ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶಿಸಿದ `ಕಾಂತಾರ’ (Kantara) ಸಿನಿಮಾ ಎರಡನೇ ವಾರವೂ ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದೆ. ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಎರಡನೇ 4.50 ಕೋಟಿ ಕಲೆಕ್ಷನ್ ಮಾಡಿ, ದಾಖಲೆ ಬರೆದಿದೆ.
Advertisement
ರಿಷಬ್ ಶೆಟ್ಟಿ, ಸಪ್ತಮಿ ಗೌಡ (Saptami Gowda) ನಟನೆಯ `ಕಾಂತಾರ’ ಪರಭಾಷೆಯ ಸಿನಿಮಾಗಳಿಗೆ ಸೆಡ್ಡು ಹೊಡೆದು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ದಶದಿಕ್ಕುಗಳಲ್ಲೂ `ಕಾಂತಾರ'(Kantara Film) ಚಿತ್ರದ ಹೆಸರು ಕೇಳಿ ಬರುತ್ತಿದೆ. ಇದೀಗ ಎರಡನೇ ವಾರ ಕೂಡ 4.50 ಕೋಟಿ ಗಳಿಸಿದೆ. ʻಕಾಂತಾರʼ ಒಟ್ಟು ಗಲ್ಲಾಪೆಟ್ಟಿಗೆ ಕಲೆಕ್ಷನ್ 48.50 ಕೋಟಿ ರೂ. ದಾಟಿದೆ. ಇದೀಗ 50 ಕೋಟಿ ಕಲೆಕ್ಷನ್ ಮಾಡುವತ್ತ ಸಿನಿಮಾ ಮುನ್ನುಗ್ಗುತ್ತಿದೆ. ಇದನ್ನೂ ಓದಿ:‘ಗಂಧದ ಗುಡಿ’ ಪ್ರಿ ರಿಲೀಸ್ ಇವೆಂಟ್ : ಅಮಿತಾಭ್, ರಜನಿ ಸೇರಿ ಗಣ್ಯರಿಗೆ ಆಹ್ವಾನ
Advertisement
Advertisement
ಇನ್ನೂ ಕರ್ನಾಟಕದಲ್ಲಿ 46.30 ಕೋಟಿ ಕಲೆಕ್ಷನ್ ಮಾಡಿದ್ರೆ, ಭಾರತದ ಉಳಿದ ಭಾಗದಲ್ಲಿ 2.20 ಕೋಟಿ ಕಲೆಕ್ಷನ್ ಮಾಡಿದೆ. ಈ ವಾರ `ಕಾಂತಾರ’ ಸಿನಿಮಾ ಹಿಂದಿ ಮತ್ತು ತೆಲುಗಿನಲ್ಲೂ ರಿಲೀಸ್‌ಗೆ ರೆಡಿಯಾಗಿದೆ. ಇನ್ನೂ ಕಾಂತಾರಾ ಎರಡನೇ 4.50 ಕೋಟಿ ಗಳಿಸಿದೆ.
Advertisement
`ಕಾಂತಾರ’ ದೈವದ ಅಪರೂಪದ ಕಥೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲೂ ರೇಸ್ ಸ್ಪೀಡ್ ಹೆಚ್ಚುತ್ತಲೇ ಇದೆ. ಇನ್ನೂ 100 ಕೋಟಿ ಕ್ಲಬ್ ಸೇರುವ ದಿನ ದೂರವಿಲ್ಲ.