ನವದೆಹಲಿ: ʻವಂದೇ ಮಾತರಂʼ (Vande Mataram) ಗೀತೆಯ ಮೊದಲ ಎರಡು ಚರಣಗಳನ್ನ ಮಾತ್ರ ಪಕ್ಷದ ಕಾರ್ಯಕ್ರಮಗಳಲ್ಲಿ ಹಾಡಬೇಕೆನ್ನುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಧಾರಕ್ಕೆ ಬಿಜೆಪಿ (BJP) ತೀವ್ರ ವಿರೋಧ ವ್ಯಕ್ತಪಡಿಸಿದೆ.
ಬಿಜೆಪಿಯ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಮೊದಲ ಸಭೆಯಲ್ಲಿ ಈ ನಿರ್ಧಾರವನ್ನು ಖಂಡಿಸುವ ಪ್ರಸ್ತಾವ ಅಂಗೀಕರಿಸಲಾಯಿತು. ‘ವಂದೇ ಮಾತರಂ’ನ ಗೌರವ, ಘನತೆ ಮತ್ತು ಐತಿಹಾಸಿಕ ಪರಂಪರೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಚುನಾವಣೆಗೂ ಮುನ್ನ ಯೋಗಿ ಸರ್ಕಾರ ಭದ್ರತಾ ಪ್ಲ್ಯಾನ್ – ಮಾಯಾವತಿ ಸೇರಿ 44 ನಾಯಕರಿಗೆ ಬುಲೆಟ್‌ಪ್ರೂಫ್ ಜಾಕೆಟ್

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ (Sambit Patra) ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 2026ರ ಆಗಸ್ಟ್ 15 ರಂದು ಕೆಂಪುಕೋಟೆಯಲ್ಲಿ ‘ವಂದೇ ಮಾತರಂ’ನ ಸಂಪೂರ್ಣ ಆವೃತ್ತಿಯನ್ನ ಹಾಡಲಾಗಿದ್ದರೂ, ಕಾಂಗ್ರೆಸ್ ಕಚೇರಿಯಲ್ಲಿ 2 ಚರಣಗಳ ಬಳಿಕ ಗೀತೆಯನ್ನ ನಿಲ್ಲಿಸಲಾಯಿತು ಎಂದು ಅವರು ಆರೋಪಿಸಿದರು. ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇದೇ ನಿಲುವನ್ನ ಮುಂದುವರಿಸಲು ನಿರ್ಧರಿಸಿದೆ ಎಂದು ಹೇಳಿದರು.
1937ರ ನಿರ್ಧಾರವೇ ವಿವಾದದ ಕೇಂದ್ರಬಿಂದು ಎಂದು ಹೇಳಿದ ಪಾತ್ರ, ಅಂದಿನ ಕಾಂಗ್ರೆಸ್ (Congress) ನಾಯಕತ್ವದ ನಿರ್ಧಾರದಿಂದ ‘ವಂದೇ ಮಾತರಂ’ನ ಗಾಯನವನ್ನ 2 ಚರಣಗಳಿಗೆ ಸೀಮಿತಗೊಳಿಸಲಾಗಿತ್ತು. ಈ ನಿರ್ಧಾರಕ್ಕೆ ಸಂಬಂಧಿಸಿದ ಐತಿಹಾಸಿಕ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್‌ನ ಇಂದಿನ ನಿಲುವು ‘ತುಷ್ಟೀಕರಣ ರಾಜಕೀಯ’ದ ಮುಂದುವರಿಕೆಯಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ರಾಜಸ್ಥಾನ ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ ಸಿಜೆಪಿ ನಾಯಕರಿಗೆ ಥಳಿತ – ಹೊಡೆದು ಬೆನ್ನಟ್ಟಿ ಓಡಿಸಿದ ಗ್ರಾಮಸ್ಥರು
ವಂದೇ ಮಾತರಂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷ್ ವಿರೋಧಿ ರಾಷ್ಟ್ರೀಯ ಚಳವಳಿಯ ಪ್ರಮುಖ ಘೋಷವಾಗಿತ್ತು. ಮಹಾತ್ಮ ಗಾಂಧೀಜಿಯವರು ಕೂಡ ಈ ಗೀತೆಯೊಂದಿಗೆ ಶುದ್ಧ ರಾಷ್ಟ್ರೀಯ ಭಾವನೆಯನ್ನ ಹೊಂದಿದ್ದಾಗಿ ಹೇಳಿದ್ದನ್ನು ಅವರು ಉಲ್ಲೇಖಿಸಿದರು.

