ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ (Nitin Nabin) ನೇತೃತ್ವದಲ್ಲಿ ರೂಪಿಸಿರುವ ತಂಡದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸ್ಮೃತಿ ಇರಾನಿ (Smriti Irani) ಮತ್ತು ವಿನೋದ್ ತಾವಡೆ ಸೇರಿದಂತೆ ಹಲವು ಪ್ರಮುಖ ನಾಯಕರು ಸ್ಥಾನ ಪಡೆದಿದ್ದಾರೆ. ಗುಜರಾತ್ ಸಚಿವ ಹರ್ಷ್ ಸಾಂಘ್ವಿ ಹಾಗೂ ಛತ್ತೀಸ್‌ಗಢ ಸಚಿವ ಒ.ಪಿ. ಚೌಧರಿ ಕೂಡ ತಂಡದ ಭಾಗವಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಟೇಲ್ ಇಂಪ್ಯಾಕ್ಟ್ – ಗೋರಖ್‌ಪುರದಲ್ಲಿ ಲ್ಯಾಂಡಿಂಗ್ ವೇಳೆ ರನ್‌ವೇಗೆ ತಾಗಿದ ಹಿಂಭಾಗ
आज भाजपा मुख्यालय में नवनियुक्त राष्ट्रीय पदाधिकारियों की बैठक की अध्यक्षता की।
असंख्या कार्यकर्ताओं के परिश्रम, त्याग और अनुशासन के बल पर ही आज संगठन इस ऊँचाई पर पहुँचा है।
माननीय प्रधानमंत्री श्री @narendramodi जी के ‘विकसित भारत 2047’ के संकल्प को साकार करने हेतु भाजपा के… pic.twitter.com/ZLFGt0QIjh
— Nitin Nabin (@NitinNabin) August 22, 2026
ದೇಶದಾದ್ಯಂತ ಯುವಜನರೊಂದಿಗೆ ನೇರ ಹಾಗೂ ನಿರಂತರ ಸಂವಾದ ನಡೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. Gen Z ಯುವಕರ ಆಕಾಂಕ್ಷೆಗಳು, ಸಮಸ್ಯೆಗಳು ಮತ್ತು ನಿರೀಕ್ಷೆಗಳನ್ನು ನೇರವಾಗಿ ತಿಳಿದುಕೊಳ್ಳುವುದು ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ. ಯುವಜನರು ಬಿಜೆಪಿ ನಾಯಕರೊಂದಿಗೆ ನೇರವಾಗಿ ಸಂವಾದ ನಡೆಸಿ, ತಮ್ಮ ಅಭಿಪ್ರಾಯ ಹಾಗೂ ಪ್ರಶ್ನೆಗಳನ್ನು ಮಂಡಿಸಲು ವೇದಿಕೆ ಕಲ್ಪಿಸುವ ಉದ್ದೇಶವನ್ನೂ ಪಕ್ಷ ಹೊಂದಿದೆ.
ಸಂವಾದ, ಚರ್ಚೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ಯುವ ಮತದಾರರನ್ನು ತಲುಪಲು ಬಿಜೆಪಿ ಮುಂದಾಗಿದೆ. ಹೊಸ ತಲೆಮಾರಿನೊಂದಿಗೆ ಪಕ್ಷದ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಯುವಜನರ ರಾಜಕೀಯ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಈ ಅಭಿಯಾನದ ಉದ್ದೇಶವಾಗಿದೆ.ಇದನ್ನೂ ಓದಿ: ಡಬಲ್ ಮರ್ಡರ್, ಸೂಸೈಡ್ ಪ್ರಕರಣಕ್ಕೆ ಟ್ವಿಸ್ಟ್ – 1 ಕೋಟಿ ಜೀವನಾಂಶ ಕೇಳಿದ್ದಕ್ಕೆ ಬಿತ್ತು ಮೂರು ಹೆಣ

Gen Z ಸಂಪರ್ಕ ಅಭಿಯಾನದ ನಿಖರ ವೇಳಾಪಟ್ಟಿ, ಕಾರ್ಯಕ್ರಮಗಳ ಸ್ವರೂಪ ಹಾಗೂ ಸ್ಥಳಗಳ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಈ ಬೆಳವಣಿಗೆ, ಮುಂಬರುವ ಚುನಾವಣಾ ಸವಾಲುಗಳ ಹಿನ್ನೆಲೆಯಲ್ಲಿ ಯುವ ಮತದಾರರತ್ತ ಬಿಜೆಪಿ ಹೆಚ್ಚಿನ ಗಮನ ಹರಿಸುತ್ತಿರುವುದರ ಸೂಚನೆಯಾಗಿದೆ.
ಇದೇ ವೇಳೆ, ನಿತಿನ್ ನಬೀನ್ ಅವರು ಶನಿವಾರ (ಆ.22) ಬಿಜೆಪಿಯ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸುವುದು ಮತ್ತು ಚುನಾವಣಾ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.ಇದನ್ನೂ ಓದಿ: 105 ವರ್ಷದ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿದ ಸುಪ್ರೀಂ

