ನವದೆಹಲಿ: ಮುಂಬರುವ 2027ರಲ್ಲಿ ನಡೆಯುವ 5ನೇ ಆವೃತ್ತಿ ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ವೇಳಾಪಟ್ಟಿ ಹಾಗೂ ಹರಾಜು ದಿನಾಂಕವನ್ನು WPL ಪ್ರಕಟಿಸಿದೆ.
ಈ ಕುರಿತು WPL ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಸೀಸನ್‌ನ ದಿನಾಂಕ ಹಾಗೂ ಹರಾಜು ನಡೆಯುವ ದಿನಾಂಕದ ಬಗ್ಗೆ ತಿಳಿಸಿದೆ. ಹರಾಜು (Auction) ಪ್ರಕ್ರಿಯೆ ಇದೇ ಅಕ್ಟೋಬರ್ 28ರಂದು ಕೇರಳದ (Kerala) ಕೊಚ್ಚಿಯಲ್ಲಿ (Kochi) ನಡೆಯಲಿದ್ದು, 2027ರ ಜನವರಿ 14ರಿಂದ ಫೆಬ್ರವರಿ 7ರವರೆಗೆ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದೆ. ಇದನ್ನೂ ಓದಿ: ಮೂರು ವರ್ಷಗಳ ಬಳಿಕ ಭಾರತದಲ್ಲಿ ಐಪಿಎಲ್ ಹರಾಜು?
🚨 News 🚨 #TATAWPL 2027 to be played from 14 January to 7 February 2027 🗓️
Player Auction to be held on 28 October 2026 in Kochi 📍
More details ▶️ https://t.co/tuEXkaaY6T pic.twitter.com/mjLcSOJawp
— Women’s Premier League (WPL) (@wplt20) September 16, 2026
ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ಸೆಪ್ಟೆಂಬರ್ 28ರವರೆಗೆ ಗಡುವು ನೀಡಲಾಗಿದೆ.
ಇದಕ್ಕೂ ಮುನ್ನ 2026ರ ಸೀಸನ್‌ನಲ್ಲಿ ಸ್ಮೃತಿ ಮಂಧಾನ (Smrithi Mandhana) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತಮ್ಮ ಎರಡನೇ WPL ಪ್ರಶಸ್ತಿಯನ್ನು ಗೆದ್ದು ಚಾಂಪಿಯನ್ ಆಗಿತ್ತು. ಕಳೆದ ನಾಲ್ಕು ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ (MI) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡಗಳು ತಲಾ ಎರೆಡೆರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ. ಇದನ್ನೂ ಓದಿ: ರಾಜ್ಯದ ಬರಪೀಡಿತ ತಾಲೂಕುಗಳ ರೈತರಿಗೆ ರಿಲೀಫ್ – ಈ ವರ್ಷ ಬಲವಂತದ ಸಾಲ ವಸೂಲಾತಿ ಇಲ್ಲ


