Wednesday, 16th October 2019

Recent News

ಮಹಿಳಾ ವಿಶ್ವಕಪ್ ಕ್ರಿಕೆಟ್ – ಸ್ಮೃತಿ ಶತಕದ ಮೂಲಕ ಟೀಂ ಇಂಡಿಯಾಗೆ 2ನೇ ಗೆಲುವು

ಎಡ್ಜ್ ಬಾಸ್ಟನ್: ಮಹಿಳೆಯರ ವಿಶ್ವಕಪ್ 2ನೇ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡದ ವಿರುದ್ಧ 7 ವಿಕೆಟ್ ಅಂತರದ ಜಯಗಳಿಸಿದೆ. ಭಾರತದ ಪರವಾಗಿ ಸ್ಮೃತಿ ಮಂಧನ ಶತಕ ಗಳಿಸಿ ಗೆಲುವಿನ ರೂವಾರಿ ಎನಿಸಿದರು. ಐಸಿಸಿ ಮಹಿಳಾ ವಿಶ್ವಕಪ್ 2ನೇ ಪಂದ್ಯದಲ್ಲೂ ಸೊಗಸಾದ ಆಟದ ಮೂಲಕ ಎಲ್ಲರ ಗಮನ ಸೆಳೆದರು. ಈ ಪಂದ್ಯದಲ್ಲಿ 2 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ 106 ರನ್ ಗಳಿಸಿದರು. ಈ ಮೂಲಕ ಸ್ಮೃತಿ ತಮ್ಮ ಜೀವನದ 2ನೇ ಶತಕ ಬಾರಿಸಿದರು.

ಟಾಸ್ ಗೆದ್ದ ಮಿಥಾಲಿ ರಾಜ್ ನಾಯಕತ್ವದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು.

ವಿಂಡೀಸ್ ಪರವಾಗಿ ಮ್ಯಾಥ್ಯೂಸ್ 43, ಡೇಲಿ 33, ಫ್ಲೆಚರ್ 36, ಟೇಲರ್ 16, ನೇಷನ್ 12, ಮೊಹಮ್ಮದ್ 11, ವಾಲ್ಟರ್ಸ್ 9, ಡಾಟಿನ್ 7, ಅಗಿಲೇರಿಯಾ 6, ನೈಟ್ 5 ರನ್ ಗಳಿಸಿದರು.

ಟೀಂ ಇಂಡಿಯಾ ಪರವಾಗಿ ದೀಪ್ತಿ ಶರ್ಮಾ, ಹರ್ಮನ್ ಪ್ರೀತ್ ಕೌರ್ ಹಾಗೂ ಪೂನಂ ಯಾದವ್ ತಲಾ 2 ಹಾಗೂ ಏಕ್ತಾ ಬಿಷ್ಟ್ 1 ವಿಕೆಟ್ ಪಡೆದರು.

184 ರನ್ ಟಾರ್ಗೆಟ್ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಬೇಕಾಯಿತು. ಟೀಂ ರನ್ ಶುಭಾರಂಭ ಮಾಡುವಷ್ಟರಲ್ಲೇ ಶೂನ್ಯಕ್ಕೆ ಪೂನಂ ರಾವತ್ ಔಟಾದರು.

ಇದಾದ ನಂತರ ಬ್ಯಾಟಿಂಗ್ ಮಾಡಲು ಆಗಮಿಸಿದ ದೀಪ್ತಿ ಶರ್ಮಾ ಕೇವಲ 6 ರನ್ ಗಳಿಸಿ ಔಟಾದರು. ಆದರೆ ನಂತರ ಆಗಮಿಸಿದ ನಾಯಕಿ ಮಿಥಾಲಿ ರಾಜ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನ ಜೊತೆಗೆ ಉತ್ತಮ ಜೊತೆಯಾಟ ನೀಡಿದರು. ಸ್ಮೃತಿ ಮಂಧನ ಇಂಗ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲೂ ಅರ್ಧ ಶತಕ ಗಳಿಸಿದ್ದರು.

 

 

Leave a Reply

Your email address will not be published. Required fields are marked *