ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಇಂದು) ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ನೂತನ ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನ ಭೇಟಿ ಮಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರು ಗ್ರೂಪ್ ಫೋಟೋಗೂ ಪೋಸ್ ನೀಡಿದರು.
Organisational meetings are all about new ideas and perspectives aimed at strengthening the Party and deepening connect with the people.
Great interaction with fellow Party colleagues and the new organisational team!@BJP4India pic.twitter.com/Nq0gC6BoSu
— Narendra Modi (@narendramodi) August 22, 2026
ಪಕ್ಷದ ಹೊಸ ಸಂಘಟನಾ ವ್ಯವಸ್ಥೆ ಹಾಗೂ ಯುವಕೇಂದ್ರಿತ ಜನಸಂಪರ್ಕ ಕಾರ್ಯಕ್ರಮಗಳನ್ನ ಮತ್ತಷ್ಟು ವೇಗಗೊಳಿಸುವ ಸಿದ್ಧತೆಯ ನಡುವೆಯೇ ಈ ಸಭೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಪಕ್ಷದ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು.

ಗ್ರೂಪ್ ಫೋಟೋಗೆ ಮೋದಿ ಪೋಸ್
ನಿತಿನ್ ನಬಿನ್ ಅವರು ಈ ವಾರದ ಆರಂಭದಲ್ಲಿ ತಮ್ಮ ನೂತನ ತಂಡವನ್ನ ಘೋಷಿಸಿದ ಬಳಿಕ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ ನಡೆದ ಮೊದಲ ಸಭೆ ಇದಾಗಿದೆ. ಒಟ್ಟು 65 ಸದಸ್ಯರಿರುವ ನೂತನ ತಂಡದಲ್ಲಿ 51 ಮಂದಿ ಹೊಸದಾಗಿ ನೇಮಕಗೊಂಡಿದ್ದಾರೆ.
ಇದಕ್ಕೂ ಮುನ್ನ ನಿತಿನ್ ನಬಿನ್ ನೂತನ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಯುವಜನರೊಂದಿಗೆ ಪಕ್ಷದ ಸಂಪರ್ಕ ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ವಿಶೇಷವಾಗಿ ‘ಯುವ ಸಂವಾದ’ದ ಮೂಲಕ ಯುವಜನರೊಂದಿಗೆ ನಿರಂತರ ಸಂವಾದ ನಡೆಸುವಂತೆ ಅವರು ಕರೆ ನೀಡಿದರು.

