– ದಸರಾ ಆನೆ ಆಯ್ಕೆ ವಿವಾದಕ್ಕೆ ಡಿಸಿಎಫ್ ಕ್ಲಾರಿಟಿ
ಮೈಸೂರು: ಮೈಸೂರಿನಲ್ಲಿ ದಸರಾ (Mysuru Dasara) ದಂಗಲ್ ಮತ್ತೆ ಬಿರುಸುಗೊಂಡಿದೆ. ದಸರಾ ವ್ಯವಸ್ಥೆ ವಿಚಾರದಲ್ಲಿ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಎತ್ತಿದ ಆಕ್ಷೇಪಗಳಿಗೆ ಅಧಿಕಾರಿಗಳು ತಿರುಗೇಟು ನೀಡಿದ್ದಾರೆ.
ದಸರಾ ವ್ಯವಸ್ಥೆ ಹಾಗೂ ಲೋಪಗಳ ಬಗ್ಗೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನಾಲ್ಕು ಪುಟಗಳ ಪತ್ರ ಬರೆದಿದ್ದು, ಇದಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸ್ಪಷ್ಟನೆ ಕೊಟ್ಟಿದ್ರೆ, ಅಂಬಾರಿ ಹೊರುವ ಆನೆ ಆಯ್ಕೆ ವಿಚಾರದ ಕುರಿತು ಡಿಸಿಎಫ್ ಪ್ರಭುಗೌಡ ಕ್ಲಾರಿಟಿ ಕೊಟ್ಟಿದ್ದಾರೆ. ಇದನ್ನೂ ಓದಿ: ಮೀಸಲಾತಿ ಸಂಬಂಧ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ಸಿಎಂಗೆ ವಾಲ್ಮೀಕಿ ಗುರುಪೀಠ ಟ್ರಸ್ಟ್ ಮನವಿ
ಮೈಸೂರು ದಸರಾ ಸಮಯದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ವಿದೇಶಿ ರಾಯಭಾರಿಗಳು ಹಾಗೂ ನ್ಯಾಯಾಧೀಶರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆ ಅಗತ್ಯ ಭದ್ರತಾ ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆಗೆ ತಜ್ಞರ ಸಮಿತಿಯಿಂದಲೂ ಗ್ರೀನ್ ಸಿಗ್ನಲ್
ಕಳೆದ ಎರಡು ತಿಂಗಳಿಂದ ಸಮನ್ವಯ ಸಭೆ ನಡೆಸಲಾಗಿತ್ತು. ಅರಮನೆ ಆಡಳಿತ ಮಂಡಳಿಯೊಂದಿಗೂ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಜಟ್ಟಿ ಕಾಳಗದ ವಿಚಾರದಲ್ಲಿಯೂ ಪೊಲೀಸ್ ಇಲಾಖೆಯ ತಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮೂರು ತಂಡಗಳು ನಿಗದಿತ ಸಮಯಕ್ಕೆ ಆಗಮಿಸಿದ್ದವು. ನಾಲ್ಕನೇ ತಂಡ ತಡವಾಗಿ ಬಂದಿದ್ದು, ಅಧಿಕೃತ ಪಾಸ್ ಇಲ್ಲದವರನ್ನೂ ಕರೆದುಕೊಂಡು ಬಂದಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತೀಯ ಉದ್ಯಮ ಕ್ಷೇತ್ರವು ಮೋದಿ, ಶಾ ಆಟದ ವಸ್ತುವಲ್ಲ – ಟಾಟಾ ಸಂಸ್ಥೆ ಪರ ಬ್ಯಾಟ್ ಬೀಸಿದ ರಾಗಾ
ಇನ್ನು ಅಂಬಾರಿ ಆನೆ ಆಯ್ಕೆ ವಿಚಾರವಾಗಿ ರಾಜಮನೆತನಕ್ಕೆ ಮಾಹಿತಿ ನೀಡಿಲ್ಲ ಎಂಬ ಪ್ರಮೋದಾದೇವಿ ಒಡೆಯರ್ ಆರೋಪಕ್ಕೂ ಡಿಸಿಎಫ್ ಪ್ರಭುಗೌಡ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅಂಬಾರಿ ಆನೆ ಆಯ್ಕೆ ಬಗ್ಗೆ ರಾಜಮನೆತನಕ್ಕೆ ಲಿಖಿತವಾಗಿ ಅಥವಾ ಔಪಚಾರಿಕವಾಗಿ ಅಧಿಕೃತ ಮಾಹಿತಿ ನೀಡುವ ಪದ್ಧತಿ ಇಲ್ಲ. ಆದರೂ ಸಮನ್ವಯದ ದೃಷ್ಟಿಯಿಂದ ಅರಣ್ಯ ಇಲಾಖೆಯು ಅಕ್ಟೋಬರ್ 11 ಮತ್ತು 12ರಂದು ದೂರವಾಣಿ ಮೂಲಕ ಅಗತ್ಯ ಮಾಹಿತಿ ನೀಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ – 36 ದಿನದಲ್ಲಿ 2.79 ಕೋಟಿ ರೂ. ಸಂಗ್ರಹ.
