ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲೂ ಎನ್ಡಿಎ (NDA) ಭರ್ಜರಿ ಜಯಭೇರಿ ಬಾರಿಸಿದೆ. ಇದರ ಬೆನ್ನಲ್ಲೇ, ಇವಿಎಂ, ಬ್ಯಾಲೆಟ್ನಲ್ಲೂ ಕಮಲ – ದಳದ್ದೇ ದರ್ಬಾರ್ ಎಂದು ಕಾಂಗ್ರೆಸ್ಗೆ (Congress) ಬಿಜೆಪಿ (BJP) ನಾಯಕ ಸಿ.ಟಿ ರವಿ (C.T Ravi) ಟಾಂಗ್ ಕೊಟ್ಟಿದ್ದಾರೆ.
ಚಿಕ್ಕಮಗಳೂರಲ್ಲಿ (Chikkamagaluru) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಡಿ.ಕೆ. ಶಿವಕುಮಾರ್ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಸರ್ಕಾರದ ಹನಿಮೂನ್ ಅವಧಿ ಕೂಡ ಮುಗಿದಿಲ್ಲ. ಈ ಅವಧಿ ಮುಗಿಯುವ ಮುನ್ನವೇ ಎಂಎಲ್ಸಿ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಾಳಯಕ್ಕೆ ಆಘಾತ ನೀಡಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಅಧಿಕಾರದಲ್ಲಿರೂ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆದ್ದಿಲ್ಲ – ನಿತಿನ್ ನಬಿನ್ ಟೀಕೆ
ಇದು ಇವಿಎಂ ಮೇಲೆ ನಡೆದ ಚುನಾವಣೆಯಲ್ಲ. ಬದಲಾಗಿ ಬ್ಯಾಲೆಟ್ ಪೇಪರ್ನಲ್ಲಿ ನಡೆದ ಚುನಾವಣೆ. ಇವಿಎಂ ಆಗಲಿ, ಬ್ಯಾಲೆಟ್ ಆಗಲಿ ಎರಡರಲ್ಲೂ ಬಿಜೆಪಿ-ಜೆಡಿಎಸ್ ಮೇಲುಗೈ ಸಾಧಿಸಿದೆ. ಈ ಫಲಿತಾಂಶ ಭವಿಷ್ಯದ ರಾಜಕಾರಣದ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಹಿತ ಮರೆತು ಬೆಲೆ ಏರಿಕೆಯನ್ನೇ ತಮ್ಮ ನೀತಿಯನ್ನಾಗಿಸಿಕೊಂಡಿದ್ದಕ್ಕೆ ಇದು ತಕ್ಕ ಶಾಸ್ತಿಯಾಗಿದೆ. ಭ್ರಷ್ಟಾಚಾರ, ಸ್ಟಿಂಗ್-ಡಿಂಗ್ ಎಂದು ಕಥೆ ಕಟ್ಟಿ ಜನರ ದಿಕ್ಕು ತಪ್ಪಿಸುತ್ತಿದ್ದವರಿಗೆ ಪ್ರಜ್ಞಾವಂತ ಮತದಾರರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪರಿಷತ್ ಫೈಟ್ನಲ್ಲಿ ಶೂನ್ಯ ಸಂಪಾದನೆ; ಕಾಂಗ್ರೆಸ್ ಎಷ್ಟು ಸ್ಥಾನ ಗೆದ್ದಿರಬಹುದು ಊಹಿಸಿ? – ಕಾಲೆಳೆದ ಮೋದಿ
