Connect with us

Crime

ಪ್ರಜ್ಞೆ ತಪ್ಪಿಸಿ ಪತ್ನಿಯ ಜೊತೆ ಅಸ್ವಾಭಾವಿಕ ಸೆಕ್ಸ್ – ತಲಾಖ್ ನೀಡಿದ ಪತಿಯ ವಿರುದ್ಧ ದೂರು

Published

on

– ಪೋರ್ನ್ ವಿಡಿಯೋದಲ್ಲಿರುವಂತೆ ಸೆಕ್ಸ್ ಮಾಡುವಂತೆ ಒತ್ತಾಯ
– ಜ್ಯೂಸ್ ಕುಡಿದ ನಂತ್ರ ಪ್ರಜ್ಞೆ ಕಳೆದುಕೊಳ್ತಿದ್ದೆ

ಮುಂಬೈ: ವ್ಯಕ್ತಿಯೊಬ್ಬ ಪತ್ನಿಯ ಜೊತೆ ಅಸ್ವಾಭಾವಿಕ ಸೆಕ್ಸ್ ಮಾಡಿದ್ದಲ್ಲದೇ ಆಕೆಗೆ ತಲಾಖ್ ನೀಡಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.

ಇದೀಗ ತಲಾಖ್ ನೀಡಿದ 46 ವರ್ಷದ ಪತಿಯ ವಿರುದ್ಧ ಮಹಿಳೆ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ನನಗೆ ತಲಾಖ್ ನೀಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

2018ರಲ್ಲಿ ಸಂತ್ರಸ್ತೆ ಆರೋಪಿಯನ್ನು ಮದುವೆಯಾಗಿದ್ದಾರೆ. ಈಗಾಗಲೇ ಆ ವ್ಯಕ್ತಿ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದು, ಅವರಿಂದ ವಿಚ್ಛೇದನ ಕೂಡ ಪಡೆದಿದ್ದನು. ಸಂತ್ರಸ್ತೆಯ ಜೊತೆ ಆರೋಪಿ ಮೂರನೇ ವಿವಾಹವಾಗಿದ್ದನು ಎಂದು ತಿಳಿದುಬಂದಿದೆ.

ಮದುವೆಯಾದ ಕೂಡಲೇ ಪತಿ ನನಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದನು. ಆಗಾಗ ತನ್ನ ಮೊಬೈಲ್‍ನಲ್ಲಿ ಪೋರ್ನ್ ವಿಡಿಯೋಗಳನ್ನು ನೋಡುವಂತೆ ಬಲವಂತ ಮಾಡುತ್ತಿದ್ದನು. ಅಷ್ಟೇ ಅಲ್ಲದೇ ವಿಡಿಯೋದಲ್ಲಿ ಮಾಡುವ ರೀತಿ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸುತ್ತಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮದುವೆಯಾದ ಕೆಲವು ದಿನಗಳ ನಂತರ ಪತಿ ನನಗೆ ಕುಡಿಯಲು ಜ್ಯೂಸ್ ನೀಡಲು ಪ್ರಾರಂಭಿಸಿದ್ದನು. ಜ್ಯೂಸಿನಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿ ಕೊಡುತ್ತಿದ್ದನು. ಜ್ಯೂಸ್ ಕುಡಿದ ನಂತರ ನಾನು ಪ್ರಜ್ಞೆ ಕಳೆದುಕೊಳುತ್ತಿದ್ದೆ. ಆಗ ಪತಿ ಅಸ್ವಾಭಾವಿಕವಾಗಿ ನನ್ನೊಂದಿಗೆ ಸೆಕ್ಸ್ ಮಾಡುತ್ತಿದ್ದನು. ಒಂದು ದಿನ ನನ್ನ ಮೇಲೆ ಹಲ್ಲೆ ಮಾಡಿದ್ದನು. ನಂತರ ನಾನು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದೆ. ನಂತರ ಪ್ರತಿದಿನ ನನಗೆ ಕಿರುಕುಳ ನೀಡುತ್ತಿದ್ದನು. ಈಗ ತಲಾಖ್ ನೀಡಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Click to comment

Leave a Reply

Your email address will not be published. Required fields are marked *