Bengaluru CityCinemaDistrictsKarnatakaLatestMain PostSandalwood

`ಬನಾರಸ್’ ಚಿತ್ರದ ಬೆನ್ನಲ್ಲೇ ಝೈದ್ ಖಾನ್‌ಗೆ ಬಂತು ಬಿಗ್ ಆಫರ್

ನ್ನಡ ಚಿತ್ರರಂಗದ ಭರವಸೆಯ ನಟನಾಗಿ ಸದ್ದು ಮಾಡುತ್ತಿರುವ ಝೈದ್ ಖಾನ್(Zaid Khan) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. `ಬನಾರಸ್’ ಚಿತ್ರದ ಬೆನ್ನಲ್ಲೇ ಝೈದ್ ಖಾನ್‌ಗೆ ಒಂದೊಳ್ಳೆಯ ಅವಕಾಶಗಳು ಅರಸಿ ಬರುತ್ತಿದೆ. `ಬನಾರಸ್’ (Banaras) ನಂತರ ಯಾರ ಜೊತೆ ಕೈಜೋಡಿಸಲಿದ್ದಾರೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ.

ಇತ್ತೀಚೆಗಷ್ಟೇ ಬನಾರಸ್ ಚಿತ್ರ ರಿಲೀಸ್ ಆಗಿತ್ತು. ಝೈದ್ ಖಾನ್ ಮತ್ತು ಸೋನಾಲ್ ಜೋಡಿಯಾಗಿ ನಟಿಸಿ ಮೋಡಿ ಮಾಡಿದ್ದರು. `ಕಾಂತಾರ'(Kantara) ಮತ್ತು `ಗಂಧದಗುಡಿ'(Gandadagudi) ಚಿತ್ರಗಳ ಮಧ್ಯೆ ಝೈದ್ ನಟಿಸಿದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಮೊದಲ ಚಿತ್ರದಲ್ಲೇ ಝೈದ್ ಸೈ ಎನಿಸಿಕೊಂಡಿದ್ದಾರೆ. ಮಾಜಿ ಶಾಸಕ ಜಮೀರ್ ಅಹ್ಮದ್(Jameer Ahamad) ಮಗನ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ.

ಬನಾರಸ್ ಚಿತ್ರಕ್ಕೆ ಝೈದ್ ನಟನೆಗೆ ಸಿನಿಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. `ಬನಾರಸ್’ ಚಿತ್ರದ ಬೆನ್ನಲ್ಲೇ ಸ್ಟಾರ್ ನಿರ್ದೇಶಕ ಎ.ಹರ್ಷ ಜೊತೆ ಝೈದ್ ಕೈಜೋಡಿಸಿದ್ದಾರೆ. ಶಿವಣ್ಣ ಸಿನಿಮಾಗಳಿಗೆ ಡೈರೆಕ್ಷನ್ ಮಾಡಿರುವ ನಿರ್ದೇಶಕ ಹರ್ಷ ವೇದಾ ಚಿತ್ರದ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಈ ಚಿತ್ರದ ರಿಲೀಸ್ ಬಳಿಕ ಅಧಿಕೃತವಾಗಿ ಸಿನಿಮಾ ಅನೌನ್ಸ್ ಆಗಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಕೊನೆಗೂ ಮದುವೆ ವಿಚಾರ ರಿವೀಲ್ ಮಾಡಿದ್ರು ತಮಿಳು ನಟ ವಿಶಾಲ್

 

View this post on Instagram

 

A post shared by Zaid Khan (@urszaidkhan)

ಝೈದ್ ಖಾನ್ ಪೂರ್ಣವಾಗಿ ತಮ್ಮನ್ನ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಾರೋ ಅಥವಾ ರಾಜಕೀಯದತ್ತ ನಟ ಮುಖ ಮಾಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

Live Tv

Leave a Reply

Your email address will not be published. Required fields are marked *

Back to top button