ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ಸ್ವಾಗತಿಸಿ ಅದರ ಬಗ್ಗೆ ಜನಜಾಗೃತಿ ಮೂಡಿಸಲು ಕಲಬುರಗಿ ನ್ಯಾಷನಲ್ ಮೆಡಿಕೊಸ್ ಸಂಘಟನೆ ಜನವರಿ 25ರಂದು ಕಲಬುರಗಿ ನಗರದಲ್ಲಿ ರ‍್ಯಾಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘಟನೆಯ ಸದಸ್ಯೆ ಡಾ.ಪ್ರತಿಮಾ ಕಾಮರೆಡ್ಡಿ ಹಾಗೂ ಸಂಘಟಕರು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಈಗಾಗಲೇ ಈ ಕಾಯ್ದೆ ಸಂಸತ್ತಿನ ಎರಡು ಮನೆಯಲ್ಲಿ ಪಾಸಾಗಿ ಈಗಾಗಲೆ ದೇಶದಾದ್ಯಂತ ಜಾರಿಯಾಗಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಆದರೆ ಕೆಲವರು ಈ ಕಾಯ್ದೆ ಕುರಿತು ಅನಾವಶ್ಯಕ ರಾಜಕಾರಣ ಮಾಡುತ್ತ ಅಲ್ಪಸಂಖ್ಯಾತರು ಇದನ್ನು ವಿರೋಧಿಸುವಂತೆ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಈ ಕಾಯ್ದೆಯ ನಿಜಾಂಶ ಜನರಿಗೆ ತಿಳಿಯುವ ಅವಶ್ಯಕತೆಯಿದ್ದು, ಇದಕ್ಕೆ ನಮ್ಮ ಹಲವು ವೈದ್ಯರು ಸಾಥ್ ನೀಡಿದ್ದಾರೆ. ಇದರ ಬಗ್ಗೆ ಜಾಗೃತಿಗಾಗಿ ವೈದ್ಯರೆಲ್ಲ ರಸ್ತೆಗಿಳಿದು ಸಿಎಎ ಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ. ಅದರ ಮೊದಲ ಭಾಗವಾಗಿ ಜನವರಿ 25 ರಂದು ರ‍್ಯಾಲಿ ನಡೆಸಲಾಗುತ್ತಿದ್ದು, ನಗರದ ನಗರದ ವಲ್ಲಭಭಾಯಿ ಪಟೇಲ್ ಸರ್ಕಲ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ರ್ಯಾಲಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Advertisement
Advertisement
ಈ ರ‍್ಯಾಲಿಗೇ ಆರೋಗ್ಯ ಭಾರತ, ಮೆಡಿವಿಷನ್, ಆಯುಷ್ ಡಾಕ್ಟರ್ಸ್ ಫೆಡರೇಶನ್, ಫಾರ್ಮಸಿ ವಿಭಾಗ, ನರ್ಸಿಂಗ್ ವಿಭಾಗದ ಸುಮಾರು 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವೈದ್ಯರು ಭಾಗವಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಸಿಎಎಗೆ ಬೆಂಬಲಿಸುವ ಮನವಿ ಪತ್ರ ನೀಡಲಾಗುವುದು. ಜೊತೆಗೆ ಈಗಾಗಲೇ ಕೆಲವೊಂದು ವೈದ್ಯರ ತಂಡ ಸಿಎಎ ವಿರುದ್ಧವಾಗಿ ಪ್ರತಿಭಟನೆ ಮಾಡಿದೆ ಅದರಲ್ಲಿ ಮೆಡಿಕಲ್ ಫೆಟರ್ನಿಟಿ ಎಲ್ಲರ ವಿರೋಧವಿದೆ ಎಂದು ಹೇಳಿಕೆ ನೀಡಲಾಗಿದೆ. ಆದರೆ ಜಿಲ್ಲೆಯ ಸಾವಿರಾರು ವೈದ್ಯರು ಸಿಎಎಗೆ ಬೆಂಬಲ ನೀಡಿದ್ದಾರೆ. ಕೇಂದ್ರ ಸರ್ಕಾರ ದೇಶದ ಭದ್ರತೆ ಹಾಗೂ ಐಕ್ಯತೆ ಸಾರಲು ಈ ಸಿಎಎ ಜಾರಿಮಾಡಲಾಗಿದೆ ಎಂದು ಕರ್ನಾಟಕ ನ್ಯಾಷನಲ್ ಮೆಡಿಕೊಸ್ ಸಂಘಟನೆಯ ಉತ್ತರ ಕರ್ನಾಟಕ ವಿಭಾಗದ ಕಾರ್ಯದರ್ಶಿಗಳಾದ ಡಾ.ಕುಮಾರ್ ಅಂಗಡಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.