DavanagereDistrictsKarnatakaLatestMain Post

ಬೆಂಜ್ ಕಾರಲ್ಲಿ ಬಂದು ಲಕ್ಷ, ಲಕ್ಷ ರೂ. ಮರಳು ಹಫ್ತಾ ವಸೂಲಿ – ಹೈಟೆಕ್ ದರೋಡೆಕೋರರು ಅರೆಸ್ಟ್‌

ದಾವಣಗೆರೆ: ರಾಜ್ಯದಲ್ಲಿ ಮರಳು ಮಾಫಿಯಾ ದಂಧೆ ಸದ್ದು ಮಾಡಿದೆ. ದಾವಣಗೆರೆಯ ಖಡಕ್ ಎಸ್‍ಪಿ ರಿಷ್ಯಂತ್ ನಡೆಸಿದ ಕಾರ್ಯಾಚರಣೆಯಲ್ಲಿ ಹೈಟೆಕ್ ದರೋಡೆಕೋರಾದ ಮೊಹ್ಮದ್ ಸಿದ್ದಿಕ್, ಅಶೋಕ್ ಸಿಕ್ಕಿ ಬಿದ್ದಿದ್ದಾನೆ.

ಮರಳುದಂಧೆಕೋರರನ್ನು ಬೆದರಿಸಿ ಲಂಚ ವಸೂಲಿ ಮಾಡಲು ಬೆಂಜ್ ಕಾರಲ್ಲಿ ಬಂದಿದ್ದಾಗಲೇ ಲೂಟಿಕೋರನ ಹೆಡೆಮುರಿಯನ್ನು ಎಸ್‍ಪಿ ರಿಷ್ಯಂತ್ ಕಟ್ಟಿದ್ದಾರೆ. ಬಂಧಿತನಿಂದ 70 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಮರಳುಗಾರಿಕೆಯಲ್ಲಿ ತೊಡಗಿದ್ದ ದಾವಣಗೆರೆಯ ಮುಬಾರಕ್‍ಗೆ ಕರೆ ಮಾಡಿದ್ದ ಮೊಹ್ಮದ್ ಸಿದ್ದಿಕ್, ತಿಂಗಳಿಗೆ 4 ಲಕ್ಷ ಕೊಡ್ಬೇಕು ಎಂದು ಬೇಡಿಕೆ ಇಟ್ಟಿದ್ದ. ಆದ್ರೆ, ಮುಬಾರಕ್ 2 ಲಕ್ಷ ಮಾತ್ರ ನೀಡಿದ್ದ. ಬಳಿಕ ಸಿದ್ದಿಕ್ ಫುಲ್ ಪೇಮೆಂಟ್ ಮಾಡುವಂತೆ ಕಿರುಕುಳ ನೀಡಿದ್ದ. ಇದನ್ನು ತಡೆಯಲಾಗದೇ ಮುಬಾರಕ್ ಪೊಲೀಸರ ಮೊರೆ ಹೋಗಿದ್ದ. ಇದನ್ನೂ ಓದಿ: ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ- ಪ್ರೊ. ನಾಗರಾಜು ಸಸ್ಪೆಂಡ್ ಮಾಡಿ ಮೈಸೂರು ವಿವಿ ಆದೇಶ

 

ಈ ಪ್ರಕರಣದಲ್ಲಿ ಖುದ್ದು ಫೀಲ್ಡಿಗಿಳಿದ ಎಸ್‍ಪಿ ರಿಷ್ಯಂತ್, ಬೆಂಜ್ ಕಾರ್ ಲೂಟಿಕೋರರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಹೈಟೆಕ್ ಲೂಟಿಕೋರ ಮೊಹ್ಮದ್ ಸಿದ್ದಿಕ್ ಮತ್ತು ಅಶೋಕ್‌ ಜಿಮ್ಮಿ ಎಂಬಾತನನ್ನು ಹಿಡಿದಿದ್ದು, ಸಿದ್ದಿಕ್ ದಾವಣಗೆರೆ ಜಿಲ್ಲೆ ಮಾತ್ರವಲ್ಲದೇ ಚಿತ್ರದುರ್ಗ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ಮರಳುಗಾರಿಕೆಯಲ್ಲಿ ತೊಡಗಿದ್ದವರನ್ನು ಹೆದರಿಸಿ, ಬೆದರಿಸಿ ಲಕ್ಷ, ಲಕ್ಷ ಹಣ ವಸೂಲಿ ಮಾಡಿ ಕೋಟಿ ಕೋಟಿ ರೂ. ಸಂಪಾದನೆ ಮಾಡಿದ್ದಾನೆ. ಈತನಿಗೆ ಗೃಹ ಇಲಾಖೆಯ ಕೆಲ ಉನ್ನತ ಅಧಿಕಾರಿಗಳ ಸಂಪರ್ಕ ಇತ್ತು. ಕೆಲ ಪೊಲೀಸ್ರು ಕೂಡ ಈತನಿಗೆ ಲಂಚ ಕೊಡಬೇಕಾದ ಸ್ಥಿತಿ ಇತ್ತು ಎನ್ನಲಾಗುತ್ತಿದೆ. ಪೊಲೀಸ್ರು ಈ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಮೇ 5 ರಿಂದ 20 ರವರೆಗೆ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನ‌

Leave a Reply

Your email address will not be published.

Back to top button