ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ (TMC) ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ದೊಡ್ಡ ಬಿರುಕು ಸೃಷ್ಟಿಯಾಗುತ್ತಿದೆ. ವಿಧಾನಸಭಾ ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಪಕ್ಷದಿಂದ ಉಚ್ಛಾಟಿಸಲಾಗಿದ್ದ ರಿತಬ್ರತ ಬ್ಯಾನರ್ಜಿ (Ritabrata Banerjee) ಮತ್ತು ಸಂದೀಪನ್ ಸಾಹಾ (Sandipan Saha) ನಮಗೆ 60 ಶಾಸಕರ ಬೆಂಬಲ ಸಿಕ್ಕಿದೆ ಎನ್ನಲಾಗ್ತಿದೆ.
ನನಗೆ ವಿಪಕ್ಷ ನಾಯಕನ ಸ್ಥಾನ ಸಿಕ್ಕಿದೆ ಅಂದಿದ್ದಾರೆ. ಅಲ್ಲದೇ, ಮಮತಾ ಬ್ಯಾನರ್ಜಿ ಅವರೇ ನಮ್ಮ ಅಧಿನಾಯಕಿ, ಅವರೇ ನಮ್ಮ ಮುಖ್ಯ ಸಲಹೆಗಾರರು. ಪಕ್ಷವನ್ನ ಇಬ್ಭಾಗ ಮಾಡುವ ಯಾವುದೇ ಉದ್ದೇಶ ನನಗೆ ಇಲ್ಲ ಅಂದಿದ್ದಾರೆ. ಇದನ್ನೂ ಓದಿ: ಶಿವಸೇನೆ ಆಯ್ತು, ಈಗ ಟಿಎಂಸಿ ಸರದಿ – ದೀದಿ ಹೊರಗಿಟ್ಟು ಅಸಲಿ ಟಿಎಂಸಿ ರಚನೆಗೆ 50ಕ್ಕೂ ಹೆಚ್ಚು ಶಾಸಕರ ನಿರ್ಧಾರ

ಜೊತೆಗೆ, ಅಭಿಷೇಕ್ ಬ್ಯಾನರ್ಜಿಗೂ ವಿಧಾನಸಭೆಗೂ (Vidhan Sabhe) ಸಂಬಂಧ ಇಲ್ಲ. ಇದು ನಾನೊಬ್ಬನೇ ತೆಗೆದುಕೊಂಡಿರುವ ನಿರ್ಧಾರ ಅಲ್ಲ. 60 ಶಾಸಕರೂ ಸೇರಿ ತೆಗೆದುಕೊಂಡಿರುವ ನಿರ್ಧಾರ ಅಂತ ಹೇಳಿದ್ದಾರೆ.
ಅಂದಹಾಗೇ, ರಿತಬ್ರತ ಬ್ಯಾನರ್ಜಿಗೆ ವಿನಾಯಕ ಸ್ಥಾನ ಕೊಡ್ಬೇಕು ಅಂತ ಸ್ಪೀಕರ್‌ಗೆ 58 ಶಾಸಕರ ಸಹಿ ಇರುವ ಪತ್ರವನ್ನು ಸಲ್ಲಿಸಲಾಗಿತ್ತು. ಈ ಸಹಿಗಳು ಫೋರ್ಜರಿ ಆಗಿವೆ ಅಂತ ಆರೋಪದ ಬೆನ್ನಲ್ಲೇ ರಿತಬ್ರತ ಬ್ಯಾನರ್ಜಿ ಇಂದು ಸ್ಪಷ್ಟನೆ ನೀಡಿದ್ದಾರೆ. ಈ ಮಧ್ಯೆ, ಟಿಎಂಸಿ ನಾಟಕಕ್ಕೆ ಅಂತ್ಯವಿಲ್ಲ ಎಂಬಂತೆ ಸಿಎಂ ಸುವೇಂಧು ಅಧಿಕಾರಿ ಅಧ್ಯಕ್ಷತೆಯಲ್ಲಿ ನಬನ್ನಾದಲ್ಲಿ ನಡೆದ ಆಡಳಿತ ಪರಿಶೀಲನಾ ಸಭೆಯಲ್ಲಿ 18 ಟಿಎಂಸಿ ಶಾಸಕರು ಭಾಗಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿಯಿಂದ ಇಬ್ಭಾಗ: ದೀದಿ
ಅಭಿಷೇಕ್ ಬ್ಯಾನರ್ಜಿ ಹಾಗೂ ಕಲ್ಯಾಣ್ ಬ್ಯಾನರ್ಜಿ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಟಿಎಂಸಿಯನ್ನು ವಿಭಜಿಸಲು ದೆಹಲಿಯಿಂದ ಬಿಜೆಪಿ ಪಿತೂರಿ ರೂಪಿಸಲಾಗಿದೆ. ಆದರೆ ನಾವು ಅದನ್ನು ಮಾಡಲು ಬಿಡುವುದಿಲ್ಲ, ಬದಲಾಗಿ ಹೋರಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ನೂತನ ಸಿಎಂ ಡಿಕೆ ಶಿವಕುಮಾರ್‌ಗೆ ಪ್ರಧಾನಿ ಮೋದಿ, ಹೆಚ್‌ಡಿಕೆ ಶುಭಾಶಯ
