LatestLeading NewsMain PostNational

ಉಪರಾಷ್ಟ್ರಪತಿಯಾಗಿ ಜಗದೀಪ್‌ ಧನಕರ್‌ ಆಯ್ಕೆ

Advertisements

ನವದೆಹಲಿ: ಸಂಸತ್‌ನಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನಕರ್‌ ಗೆಲುವು ಸಾಧಿಸಿದ್ದಾರೆ.

ಬೆಳಿಗ್ಗೆ 10 ಗಂಟೆಯಿಂದ 5 ಗಂಟೆವರೆಗೆ ನಡೆದ ಉಪರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಸಂಸತ್ ಭವನದಲ್ಲಿ ನಡೆಯಿತು. ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ (71) ಅವರು 528 ಮತಗಳನ್ನು ಪಡೆಯುವ ಮೂಲಕ ಗೆಲುವು ದಾಖಲಿಸಿದ್ದಾರೆ. ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವಾ(80) ಅವರು 182 ಮತಗಳನ್ನಷ್ಟೇ ಪಡೆದು 346 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಇದನ್ನೂ ಓದಿ: ಟಿಕ್‍ಟಾಕ್ ಪ್ರಿಯರಿಗೆ ಶುಭ ಸುದ್ದಿ – ಭಾರತದಲ್ಲಿ ಮತ್ತೆ ಆ್ಯಪ್ ಆರಂಭ?

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಶೇಕಡ 93ರಷ್ಟು ಮತದಾನವಾಗಿತ್ತು. 50ಕ್ಕೂ ಅಧಿಕ ಸಂಸದರು ಮತದಾನದಿಂದ ದೂರ ಉಳಿದಿದ್ದರು. ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು 780 ಸಂಸದರಿದ್ದು, ಸಂಜೆ 5 ಗಂಟೆ ವೇಳೆಗೆ 725 ಮಂದಿ ಮತದಾನ ಮಾಡಿದ್ದರು.

23 ಲೋಕಸಭಾ ಸದಸ್ಯರು ಸೇರಿ ಟಿಎಂಸಿಯ 39 ಸಂಸದರು ಮತದಾನ ಮಾಡಲಿಲ್ಲ. ಬಿಜೆಪಿಯು ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಹೊಂದಿದ್ದು, ರಾಜ್ಯಸಭೆಯಲ್ಲಿ 91 ಸದಸ್ಯರ ಬಲವಿದೆ. ಹೀಗಾಗಿ ಧನಕರ್‌ ಸುಲಭ ಗೆಲುವು ದಾಖಲಿಸಿದ್ದಾರೆ. ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿಯು ಆಗಸ್ಟ್ 10 ರಂದು ಕೊನೆಗೊಳ್ಳಲಿದೆ. ಇದನ್ನೂ ಓದಿ: 75ನೇ ಸ್ವಾತಂತ್ರ್ಯೋತ್ಸವಕ್ಕೆ ಅಮೆರಿಕದ ಗಾಯಕಿ ಮೇರಿ ಮಿಲಬೆನ್‌ ಅತಿಥಿ

Live Tv

Leave a Reply

Your email address will not be published.

Back to top button