ಮಂಡ್ಯ: ಕಾವೇರಿ ನದಿ (Kaveri River) ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು (Rain), ಕೆಆರ್‌ಎಸ್ ಡ್ಯಾಂಗೆ (KRS Dam) ಒಂದೇ ದಿನದಲ್ಲಿ 5,000 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ.
ಇಂದು (ಜು.9) 12,694 ಕ್ಯೂಸೆಕ್ ಒಳಹರಿವು ಇದೆ. ಜು.8 ರಂದು 7,531 ಕ್ಯೂಸೆಕ್ ಒಳಹರಿವು ಇತ್ತು. ಭಾರೀ ಮಳೆಯಿಂದ ಒಂದೇ ದಿನದಲ್ಲಿ 5 ಸಾವಿರ ಕ್ಯೂಸೆಕ್ ಏರಿಕೆಯಾಗಿದೆ. ಇದರಿಂದ ನೀರಿನ ಮಟ್ಟ 85.66 ಅಡಿಗೆ ಏರಿಕೆಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಆರ್ಭಟ ಜೋರು – ಮುಂದಿನ 3 ದಿನ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ
ಸದ್ಯ ಡ್ಯಾಂನಲ್ಲಿ 13.512 ಟಿಎಂಸಿ ನೀರು ಶೇಖರಣೆಯಾಗಿದೆ. ಇದೇ ರೀತಿ ಒಳಹರಿವು ಹೆಚ್ಚಾದರೆ ಕೆಆರ್‌ಎಸ್ ಡ್ಯಾಂ ಭರ್ತಿಯಾಗಲಿದೆ. ಇದನ್ನೂ ಓದಿ: ಕೊಡಗಿನಲ್ಲಿ ಬಿರುಸು ಪಡೆದ ಮಳೆ – ಒಂದೇ ದಿನ ಹಾರಂಗಿ ಜಲಾಶಯಕ್ಕೆ ಹರಿದು ಬಂತು 1.5 ಟಿಎಂಸಿ ನೀರು
