ಚಿತ್ರದುರ್ಗ: ಐಪಿಎಸ್ ಅಧಿಕಾರಿಯೊಬ್ಬರು ಬರಿಗಾಲಲ್ಲಿ ಚಿತ್ರದುರ್ಗ ಜಿಲ್ಲೆಯ ಕಲ್ಲಿನಕೋಟೆ ಏರಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಕಲ್ಲಿನಕೋಟೆ ಏರಿದ ಅಧಿಕಾರಿ. ಶಶಿಕುಮಾರ್ ಅವರು ಕೋತಿರಾಜನ ಮಾದರಿಯಲ್ಲಿ ಕಲ್ಲಿನ ಗೋಡೆ ಏರಿ ಗಮನ ಸೆಳೆದರು. ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಪಿಟ್ಲಾಲಿ ಗ್ರಾಮದ ನಿವಾಸಿ ಆಗಿದ್ದಾರೆ. ಇವರು ಕೋತಿರಾಜ್ ಸಲಹೆಯೊಂದಿಗೆ ಕೋಟೆ ಏರಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ- 16 ಮಂದಿ ಸಾವು
Advertisement
Advertisement
ಇದೀಗ ಕೋಟೆ ಏರಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ ಎಂಬ ಬರಹದೊಂದಿಗೆ ಅಧಿಕಾರಿ ಶಶಿಕುಮಾರ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಹಾಕಿಕೊಂಡಿದ್ದಾರೆ. ಇದನ್ನೂ ಓದಿ: 41,652 ಮಂದಿಗೆ ಲಸಿಕೆ – 767 ಡಿಸ್ಚಾರ್ಜ್