿಂದ ಉಡುಪಿಯ ಕಾಪು ಬೀಚ್ ನಲ್ಲಿ ಕಾಂತಾರ ಮರಳು ಶಿಲ್ಪ (Sand Sculpture) ಆಸಕ್ತರನ್ನು ಕೈ ಬೀಸಿ ಕರೆಯುತ್ತಿದೆ.
Advertisement
ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ ಸಿನಿಮಾ ಐವತ್ತು ದಿನಗಳ ಪ್ರದರ್ಶನ ಕಂಡಿದ್ದು, ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನಕ್ಕೆ ಇನ್ನೂ ಸಾಕ್ಷಿ ಆಗುತ್ತಿವೆ. ದೇಶ ವಿದೇಶದಲ್ಲೂ 50ನೇ ದಿನದ ಸಂಭ್ರಮವನ್ನು ಅನೇಕ ಚಿತ್ರಮಂದಿರಗಳು ಆಚರಿಸಿವೆ. ಇದೇ ಹೊತ್ತಿನಲ್ಲೇ ಮಣಿಪಾಲದ ಸ್ಯಾಂಡ್ ಆರ್ಟ್ ಕಲಾವಿದರು ಕಾಪು ಬೀಚ್ ನಲ್ಲಿ ಇಂಥದ್ದೊಂದು ಕಲಾಕೃತಿಯನ್ನು ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಇದನ್ನೂ ಓದಿ:`ಬನಾರಸ್’ ಚಿತ್ರದ ಬೆನ್ನಲ್ಲೇ ಝೈದ್ ಖಾನ್‌ಗೆ ಬಂತು ಬಿಗ್ ಆಫರ್
Advertisement
Advertisement
ಪಂಜುರ್ಲಿ ದೈವದ ಮುಖವರ್ಣಿಕೆಯ ಕಲರ್ ಫುಲ್ ಕಲಾಕೃತಿಯನ್ನು ಸ್ಯಾಂಡ್ ಆರ್ಟ್ ಹೆಸರಿನಲ್ಲಿ ತಂಡ ಕಟ್ಟಿರುವ ಶ್ರೀನಾಥ್ ಮಣಿಪಾಲ್, ರವಿ ಹಿರೇಬೆಟ್ಟು ಮತ್ತು ವೆಂಕಿ ಪಲಿಮಾರು ಮೂವರು ಒಂದು ದಿನ ಟೈಮ್ ತಗೆದುಕೊಂಡು ರಚಿಸಿದ್ದು, ಇದೀಗ ಕಾಪು ಬೀಚ್ ಗೆ ಸಾವಿರಾರು ಜನರು ಈ ಕಲಾಕೃತಿಯನ್ನು ನೋಡುವುದಕ್ಕೆ ಬರುತ್ತಿದ್ದಾರಂತೆ. ಕಾಂತರ ಸಿನಿಮಾದ ಬಗ್ಗೆ ಅನೇಕರು ಗುಣಗಾನ ಕೂಡ ಮಾಡುತ್ತಿದ್ದಾರೆ.
Advertisement
ಒಂದು ಕಡೆ ಮರುಳುಶಿಲ್ಪದ ಸಂಭ್ರಮವಾದರೆ, ಮತ್ತೊಂದು ಕಡೆ ಸೂಪರ್ ಸ್ಟಾರ್ ರಜನಿಕಾಂತ್ ಎರಡು ಮೂರು ವಾರಗಳ ಹಿಂದೆಯಷ್ಟೇ ಕಾಂತಾರ ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನು ತಮ್ಮ ಮನೆಗೆ ಕರೆಯಿಸಿಕೊಂಡಿದ್ದರು. ತಮ್ಮ ಮನೆಯ ಗೇಟ್ ವರೆಗೂ ಬಂದು, ರಿಷಬ್ (Rishabh Shetty) ಅವರನ್ನು ಬರಮಾಡಿಕೊಂಡಿದ್ದರು. ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ರಿಷಬ್ ಜೊತೆ ಮಾತನಾಡಿ, ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ನಡುವೆ ರಿಷಬ್ ಅವರನ್ನು ಬೀಳ್ಕೊಡುವಾಗ ಚಿನ್ನದ ಸರ ಮತ್ತು ಬಾಬಾ ಇರುವಂತಹ ಲಾಕೆಟ್ ಕೊಟ್ಟಿದ್ದಾರೆ.
ರಜನಿ ತಮ್ಮ ಗುರುಗಳಾದ ಬಾಬಾ ಅವರನ್ನು ಅತೀ ಹೆಚ್ಚು ಪೂಜಿಸುತ್ತಾರೆ. ಬಾಬಾ ಅವರ ಕೈ ಬೆರಳಿನ ಸಿಂಬಲ್ ಇರುವಂತಹ ಲಾಕೆಟ್ ಗಳನ್ನು ರೆಡಿ ಮಾಡಿಸಿಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಯಾರಾದರೂ ಮೆಚ್ಚುವಂತಹ ಕೆಲಸ ಮಾಡಿದಾಗ, ಅವರನ್ನು ಕರೆದು ಲಾಕೆಟ್ ನೀಡುತ್ತಾರೆ. ಈಗ ಲಾಕೆಟ್ ಪಡೆಯುವಂತಹ ಅದೃಷ್ಟ ರಿಷಬ್ ಪಾಲಾಗಿದೆ. ಬಾಬಾ ಇರುವಂತಹ ಚಿನ್ನದ ಲಾಕೆಟ್ ರಿಷಬ್ ಕೊರಳನ್ನು ಅಲಂಕರಿಸಿದೆ.