ಸಾಮಾನ್ಯವಾಗಿ ಎಲ್ಲರೂ ‘ಫ್ರೈಡ್ ರೈಸ್’ ತಿನ್ನುತ್ತಿರುತ್ತಾರೆ. ಆದರೆ ‘ಚಿಕನ್ ಫ್ರೈಡ್ ರೈಸ್’ ಎನ್ನುವ ರೆಸಿಪಿ ಇದೆ ಎಂದು ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಅದಕ್ಕೆ ಇಂದು ನಿಮ್ಮ ಮನೆಯಲ್ಲಿಯೇ ಸಿಂಪಲ್ ಆಗಿ ಹೇಗೆ ಈ ರೆಸಿಪಿ ಟ್ರೈ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ.
Advertisement
ಬೇಕಾಗಿರುವ ಪದಾರ್ಥಗಳು:
* ಆಲಿವ್ ಎಣ್ಣೆ – 2 ಟೀಸ್ಪೂನ್
* ಕಟ್ ಮಾಡಿದ ಚಿಕನ್ – 2 ಕಪ್
* ಕರಿಮೆಣಸು – 2 ಟೀಸ್ಪೂನ್
* ಎಳ್ಳಿನ ಎಣ್ಣೆ – 2 ಟೀಸ್ಪೂನ್
* ಕಟ್ ಮಾಡಿದ ಈರುಳ್ಳಿ – 1 ಕಪ್
* ಕಟ್ ಮಾಡಿದ ಕ್ಯಾರೆಟ್ – ಅರ್ಧ ಕಪ್
Advertisement
Advertisement
* ಲವಂಗ – 1 ಟೀಸ್ಪೂನ್
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
* ಬೇಯಿಸಿದ ಅಕ್ಕಿ – 3 ಕಪ್
* ನೆನೆಸಿಟ್ಟ ಬಟಾಣಿ – ಅರ್ಧ ಕಪ್
* ಮೊಟ್ಟೆಗಳು – 2
* ಸೋಯಾ ಸಾಸ್ – 3 ಟೀಸ್ಪೂನ್
Advertisement
ಮಾಡುವ ವಿಧಾನ:
* ಮಧ್ಯಮ ಉರಿಯಲ್ಲಿ ಒಂದು ಬಾಣಲೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಚಿಕನ್ ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ಉಪ್ಪು ಮತ್ತು ಮೆಣಸಿನಕಾಯಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೂ ಉರಿಯಿರಿ.
* ಚಿಕನ್ ಬಾಣಲೆಯಿಂದ ತೆಗೆದು 5 ನಿಮಿಷಗಳ ಕಾಲ ಬಿಡಿ.
* ಅದೇ ಬಾಣಲೆಗೆ ಎಳ್ಳಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಈರುಳ್ಳಿ ಮತ್ತು ಕ್ಯಾರೆಟ್ ಸೇರಿಸಿ 5 ನಿಮಿಷಗಳು ಬೇಯಿಸಿ.
* ನಂತರ ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಸೇರಿಸಿ 1 ನಿಮಿಷ ಬಿಡಿ. ಅನ್ನ ಮತ್ತು ಬಟಾಣಿಗಳನ್ನು ಬೆರೆಸಿ 2 ನಿಮಿಷ ಫ್ರೈ ಮಾಡಿ.
* ಇನ್ನೊಂದು ಪಾತ್ರೆಯಲ್ಲಿ ಮೊಟ್ಟೆಯನ್ನು ಬೇಯಿಸಿ. ನಂತರ ಮೊಟ್ಟೆಯನ್ನು ಕಟ್ ಮಾಡಿ ರೈಸ್ ಜೊತೆ ಮಿಕ್ಸ್ ಮಾಡಿ.
* ಅದಕ್ಕೆ ಸೋಯಾ ಸಾಸ್ ಮತ್ತು ಹಸಿರು ಈರುಳ್ಳಿ ಹಾಕಿ ಸರಿಯಾಗಿ ಫ್ರೈ ಮಾಡಿ.
- ‘ಚಿಕನ್ ಫ್ರೈಡ್ ರೈಸ್’ ಸವಿಯಲು ಸಿದ್ಧವಾಗಿದ್ದು, ಕೆಚಪ್ ಜೊತೆ ಬಡಿಸಿ.