ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಅವರ ಹುಟ್ಟು ಹಬ್ಬದ ದಿನದಂದು ಬಿಡುಗಡೆ ಆಗುತ್ತಿದೆ. ಈಗಿನಿಂದಲೂ ಚಿತ್ರತಂಡ ಸರ್ವ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿನ ಮಜೆಸ್ಟಿಕ್ ಚಿತ್ರಮಂದಿರದಲ್ಲಿ 81 ಅಡಿ ಪುನೀತ್ ಅವರ ಕಟೌಟ್ ನಿಲ್ಲಿಸಲು ಚಿತ್ರತಂಡ ಹೊರಟಿದೆ. ಅಲ್ಲದೇ ನಾಡಿನ ಮೂಲೆ ಮೂಲೆಯಲ್ಲಿರುವ ಚಿತ್ರತಂದಿರಗಳಿಗೂ ಪುನೀತ್ ಅವರ ಕಟೌಟ್ ಕಳುಹಿಸಲಾಗುತ್ತಿದೆ. ಒಂದು ಲೆಕ್ಕದಲ್ಲೇ ಪುನೀತ್ ಹುಟ್ಟು ಹಬ್ಬವನ್ನು ಉತ್ಸವದ ರೀತಿಯಲ್ಲಿ ಮಾಡಲು ಹೊರಟಿದೆ ಜೇಮ್ಸ್ ಚಿತ್ರತಂಡ. ಇದನ್ನೂ ಓದಿ : ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್
Advertisement
ಪುನೀತ್ ನಟನೆಯ ಕೊನೆ ಸಿನಿಮಾ ಇದಾಗಿದ್ದರಿಂದ ಈ ಸಿನಿಮಾವನ್ನು ದಾಖಲೆಯ ರೀತಿಯಲ್ಲಿ ಪ್ರದರ್ಶಿಸಬೇಕು ಎನ್ನುವುದು ನಿರ್ದೇಶಕ ಚೇತನ್ ಕನಸು. ಹಾಗಾಗಿಯೇ ಜಗತ್ತಿನಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಜೇಮ್ಸ್ ಪ್ರದರ್ಶನವಾಗಲಿದೆಯಂತೆ. ಅಂದಾಜಿನ ಪ್ರಕಾರ ವಾರದೊಳಗೇ ಜೇಮ್ಸ್ ‘ನೂರು ಕೋಟಿ ಕ್ಲಬ್’ ಸೇರಲಿದೆ. ಇದನ್ನೂ ಓದಿ : ಕೇರಳದಲ್ಲಿ ಸಿಕ್ತು ನಿರ್ದೇಶಕ ರಿಷಬ್ ಶೆಟ್ಟಿಗೆ ನ್ಯಾಯ
Advertisement
Advertisement
ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದು ಹುಡುಗಾಟಿಕೆ ಅಲ್ಲ. ಆದರೂ, ಪುನೀತ್ ಅವರ ಅಭಿಮಾನಿಗಳ ಮೇಲಿನ ನಂಬಿಕೆಯಿಂದ ಅಷ್ಟು ಚಿತ್ರಮಂದಿರಗಳನ್ನು ಬುಕ್ ಮಾಡುತ್ತಿದ್ದಾರಂತೆ ನಿರ್ಮಾಪಕರು. ಅಂದು ಕನ್ನಡದಲ್ಲಿ ಬೇರೆ ಯಾವುದೇ ಸಿನಿಮಾ ರಿಲೀಸ್ ಆಗುವಂತೆ ಕಾಣುತ್ತಿಲ್ಲ. ಬೇರೆ ಭಾಷೆಯ ಚಿತ್ರಗಳು ಕೂಡ ಆದಷ್ಟು ಅವೈಡ್ ಮಾಡಲಾಗುತ್ತಿದೆ. ಇದನ್ನೂ ಓದಿ : ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್
Advertisement
ಬಹಾದೂರ್ ಚೇತನ್ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇದೊಂದು ಸಾಹಜ ಪ್ರಧಾನ ಸಿನಿಮಾ ಎನ್ನಲಾಗುತ್ತೆದೆ.