CrimeLatestMain PostNational

ಕುಲ್ಗಾಮ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ದಾಳಿಯಲ್ಲಿ ಇಬ್ಬರು ಅಪರಿಚಿತ ಉಗ್ರರು ಸಾವನ್ನಪ್ಪಿದ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ರೆಡ್ವಾನಿ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಮತ್ತೇ ಗುಂಡಿನ ಚಕಾಮಕಿ ನಡೆದಿದೆ. ಈ ಬಗ್ಗೆ ಕಾಶ್ಮೀರ ವಲಯದ ಪೊಲೀಸರು ಅಧಿಕೃತವಾಗಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ನಲ್ಲೇನಿದೆ?: ಭದ್ರತಾ ಸಿಬ್ಬಂದಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಅವರ ಬಳಿಯಿದ್ದ ಶಸ್ತ್ರಾಸ್ತ್ರ ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಯಾವ ಉಗ್ರರ ಗುಂಪಿಗೆ ಸೇರಿದ್ದರು, ಇವರ ಹೆಸರೇನು ಎನ್ನುವುದರ ಬಗ್ಗೆ ತನಿಖೆ ಪ್ರಾರಂಭವಾಗಿದೆ ಎಂದು ತಮ್ಮ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ತಂದೆ ಸಾವಿನಿಂದ ಮನನೊಂದು 4 ತಿಂಗಳ ಬಳಿಕ ಮಗಳು ಆತ್ಮಹತ್ಯೆ

ಇತ್ತೀಚೆಗೆ ಕಾಶ್ಮೀರದ ಪೂಂಚ್‌ನ ಸುರನ್ ಕೋಟ್ ಪ್ರದೇಶದಲ್ಲಿ ಮೋಸ್ಟ್ ವಾಂಟೆಡ್ ಪಾಕಿಸ್ತಾನಿ ಭಯೋತ್ಪಾದಕ ಅಬು ಜರಾನ್ ನನ್ನು ಹತ್ಯೆ ಮಾಡಿರುವುದಾಗಿ ಭಾರತೀಯ ಸೇನೆ ಹೇಳಿಕೊಂಡಿತ್ತು. ಇದನ್ನೂ ಓದಿ: ಹೆದ್ದಾರಿಯಲ್ಲೇ ಹೊತ್ತಿ ಉರಿದ 22 ಮಂದಿ ಪ್ರಯಾಣಿಕರಿದ್ದ ಬಸ್!

ಸದ್ಯ ಸ್ಥಳೀಯರ ಬೆಂಬಲದಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ. ಒಂದೆಡೆ ರಕ್ಷಣಾ ಪಡೆ ಸಿಬ್ಬಂದಿ ಜೀವವೂ ಹೋಗುತ್ತಿದ್ದು, ಇನ್ನೊಂದೆಡೆ ಭಯೋತ್ಪಾದಕರನ್ನು ಹೆಡೆಮುರಿಕಟ್ಟುತ್ತಿದ್ದಾರೆ.

Leave a Reply

Your email address will not be published.

Back to top button