ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ಇಂದು ಸಹ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ (ಜೂ.4) 3 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗಲಿದೆ. ಗದಗ, ಮೈಸೂರು ಸೇರಿ ಎಂಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಬೆಂಗಳೂರಿನಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ
ಬೆಂಗಳೂರು: 30-22
ಮಂಗಳೂರು: 29-26
ಶಿವಮೊಗ್ಗ: 29-23
ಬೆಳಗಾವಿ: 29-23
ಮೈಸೂರು: 30-23

ಮಂಡ್ಯ: 31-23
ಮಡಿಕೇರಿ: 24-21
ರಾಮನಗರ: 31-23
ಹಾಸನ: 27-22
ಚಾಮರಾಜನಗರ: 32-23
ಚಿಕ್ಕಬಳ್ಳಾಪುರ: 32-22
ಕೋಲಾರ: 32-22
ತುಮಕೂರು: 32-22
ಉಡುಪಿ: 30-26
ಕಾರವಾರ: 31-27
ಚಿಕ್ಕಮಗಳೂರು: 32-22
ದಾವಣಗೆರೆ: 32-26

ಹುಬ್ಬಳ್ಳಿ: 32-23
ಚಿತ್ರದುರ್ಗ: 32-23
ಹಾವೇರಿ: 32-24
ಬಳ್ಳಾರಿ: 36-26
ಗದಗ: 33-23
ಕೊಪ್ಪಳ: 34-24
ರಾಯಚೂರು: 37-27
ಯಾದಗಿರಿ: 38-27
ವಿಜಯಪುರ: 36-25
ಕಲಬುರಗಿ: 37-26
ಬಾಗಲಕೋಟೆ: 35-24













