ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಂದು ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಜಪಾನ್ ಪ್ರಧಾನಿ ಸನಾಯೆ ತಕೈಚಿ (Sanae Takaichi) ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಭಾರತ ಮತ್ತು ಜಪಾನ್ (India – Japan) ನಡುವಿನ 16ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರು, ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ ಹೊಸ ಎತ್ತರಕ್ಕೆ ಕೊಂಡೊಯ್ಯುವ ಐತಿಹಾಸಿಕ ಸಹಕಾರ ಒಪ್ಪಂದಕ್ಕೆ (MoC) ಸಹಿ ಹಾಕಿದರು.
It is wonderful to meet Prime Minister Sanae Takaichi in Delhi. Japan is an important partner of India and we are confident that our ties will get even stronger in the times to come. Our talks today covered the full range of the India-Japan Special Strategic and Global… pic.twitter.com/uxVvrOj2u6
— Narendra Modi (@narendramodi) July 2, 2026
ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ (Women Primeminister) ಭಾರತಕ್ಕೆ ಚೊಚ್ಚಲ ಅಧಿಕೃತ ಭೇಟಿ ನೀಡಿರುವ ತಕೈಚಿ ಅವರನ್ನ, ಬೌದ್ಧ ಪರಂಪರೆಯಂತೆ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿ ಮೋದಿ, ಉಭಯ ದೇಶಗಳ ತಾಂತ್ರಿಕ ಸಮ್ಮಿಲನವನ್ನು ಜಾಗತಿಕ ವೇದಿಕೆಯ ಹೊಸ ಕ್ರಾಂತಿ ಎಂದು ಬಣ್ಣಿಸಿದರು.
120 ಒಪ್ಪಂದಗಳಿಗೆ ಸಹಿ
ದ್ವಿಪಕ್ಷೀಯ ಮಾತುಕತೆ ಬಳಿಕ ಉಭಯ ದೇಶಗಳು 120 ಕ್ಕೂ ಹೆಚ್ಚು ಒಪ್ಪಂದಗಳಿಗೆ (India – Japan Deal) ಸಹಿ ಮಾಡಿವೆ. ಈ ಒಪ್ಪಂದಗಳು ಭಾರತಕ್ಕೆ ಸುಮಾರು 10 ಶತಕೋಟಿ ಡಾಲರ್ (95,330 ಕೋಟಿ ರೂ.) ಹೂಡಿಕೆಯನ್ನು ತರಲಿವೆ. ಇದರೊಂದಿಗೆ ಹಣಕಾಸು ಸೇವಾ ಸಂಸ್ಥೆಗಳ ನಡುವಿನ ಇಂದಿನ ಒಪ್ಪಂವು ಬಂಡವಾಳ ಹೂಡಿಕೆ ಹರಿವನ್ನ ಮತ್ತಷ್ಟು ಸುಗಮಗೊಳಿಸುತ್ತದೆ. ಜಪಾನ್‌ನಿಂದ ಭಾರತ ಸುಮಾರು 10 ಟ್ರೆಲಿಯನ್ ಯೇನ್ (5.92 ಲಕ್ಷ ಕೋಟಿ) ಹೂಡಿಕೆಯನ್ನು ಆಕರ್ಷಿಸುತ್ತದೆ. ಇದು ಮುಂದಿನ ದಶಕದಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಪಾನಿನ ಕಂಪನಿಗಳ ಸಂಖ್ಯೆಯನ್ನ ದ್ವಿಗುಣಗೊಳಿಸುವ ಗುರಿಯಾಗಿದೆ ಎಂದು ಅವರು ತಿಳಿಸಿದರು.
ಹಣಕಾಸು ಸೇವೆಗಳ ಏಜೆನ್ಸಿಗಳ ನಡುವಿನ ನೂತನ ಒಪ್ಪಂದವು ಬಂಡವಾಳದ ಹರಿವನ್ನು ಮತ್ತಷ್ಟು ಸುಗಮಗೊಳಿಸಲಿದೆ. ಭಾರತ – ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯ ಪ್ರಾರಂಭಿಸುತ್ತವೆ ಎಂದು ಬಣ್ಣಿಸಿದರು.
Addressed the India-Japan Joint Economic Forum along with Prime Minister Sanae Takaichi. It was gladdening to interact with business leaders from both countries, whose enterprise and innovation continue to add new momentum to the India-Japan economic partnership.… pic.twitter.com/hGXrYcDBw7
— Narendra Modi (@narendramodi) July 2, 2026
ಇಂದು ಭಾರತ ಮತ್ತು ಜಪಾನ್ ಎರಡೂ ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಸೇರಿಕೊಂಡಿವೆ. ಎಐ ತಂತ್ರಜ್ಞಾನ, ರಕ್ಷಣೆ, ಇಂಧನ ಮತ್ತು ಆರ್ಥಿಕ ಭದ್ರತೆಯನ್ನೊಳಗೊಂಡ ಈ ದ್ವಿಪಕ್ಷೀಯ ಮಾತುಕತೆ, ಕೇವಲ ಭಾರತ ಮತ್ತು ಜಪಾನ್ ನಡುವಿನ ದೇಶಗಳ ವ್ಯಾಪಾರ ವೃದ್ಧಿಗೆ ಸೀಮಿತವಾಗಿರದೇ, ಸಮಗ್ರ ಇಂಡೋ-ಪೆಸಿಫಿಕ್ ವಲಯದಲ್ಲಿ ಹೊಸ ಶಕ್ತಿ ಸಮತೋಲನ ಸೃಷ್ಟಿಸುವ ದೂರದೃಷ್ಟಿ ಹೊಂದಿದೆ ಎಂದು ಹೇಳಿದರು.
AI, ರಕ್ಷಣಾ ವಲಯಕ್ಕೆ ಬಿಗ್ ಬೂಸ್ಟ್
ವಿಶ್ವದ ಡಿಜಿಟಲ್ ಪವರ್‌ಹೌಸ್ ಆಗಿ ಹೊರಹೊಮ್ಮುತ್ತಿರುವ ಭಾರತದ ಸಾಫ್ಟ್‌ವೇರ್ ಸಾಮರ್ಥ್ಯ ಮತ್ತು ಜಪಾನ್‌ನ ನಿಖರ ಉತ್ಪಾದನಾ ತಂತ್ರಜ್ಞಾನ ಒಂದಾದರೆ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಸೃಷ್ಟಿಸಬಲ್ಲದು ಎಂಬುದಕ್ಕೆ ಈ ಶೃಂಗಸಭೆ ದಿಕ್ಸೂಚಿಯಾಗಿದೆ. ಕೃತಕ ಬುದ್ಧಿಮತ್ತೆ ವಲಯದಲ್ಲಿ ಉಭಯ ದೇಶಗಳು ಜಂಟಿ ಘೋಷಣೆಯನ್ನು ಬಿಡುಗಡೆ ಮಾಡಿದ್ದು, ದ್ವಿಪಕ್ಷೀಯ ಸಹಕಾರವನ್ನು ತೀವ್ರಗೊಳಿಸಲು ಒಪ್ಪಂದ ಮಾಡಿಕೊಂಡಿವೆ.
ತಂತ್ರಜ್ಞಾನ ಪಾಲುದಾರಿಕೆಯು ನಮ್ಮ ಸಹಕಾರದ ಬಲವಾದ ಆಧಾರಸ್ತಂಭವಾಗಲಿದೆ ಎಂದು ಪ್ರಧಾನಿ ತಕೈಚಿ ಮತ್ತು ನಾನು ನಂಬುತ್ತೇವೆ. ಇದಲ್ಲದೇ ಬ್ಯಾಟರಿಗಳು, ಹಸಿರು ಹೈಡ್ರೋಜನ್ ಮತ್ತು ಪರಮಾಣು ಶಕ್ತಿಯಲ್ಲಿ ನಮ್ಮ ಸಹಕಾರವು ಜಾಗತಿಕ ಶುದ್ಧ ಇಂಧನ ಭವಿಷ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
Prime Minister Takaichi and I believe that technology partnership will become the strongest pillar of our cooperation. To realise this vision, we have today issued a Joint Statement in the field of AI. Several leading institutions of India’s AI ecosystem have also signed… pic.twitter.com/KoqrFdzYCI
— Narendra Modi (@narendramodi) July 2, 2026
ರಕ್ಷಣಾ ವಲಯದಲ್ಲಿ ಹೊಸ ಅಧ್ಯಾಯ
ಭಾರತ ಮತ್ತು ಜಪಾನ್ ನಡುವಿನ ರಕ್ಷಣಾ ಪಾಲುದಾರಿಕೆಯಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಮಹತ್ವದ ಜಂಟಿ ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತೀಯ ನೌಕಾಪಡೆಗಾಗಿ ಅತ್ಯಾಧುನಿಕ ರೇಡಿಯೋ ಆಂಟೆನಾ ‘ಯುನಿಕಾರ್ನ್’ ಅನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗಿದೆ.
ಈ ಕುರಿತು ಮಾತನಾಡಿದ ಮೋದಿ, ಈ ಯೋಜನೆಯು ಉಭಯ ದೇಶಗಳ ರಕ್ಷಣಾ ತಂತ್ರಜ್ಞಾನ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಇಂಧನ ಸುರಕ್ಷತೆಗೆ ಸಂಬಂಧಿಸಿದಂತೆ ನಾವು ಹಲವಾರು ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡಿದ್ದೇವೆ. ಭಾರತ-ಜಪಾನ್ ಜೈವಿಕ ಅನಿಲ ಉಪಕ್ರಮವು ಭಾರತದಾದ್ಯಂತ 1,000 ಜೈವಿಕ ಅನಿಲ ಮತ್ತು ಸಾವಯವ ಗೊಬ್ಬರ ಸ್ಥಾವರಗಳನ್ನ ಸ್ಥಾಪಿಸಲು ನಮಗೆ ಸಹಾಯ ಮಾಡುತ್ತದೆ. ಇದು ನಮ್ಮ ‘ಗೋಬರ್‌ಧನ್’ ಉಪಕ್ರಮವನ್ನು ಮತ್ತಷ್ಟು ಬಲಪಡಿಸುತ್ತದೆ. ಭಾರತದ ಹಳ್ಳಿಗಳಲ್ಲಿ ಸುಸ್ಥಿರತೆ, ಸಮೃದ್ಧಿ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ಹೊಸ ಉತ್ತೇಜನ ನೀಡುತ್ತದೆ ಎಂದು ಹೇಳಿದ್ದಾರೆ.
