ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ ಫಾಲ್ಸ್ (Hebbe Falls) ಧುಮ್ಮಿಕ್ಕಿ ಹರಿಯುತ್ತಿದೆ.
ಹೆಬ್ಬೆ ಜಲಪಾತದಲ್ಲಿ ಸುಮಾರು 100 ಅಡಿಗೂ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರೋ ಫಾಲ್ಸ್‌ನ ಜಲವೈಭವ ನೋಡಲು ಪ್ರವಾಸಿಗರ ದಂಡೇ ಬರುತ್ತಿದೆ. ಈ ಜಲಪಾತಕ್ಕೆ ಸ್ಥಳಿಯರು, ಪ್ರವಾಸಿಗರು ಮಿನಿ ಜೋಗ ಎಂದೇ ಕರೆಯುತ್ತಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ ಕೆಆರ್‌ಎಸ್‌ಗೆ 5,000 ಕ್ಯೂಸೆಕ್ ಒಳಹರಿವು ಹೆಚ್ಚಳ
ಕೆಮ್ಮಣ್ಣುಗುಂಡಿ ತಪ್ಪಲಿನ ಕಾಡು ಹಾಗೂ ಕಾಫಿತೋಟಗಳ ಮಧ್ಯೆ ಈ ಜಲಪಾತ ಇದೆ. ಈ ಪರಿಸರದಿಂದ ಜಲಪಾತದ ಸೌಂದರ್ಯ ಇಮ್ಮಡಿಗೊಂಡಿದೆ. ಈ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಬರುತ್ತಿದೆ.
ಈ ಜಲಪಾತಕ್ಕೆ ಕೆಮ್ಮಣ್ಣುಗುಂಡಿಯಿಂದ ಸುಮಾರು 7 ಕಿ.ಮೀ ಕಾಫಿ ತೋಟದ ಒಳಗೆ ಜೀಪ್‍ನಲ್ಲೇ ಹೋಗಬೇಕು. ಹೆಬ್ಬೆ ಜಲಪಾತ ತರೀಕೆರೆಯಿಂದ ಸುಮಾರು 35-40 ಕಿಮೀ ಮೀಟರ್ ದೂರದಲ್ಲಿದೆ. ಇದನ್ನೂ ಓದಿ: ಕೊಡಗಿನಲ್ಲಿ ಬಿರುಸು ಪಡೆದ ಮಳೆ – ಒಂದೇ ದಿನ ಹಾರಂಗಿ ಜಲಾಶಯಕ್ಕೆ ಹರಿದು ಬಂತು 1.5 ಟಿಎಂಸಿ ನೀರು
