-ಪ್ರತಿಭಟನೆಯಲ್ಲಿದ್ದ ವಿದ್ಯಾರ್ಥಿ ಸಂಘಟನೆಗಳ ನಾಯಕರ ಮೇಲೂ ಕೇಸ್
ರಾಂಚಿ: ಆ.21ರಂದು ರಾಂಚಿಯಲ್ಲಿ ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ (JPSC-JSSC) ಪರೀಕ್ಷಾರ್ಥಿಗಳ ಪ್ರತಿಭಟನೆಯಲ್ಲಿ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡೆದ ಸಂಘರ್ಷದಲ್ಲಿ 200 ಅಪರಿಚಿತರ ವಿರುದ್ಧ ಇದೀಗ ಎಫ್‌ಐಆರ್ (FIR) ದಾಖಲಾಗಿದೆ.
ಶನಿವಾರ (ಆ.22) ಮೂರು ಎಫ್‌ಐಆರ್ ದಾಖಲಾಗಿದ್ದು, 14 ಜನರ ಹೆಸರು ಉಲ್ಲೇಖಿಸಿ ಮತ್ತು 200ಕ್ಕೂ ಹೆಚ್ಚು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಆರೋಪದ ಮೇಲೆ ರಾಂಚಿಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್‌ಗಳು ದಾಖಲಾಗಿವೆ. ಇದನ್ನೂ ಓದಿ: ʻಮೀಸಲಾತಿ ಹಠಾವೋ ಆಂದೋಲನʼ ಬೇಡಿಕೆಗಳ ಕುರಿತು ಚರ್ಚಿಸಲು ಕೇಂದ್ರ ಒಪ್ಪಿದೆ – ಪ್ರತಿಭಟನಾಕಾರರ ಹೇಳಿಕೆ
ದಾಖಲಾದ ಎಫ್‌ಐಆರ್‌ನಲ್ಲಿ ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ರಿಫಾರ್ಮ್ಸ್ ಮಂಚ್‌ನ ನಾಯಕರಾದ ಕುನಾಲ್ ಪ್ರತಾಪ್ ಸಿಂಗ್, ಪಿಯೂಷ್ ಕುಮಾರ್ ಮತ್ತು ರವೀಂದ್ರ ಪಾಸ್ವಾನ್ ಅವರನ್ನು ಉಲ್ಲೇಖಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ರಾಂಚಿಯಲ್ಲಿ ಶುಕ್ರವಾರ (ಆ.21) ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ಹಾಗೂ ಘರ್ಷಣೆ ಏರ್ಪಟ್ಟಿತ್ತು. ಈ ವೇಳೆ ಪ್ರತಿಭಟನಾಕಾರರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕೃತಿಗಳನ್ನು ದಹಿಸಲು ಯತ್ನಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: `ವಂದೇ ಮಾತರಂ’ 2 ಚರಣಗಳನ್ನಷ್ಟೇ ಹಾಡಲು ನಿರ್ಧಾರ – ಕಾಂಗ್ರೆಸ್ ನಿಲುವು ಖಂಡಿಸಿದ ಬಿಜೆಪಿ
ಇದೇ ವೇಳೆ ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿದೆ ಮತ್ತು ದ್ರೋಹ ಬಗೆದಿದೆ ಎಂದು ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ರಿಫಾರ್ಮ್ಸ್ ಮಂಚ್ ಬ್ಯಾನರ್ ಅಡಿಯಲ್ಲಿ ವಿದ್ಯಾರ್ಥಿ ನಾಯಕರು ಆರೋಪಿಸಿದ್ದಾರೆ.
ಹಲವು ನೇಮಕಾತಿ ರದ್ದುಗೊಳಿಸಿದ್ದ ಅಧಿಸೂಚನೆಗಳಿಗೆ ತಡೆ ನೀಡಿದ್ದ ಕೋರ್ಟ್:
ಆ.21ರಂದು ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿಗಳ (ಸಿಡಿಪಿಒ) ಮತ್ತು ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆಯ ಮೂಲಕ ನೇಮಕಗೊಂಡವರ ನೇಮಕಾತಿಗಳನ್ನು ರದ್ದುಗೊಳಿಸಿದ್ದ ಅಧಿಸೂಚನೆ, ಆ.20ರಂದು 11 ಮತ್ತು 13ನೇ ಜಾರ್ಖಂಡ್ ಲೋಕಸೇವಾ ಆಯೋಗದ (ಜೆಪಿಎಸ್‌ಸಿ) ಪರೀಕ್ಷೆಗಳನ್ನು ರದ್ದುಗೊಳಿಸಿದ್ದ ಅಧಿಸೂಚನೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳ ನೇಮಕಾತಿಯನ್ನು ರದ್ದುಪಡಿಸಿದ್ದ ಆದೇಶಕ್ಕೂ ಹೈಕೋರ್ಟ್ ತಡೆ ನೀಡಿತ್ತು.ಇದನ್ನೂ ಓದಿ: ಯುವ ಮತದಾರರತ್ತ ಬಿಜೆಪಿ ಚಿತ್ತ – ‘Gen Z’ ಸಂಪರ್ಕಕ್ಕೆ ವಿಶೇಷ ತಂಡ

