ಚಿಕ್ಕೋಡಿ: ವ್ಯಕ್ತಿಯೊಬ್ಬ ಮಲಗಿದ್ದ ಪತ್ನಿಯನ್ನು (Wife) ಕೊಚ್ಚಿ ಕೊಲೆಗೈದ ಘಟನೆ ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ನಡೆದಿದೆ.
ಶೋಭಾ ಕೊಲೆಯಾದ ದುರ್ದೈವಿ. ಈಕೆಯ ಪತಿ (Husband) ಪರಗೊಂಡ ಕೊಲೆ ಆರೋಪಿಯಾಗಿದ್ದಾನೆ. ಪತ್ನಿಯ ಮೇಲೆ ಸಂಶಯದಿಂದಾಗಿ ಆಕೆಯ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಮೂಲತಃ ಅಥಣಿ ತಾಲೂಕಿನ ಖವಟಖೊಪ್ಪ ಗ್ರಾಮದ ನಿವಾಸಿಗಳಾದ ದಂಪತಿ, ಕಟಗೇರಿ ಗ್ರಾಮದ ಅವಜೀಕರ ಮಠದಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ನಾಗೇಂದ್ರ ಇತ್ತೀಚೆಗೆ ಸಣ್ಣ ಸಣ್ಣ ವಿಚಾರಕ್ಕೂ ಹಲ್ಲೆ ಮಾಡ್ತಿದ್ದ – ಪಾಗಲ್ ಪ್ರೇಮಿಯ ಕರಾಳ ಮುಖ ಬಿಚ್ಚಿಟ್ಟ ಯುವತಿ
ಶೋಭಾ ಅವಜೀಕರ ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಅದೇ ಮಠದಲ್ಲಿ ಚಾಲಕನಾಗಿ ಆರೋಪಿ ಪರಗೊಂಡ ಕೆಲಸ ಮಾಡುತ್ತಿದ್ದ. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕ್ರೈಮ್ ಪಾರ್ಟ್ನರ್ ಜೊತೆ ಕುಳಿತು ಖುಷಿ ಖುಷಿಯಾಗಿ ಕ್ರಿಕೆಟ್ ಮ್ಯಾಚ್ ವೀಕ್ಷಿಸಿದ್ದ ಸಿಯಾ – ವಿಡಿಯೋ ವೈರಲ್
