ರಾಯಚೂರು: ನಗರದ ಆರೋಗ್ಯ ಇಲಾಖೆ ನೌಕರರೊಬ್ಬರು ಉದ್ಯೋಗದಲ್ಲಿ ಬೆಳಗ್ಗೆ ಮುಂಬಡ್ತಿ ಪಡೆದು ಸಂಜೆಗೆ ನಿವೃತ್ತಿಯಾಗಿದ್ದಾರೆ. ಪ್ರಥಮ ದರ್ಜೆ ಸಹಾಯಕರಾಗಿ ಮುಂಬಡ್ತಿ ಪಡೆದ ವಿರೂಪಾಕ್ಷಯ್ಯ ಒಂದು ದಿನ ಮಾತ್ರ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಸಂಜೆಗೆ ನಿವೃತ್ತಿಯಾಗಿದ್ದಾರೆ.
ಅನೇಕ ವರ್ಷಗಳಿಂದ ಮುಂಬಡ್ತಿಗಾಗಿ ಕಾಯುತ್ತಿದ್ದ ನೌಕರ ವಿರೂಪಾಕ್ಷಯ್ಯಗೆ ಒಂದೇ ದಿನ ಖುಷಿ, ಅದೇ ದಿನ ನಿವೃತ್ತಿ ಸಿಕ್ಕಿದೆ. ಸೇವಾ ನಿವೃತ್ತಿಯ ಕೊನೆಗಳಿಗೆಯಲ್ಲಿ ಪದನ್ನೋತಿ ಒಲಿದು ಬಂದಿದೆ. 1991 ರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಟೆಂಡರ್ ಹುದ್ದೆಗೆ ಸೇರಿದ್ದರು. ಸೇವಾ ಹಿರಿತನದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಬಡ್ತಿ ಪಡೆದಿದ್ದರು. 35 ಸೇವಾನುಭವ ಹೊಂದಿದ್ದ ವಿರೂಪಾಕ್ಷಯ್ಯಗೆ ತಡವಾಗಿ 2026ರ ಮೇ 30 ರಂದು ಪ್ರಥಮ ದರ್ಜೆ ಸಹಾಯರಾಗಿ ಮುಂಬಡ್ತಿ ಆದೇಶ ಬಂದಿದೆ. ಇದನ್ನೂ ಓದಿ: ಕೊಡಗಿನ ಮೂಲಕ ಹಾದುಹೋಗುವ ಯಾವುದೇ ರೈಲು ಮಾರ್ಗದ ಪ್ರಸ್ತಾವನೆ ಇಲ್ಲ: ಯದುವೀರ್ ಸ್ಪಷ್ಟನೆ
ಸೇವಾ ನಿವೃತ್ತಿ
ಮೇ 31ರ ಬೆಳಗ್ಗೆ ಡಿವಿಜಿನಲ್ ಕೆಮಿಕಲ್ ಲ್ಯಾಬ್‌ಗೆ ಎಫ್‌ಡಿಎ ಆಗಿ ಕಾರ್ಯಾರಂಭ ಮಾಡಿ ಅದೇ ದಿನ ಸಂಜೆಗೆ ನಿವೃತ್ತಿಯಾಗಿದ್ದಾರೆ. ತಡವಾಗಿಯಾದ್ರೂ ಪದನ್ನೋತಿಯಿಂದ ಒಂದು ಇನ್‌ಕ್ರಿಮೆಂಟ್ ಸಿಕ್ಕಂತಾಯ್ತು ಅಂತ ವಿರೂಪಾಕ್ಷಯ್ಯ ಖುಷಿ ವ್ಯಕ್ತಪಡಿಸಿದ್ದಾರೆ.
