– ತಕ್ಷಣ ವಿಮಾನವನ್ನು ಮೇಲಕ್ಕೆತ್ತಿ ಸಮಯಪ್ರಜ್ಞೆ ಮೆರೆದ ಪೈಲಟ್
ಲಕ್ನೋ: ದೆಹಲಿಯಿಂದ ಗೋರಖ್‌ಪುರಕ್ಕೆ (Gorakhpur) ಬರುತ್ತಿದ್ದ ಇಂಡಿಗೋ (Indigo) ವಿಮಾನದ ಹಿಂಭಾಗವು ಲ್ಯಾಂಡಿಂಗ್ ಆಗುವಾಗ ರನ್‌ವೇ ಟಚ್ ಆಗಿದೆ. ಕೂಡಲೇ ಪೈಲಟ್ ವಿಮಾನವನ್ನು ಮೇಲಕ್ಕೆತ್ತಿ ಸಮಯಪ್ರಜ್ಞೆ ಮೆರೆದಿದ್ದು, ಅವಾಂತರವೊಂದು ತಪ್ಪಿದೆ.
ಆ.19ರಂದು ನಡೆದ ಘಟನೆ ಇದೀಗ ತಡವಾಗಿ ಬೆಳೆಕಿಗೆ ಬಂದಿದೆ. ಇಂಡಿಗೋ ಏರ್‌ಲೈನ್ಸ್‌ನ ಏರ್‌ಬಸ್ A321neo ವಿಮಾನವು ದೆಹಲಿಯಿಂದ (Delhi) ಗೋರಖ್‌ಪುರಕ್ಕೆ ಬರುತ್ತಿತ್ತು. ಈ ವೇಳೆ ಗೋರಖ್‌ಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ವಿಮಾನದ ಬಲ ಹಿಂಭಾಗ ರನ್‌ವೇಗೆ ತಗುಲಿದೆ. ಪರಿಣಾಮ ಟೈಲ್ ಇಂಪ್ಯಾಕ್ಟ್‌ಗೊಂಡಿದೆ. ಇದನ್ನೂ ಓದಿ:ಡಬಲ್ ಮರ್ಡರ್, ಸೂಸೈಡ್ ಪ್ರಕರಣಕ್ಕೆ ಟ್ವಿಸ್ಟ್ – 1 ಕೋಟಿ ಜೀವನಾಂಶ ಕೇಳಿದ್ದಕ್ಕೆ ಬಿತ್ತು ಮೂರು ಹೆಣ
ಘಟನೆ ಬಳಿಕ ಸುರಕ್ಷತೆಯ ಹಿತದೃಷ್ಟಿಯಿಂದ ವಿಮಾನವು ಎರಡು ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದೆ. ಬಳಿಕ ಮಧ್ಯಾಹ್ನ 3:43ರ ಸುಮಾರಿಗೆ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಕೆಳಗೆ ಇಳಿದಿದ್ದು, ಬಳಿಕ ಸಾಮಾನ್ಯ ತಪಾಸಣೆಯ ವೇಳೆ ಇನ್‌ಲೆಟ್ ಸುತ್ತಲೂ ಗೀರಿದ ಗುರುತುಗಳು ಕಂಡುಬಂದಿವೆ. ಅಗತ್ಯ ತಪಾಸಣೆಯ ಬಳಿಕ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರನ್‌ವೇಗೆ ತಗುಲಿದ್ದು ಯಾಕೆ?
ಲ್ಯಾಂಡಿಂಗ್ ವೇಳೆಯಲ್ಲಿ ವಿಮಾನದ ಮುಂದಿನ ಭಾಗವನ್ನು ಅತಿಯಾಗಿ ಮೇಲಕ್ಕೆ ಎತ್ತಿದಾಗ, ಹಿಂಭಾಗವು ರನ್‌ವೇಗೆ ತಗುಲುವ ಸಾಧ್ಯತೆಯಿರುತ್ತದೆ. ಇಂಡಿಗೋ ವಿಮಾನವು ಲ್ಯಾಂಡಿಂಗ್ ಆಗುವಾಗ ಇದೇ ಸಮಸ್ಯೆ ಎದುರಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಸದ್ಯ ವಿಮಾನವು ಗೋರಖ್‌ಪುರದಲ್ಲಿದ್ದು, ಇಂದು ಕಾರ್ಯಾಚರಣೆಯನ್ನು ಪುನರಾರಂಭಿಸುವ ಸಾಧ್ಯತೆಯಿದೆ.
ಟೇಲ್ ಇಂಪ್ಯಾಕ್ಟ್ ಎಂದರೇನು?
ವಿಮಾನದ ಹಿಂದಿನ ತುದಿ ಅಥವಾ ಬಾಲದ ಭಾಗವು ರನ್‌ವೇಗೆ ಅಥವಾ ಬೇರೆ ಯಾವುದಾದರೂ ವಸ್ತುವಿಗೆ ತಾಗುವುದನ್ನು ಅಥವಾ ಘರ್ಷಣೆಯಾಗುವುದನ್ನು ಟೇಲ್ ಇಂಪ್ಯಾಕ್ಟ್ ಎನ್ನುತ್ತಾರೆ. ವಿಮಾನವು ಲ್ಯಾಂಡಿಂಗ್ ಆಗುವಾಗ ಅಥವಾ ಟೇಕ್‌ಆಫ್ ಆಗುವಾಗ ಮೂಗಿನ ಭಾಗವನ್ನು ಅತಿಯಾಗಿ ಮೇಲಕ್ಕೆ ಎತ್ತಿದರೆ, ವಿಮಾನದ ಹಿಂಭಾಗ ಅಥವಾ ಬಾಲದ ಕೆಳಭಾಗವು ನೆಲಕ್ಕೆ ಅಥವಾ ರನ್‌ವೇಗೆ ತಗಲುವ ಅಪಾಯವಿರುತ್ತದೆ. ಇದು ಕೇವಲ ರನ್‌ವೇಗೆ ತಗಲುವುದಷ್ಟೇ ಅಲ್ಲದೆ, ಕೆಲವೊಮ್ಮೆ ನೆಲದ ಮೇಲೆ ನಿಲ್ಲಿಸಿದಾಗ ವಿಮಾನದ ಹಿಂಭಾಗವು ಮೈಂಟೆನೆನ್ಸ್ ಪ್ಲಾಟ್‌ಫಾರ್ಮ್‌ಗಳು ಅಥವಾ ಇತರ ವಸ್ತುಗಳಿಗೆ ತಾಗಬಹುದು.ಇದನ್ನೂ ಓದಿ: 105 ವರ್ಷದ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿದ ಸುಪ್ರೀಂ

