ನವದೆಹಲಿ: ಜಾತಿ ಆಧಾರಿತ ಮೀಸಲಾತಿಗೆ ಸಂಬಂಧಿಸಿದ ತಮ್ಮ ಬೇಡಿಕೆಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ʻಮೀಸಲಾತಿ ಹಠಾವೋ ಆಂದೋಲನʼ (Reservation Hatao Andolan) ಪ್ರತಿಭಟನಾಕಾರರು ಶನಿವಾರ (ಇಂದು) ಹೇಳಿಕೊಂಡಿದ್ದಾರೆ.
ಕೇಂದ್ರ ಸಚಿವರು ವೈಯಕ್ತಿಕವಾಗಿ ಪ್ರತಿಭಟನಾಕಾರರನ್ನ (Protesters) ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಗುಂಪು ಹೇಳಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಮೀಸಲಾತಿ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಪ್ರತಿಭಟನೆ ಸಂದರ್ಭದಲ್ಲಿ ದೆಹಲಿ ಪೊಲೀಸರು (Delhi Police) ಹಲವರನ್ನು ವಶಕ್ಕೆ ಪಡೆದುಕೊಂಡಿದ್ದರು.
सरकार ने आरक्षण सुधार आंदोलन के कार्यकर्ताओं की मांगों पर चर्चा के लिए सहमति जताई है। हर्ष भाई ने बताया है कि एक केंद्रीय मंत्री स्वयं आंदोलनकारियों के साथ बातचीत करेंगे।
उम्मीद है कि @ajeetbharti, @neha_laldas, @ARanganathan72 आदि को भी इस चर्चा में शामिल किया जाएगा। वे अपने…
— Reservation Hatao Andolan (RHA) (@WokeFuneral) August 22, 2026
ಇದರ ಬೆನ್ನಲ್ಲೇ RHA, ಮೀಸಲಾತಿ ಸುಧಾರಣಾ ಚಳವಳಿಯ ಕಾರ್ಯಕರ್ತರ ಬೇಡಿಕೆಗಳ ಕುರಿತು ಚರ್ಚಿಸಲು ಸರ್ಕಾರ ಒಪ್ಪಿಕೊಂಡಿದೆ. ಕೇಂದ್ರ ಸಚಿವರು ಪ್ರತಿಭಟನಾಕಾರರೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸುತ್ತಾರೆ ಎಂದು ಹರ್ಷ್ ಭಾಯ್ ತಿಳಿಸಿದ್ದಾರೆ ಎಂದು ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಬಲಪಂಥೀಯ ಪ್ರಭಾವಿ ಅಜೀತ್ ಭಾರ್ತಿ ಮತ್ತು ಆನಂದ್ ರಂಗನಾಥನ್ ಸೇರಿದಂತೆ ಇತರರು ಪ್ರಸ್ತಾವಿತ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಇವರು ತಮ್ಮ ವಾದ ಮತ್ತು ದತ್ತಾಂಶಗಳ ಮೂಲಕ ಈ ವಿಷಯಗಳನ್ನು ಹೆಚ್ಚಿನ ಸ್ಪಷ್ಟತೆ ಮತ್ತು ಬಲದೊಂದಿಗೆ ಪ್ರಸ್ತುತಪಡಿಸಬಹುದು ಎಂದಿದೆ. ಆದಾಗ್ಯೂ ಈ ಆಂದೋಲನ ಇನ್ನೂ ಮಗಿದಿಲ್ಲ, ಮುಂದುವರಿಯುತ್ತದೆ ಎಂದು ಗುಂಪು ಹೇಳಿಕೊಂಡಿದೆ.
ಪ್ರತಿಭಟನಾಕಾರರ ಬೇಡಿಕೆಗಳೇನು?
* ವಿದ್ಯಾರ್ಥಿವೇತನಗಳು, ಶಿಕ್ಷಣ ಮತ್ತು ತರಬೇತಿ ಬೆಂಬಲ ಸೇರಿದಂತೆ ಸರ್ಕಾರಿ ಸಹಾಯಕ್ಕಾಗಿ ಅರ್ಹತೆ ನಿರ್ಧರಿಸುವಲ್ಲಿ ಆರ್ಥಿಕ ಪರಿಸ್ಥಿತಿಗಳು ಹೆಚ್ಚಿನ ಪ್ರಾಮುಖ್ಯತೆ ಹೊಂದಿರಬೇಕು.
* ಮೀಸಲಾತಿ ಪ್ರಯೋಜನಗಳು ಮೀಸಲು ಸಮುದಾಯಗಳಲ್ಲಿನ ಫಲಾನುವಿಗಳಿಗೇ ತಲುಪುತ್ತಿದೆಯೇ ಎಂಬುದನ್ನ ಖಚಿತಪಡಿಸಿಕೊಳ್ಳಲು ಕೋಟಾದೊಳಗೆ ಕೋಟಾ ತರಬೇಕು.
* ಕಳೆದ ಎಂಟು ದಶಕಗಳಲ್ಲಿ ಮೀಸಲಾತಿ ವ್ಯವಸ್ಥೆಯ ಪರಿಣಾಮವನ್ನ ನಿರ್ಣಯಿಸುವ ಶ್ವೇತಪತ್ರ ಹೊರಡಿಸಬೇಕು.
* ಶೈಕ್ಷಣಿಕ ಗುಣಮಟ್ಟದಲ್ಲಿ ರಾಜಿ ಸಲ್ಲದು, IIT ಮತ್ತು IIM ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಕನಿಷ್ಠ ಅಂಕಗಳನ್ನ ನಿಗದಿಪಡಿಸಬೇಕು.

