ಧರ್ಮಶಾಲಾ: ಕ್ವಾಲಿಫೈಯರ್ 1 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ವಿರುದ್ಧ ಸೋತ ಗುಜರಾತ್ ಟೈಟಾನ್ಸ್(Gujarat Titans) ಆಟಗಾರ ಗ್ಲೆನ್ ಫಿಲಿಪ್ಸ್(Glenn Phillips) ಮಾಧ್ಯಮಗಳ ವಿರುದ್ಧ ಸಿಟ್ಟು ಹೊರಹಾಕಿದ ಪ್ರಸಂಗ ನಡೆದಿದೆ.
ಆಡಿದ 11 ಸದಸ್ಯರ ಬಳಗದಲ್ಲಿ ಫಿಲಿಪ್ಸ್ ಇಲ್ಲದಿದ್ದರೂ ಜಿಟಿ ಗ್ಲೇನ್ ಫಿಲಿಪ್ಸ್ ಅವರನ್ನು ಸುದ್ದಿಗೋಷ್ಠಿಗೆ ಕಳುಹಿಸಿತ್ತು. ಈ ವೇಳೆ ಪತ್ರಕರ್ತರೊಬ್ಬರು, ಆರ್‌ಸಿಬಿ ನೀಡಿದ್ದ 255 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಗುಜರಾತ್ ಟೈಟಾನ್ಸ್ ತಂಡ ಮಾನಸಿಕವಾಗಿ ಮೊದಲೇ ಸೋಲನ್ನು ಒಪ್ಪಿಕೊಂಡಿತ್ತೇ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಫಿಲಿಪ್ಸ್, ಅದು ತೀರಾ ಮೂರ್ಖತನದ ಪ್ರಶ್ನೆ (That’s a silly question) ಎಂದು ಖಾರವಾಗಿ ಉತ್ತರಿಸಿದರು.
ಮೈದಾನಕ್ಕಿಳಿಯುವ ಯಾವುದೇ ತಂಡವೂ ಮೊದಲೇ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. 250 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಸ್ಕೋರ್‌ಬೋರ್ಡ್ ಒತ್ತಡ ವಿಪರೀತವಾಗಿರುತ್ತದೆ. ಪಂಜಾಬ್ ಕಿಂಗ್ಸ್‌ನಂತಹ ಕೆಲವೇ ತಂಡಗಳು ಇದನ್ನು ಈ ಹಿಂದೆ ಚೇಸಿಂಗ್ ಮಾಡಿ ತೋರಿಸಿವೆ. ಆದರೆ ಅದು ಕಾಣುವಷ್ಟು ಸುಲಭವಲ್ಲ ಎಂದು ತಂಡದ ಪರ ಬ್ಯಾಟ್ ಮಾಡಿದರು. ಇದನ್ನೂ ಓದಿ: ಡಫಿ ಜಾಗದಲ್ಲಿ ಶೆಪಾರ್ಡ್ ತಂದು ಬೌಲಿಂಗ್ ಮಾಡಿಸಿದ್ದು ಯಾಕೆ – ತಂಡದ ತಂತ್ರಗಾರಿಕೆಯನ್ನು ಬಿಚ್ಚಿಟ್ಟ ರಜತ್
🔴 GLENN PHILLIPS ANGRY ON A REPORTER QUESTION 🤯
Q🎙️ – “GT had mentally given up after seeing RCB score 254 ?”.
Phillips🎙️: called it a “terrible & silly question,” saying no professional cricketer ever walks onto the field thinking about giving up.🤦pic.twitter.com/SBfYkjCkto
— Sam (@cricsam02) May 27, 2026
ಪಂದ್ಯದಲ್ಲಿ ಆಡದೇ ಇರುವುದು, ತಂಡದ ಕೆಲವು ಆಂತರಿಕ ನಿರ್ಧಾರಗಳು ಮತ್ತು ತಂತ್ರಗಳ ಕುರಿತು ಕೇಳಲಾದ ಕಠಿಣ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಲು ಅವರು ಸುದ್ದಿಗೋಷ್ಠಿಯಲ್ಲಿ ಸ್ವಲ್ಪ ತಡಕಾಡಿದರು. ನಾವು ಇಲ್ಲಿಯವರೆಗೆ ಸಾಕಷ್ಟು ಉತ್ತಮ ಕ್ರಿಕೆಟ್ ಆಡಿದ್ದೇವೆ. ಅದು ನಿಮಗೆ ತಿಳಿದಿದೆ. ಮುಂದಿನ ಪಂದ್ಯಕ್ಕೆ ತಂಡ ಸಿದ್ದವಾಗಲು ಏನು ಮಾಡಬೇಕೋ ಅದನ್ನು ಮಾಡಲಿದೆ ಎಂದು ಫಿಲಿಪ್ಸ್ ತಿಳಿಸಿದರು.
ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ಪಾಟೀದಾರ್ ಒಬ್ಬ ಅದ್ಭುತ ಮತ್ತು ಯಾವುದೇ ಭಯವಿಲ್ಲದೆ ಆಡುವ ಬ್ಯಾಟರ್. ಪಂದ್ಯದ ಪರಿಸ್ಥಿತಿ ಏನೇ ಇದ್ದರೂ ಅವರು ತಮ್ಮ ನೈಸರ್ಗಿಕ ಆಕ್ರಮಣಕಾರಿ ಶೈಲಿಗೆ ಬದ್ಧರಾಗಿರುತ್ತಾರೆ ಮತ್ತು ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೊಗಳಿದರು. ಇದನ್ನೂ ಓದಿ: ಕೊಹ್ಲಿ ಜೊತೆಗಿನ ರೀಲ್ಸ್ ಸೇರಿ ಇನ್ಸ್ಟಾಗ್ರಾಂನಿಂದ 200ಕ್ಕೂ ಹೆಚ್ಚು ಪೋಸ್ಟ್ ಡಿಲೀಟ್ ಮಾಡಿದ ಅರ್ಷದೀಪ್
