ಬೆಂಗಳೂರು: ಹೋಟೆಲ್, ಬೇಕರಿ ಬಳಿಕ ಈಗ ಪೆಟ್ರೋಲ್ ಬಂಕ್‌ಗಳಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. ರಾಜ್ಯದ 5,946 ಪೆಟ್ರೋಲ್ ಬಂಕ್‌ಗಳ ಪೈಕಿ, 805 ಬಂಕ್‌ಗಳ ಪರೀಕ್ಷೆ ನಡೆಸಲಾಗಿದ್ದು, 768 ಬಂಕ್‌ಗಳು ತೂಕ-ಅಳತೆಯಲ್ಲಿ ಅಕ್ರಮ ಮಾಡಿರೋದು ಗೊತ್ತಾಗಿದೆ.
ಬಂಕ್‌ಗಳ ವಂಚನೆ ಬಗ್ಗೆ ದೂರು ನೀಡಲು 18005991100 ಸಹಾಯವಾಣಿ ಆರಂಭಿಸಲಾಗಿದೆ. ಬಂಕ್‌ಗಳ ಮುಂದೆ ಟೋಲ್ ನಂಬರ್ ಪ್ರದರ್ಶಿಸುವುದು ಕಡ್ಡಾಯವಾಗಿದೆ.
ಈ ಮಧ್ಯೆ, ಬೆಂಗಳೂರಿನಲ್ಲಿ ಪೊಲೀಸರು ಜಪ್ತಿ ಮಾಡಿರುವ ವಾಹನಗಳನ್ನ ತೆರವು ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಪೊಲೀಸರು ಜಪ್ತಿ ಮಾಡಿ ಹಲವು ವರ್ಷ ಕಳೆದರೂ ವಾಹನಗಳನ್ನ ತೆಗೆದುಕೊಂಡು ಹೋಗುವುದಕ್ಕೆ ಜನ ಬಂದಿಲ್ಲ. ಇದರಿಂದ ಪೊಲೀಸ್ ಠಾಣೆ ಸುತ್ತಮುತ್ತ ಜನರು ಓಡಾಟಕ್ಕೆ ಕಿರಿಕಿರಿಯಾಗುತ್ತಿತ್ತು. ಹೀಗಾಗಿ ಅಂತಹ ವಾಹನಗಳನ್ನ ಸಾಗಿಸುವ ಅಭಿಯಾನಕ್ಕೆ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು.
ಒಟ್ಟು 11,346 ವಾಹನಗಳು ಪೊಲೀಸ್ ಠಾಣೆ ಆವರಣದಲ್ಲಿದ್ದು ಅವುಗಳನ್ನು ತೆರವು ಮಾಡಲಾಗುತ್ತಿದೆ.

