Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಳೆರಾಯನ ಮುನಿಸಿಗೆ 150ಕ್ಕೂ ಹೆಚ್ಚು ಮಂದಿ ಬಲಿ- ಕೇರಳದಲ್ಲಿ ವರುಣಾಸುರನ ಪ್ರತಾಪ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಳೆರಾಯನ ಮುನಿಸಿಗೆ 150ಕ್ಕೂ ಹೆಚ್ಚು ಮಂದಿ ಬಲಿ- ಕೇರಳದಲ್ಲಿ ವರುಣಾಸುರನ ಪ್ರತಾಪ

Bengaluru City

ಮಳೆರಾಯನ ಮುನಿಸಿಗೆ 150ಕ್ಕೂ ಹೆಚ್ಚು ಮಂದಿ ಬಲಿ- ಕೇರಳದಲ್ಲಿ ವರುಣಾಸುರನ ಪ್ರತಾಪ

Public TV
Last updated: July 21, 2019 8:47 am
Public TV
Share
3 Min Read
bihar flood 1
SHARE

-ಕೊಡಗಿನಲ್ಲಿ ಮತ್ತೆ ಮಹಾಮಳೆಯ ಮುನ್ಸೂಚನೆ

ಬೆಂಗಳೂರು/ನವದೆಹಲಿ: ಈ ಸಲ ದೇಶದಲ್ಲಿ ತುಂಬಾ ಲೇಟಾಗಿ ಅಬ್ಬರಿಸೋಕೆ ಶುರು ಮಾಡಿದ್ದ ವರುಣ, ಹಲವೆಡೆ ಉಗ್ರ ರೂಪ ತಾಳಿದ್ದಾನೆ. ಮಳೆರಾಯನ ಮುನಿಸಿಗೆ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಕೋಟ್ಯಂತರ ಜನರು ಸಂಕಷ್ಟದಲ್ಲಿ ದಿನ ದೂಡ್ತಿದ್ದಾರೆ. ರಸ್ತೆಗಳೆಲ್ಲಾ ಕೊಚ್ಚಿಹೋಗಿದ್ದು, ಕಾರು, ಬೈಕ್ ಎಲ್ಲಾ ಮನೇಲಿ ನಿಲ್ಲಿಸಿ ದೋಣಿಯಲ್ಲಿ ಓಡಾಡುತ್ತಿದ್ದಾರೆ.

assam flood new

ಇತ್ತ ಈ ಬಾರಿ ಕೊಡಗಿನಲ್ಲಿ ಮಳೆ ಅಷ್ಟೊಂದಿಲ್ಲ. ಆದರೂ ಜನ ಮಾತ್ರ ಆತಂಕದಲ್ಲೇ ದಿನ ದೂಡ್ತಿದ್ದಾರೆ. ಯಾಕೆಂದರೆ ಭಾರಿ ಮಳೆಯಾಗುತ್ತೆ ಎಂದು ಹವಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಅಲ್ಲದೆ ಶನಿವಾರ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಕೂಡ ಘೋಷಿಸಲಾಗಿತ್ತು. ಆದರೆ ನೀರಿಕ್ಷೆ ಮಾಡಿದಷ್ಟು ಮಳೆ ಮಳೆಯಾಗದ ಕಾರಣಕ್ಕೆ ಜಿಲ್ಲಾಡಳಿತ ಮತ್ತೆ ಆರೆಂಜ್ ಅಲರ್ಟ್ ಘೋಷಿಸಿದೆ.

MDK RAIN

ಜುಲೈ 25ರವರೆಗೆ ಮಳೆಯಾಗುತ್ತೆ ಎಂಬ ಮಾಹಿತಿ ಇದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಸ್ವಲ್ಪ ಎಚ್ಚರವಾಗಿರಿ ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಅಲ್ಲದೆ ಎನ್‍ಡಿಆರ್‍ಎಫ್ ತಂಡ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದು, ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಹಾಯವಾಣಿ ತೆರೆದಿದ್ದು, ತುರ್ತು ಸಂದರ್ಭದಲ್ಲಿ ಕರೆ ಮಾಡುವಂತೆ ಸೂಚಿಸಲಾಗಿದೆ.

mng rain

ಇತ್ತ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿದ್ದು, ಸಕಲೇಶಪುರ-ಸುಬ್ರಹ್ಮಣ್ಯ ಘಾಟ್‍ನ ಸಿರಿಬಾಗಿಲು ಬಳಿ ರೈಲ್ವೇ ಹಳಿ ಮೇಲೆ ಭೂಕುಸಿತವಾಗಿದೆ. ಬೆಟ್ಟದಿಂದ ರೈಲು ಹಳಿ ಮೇಲೆ ಕಲ್ಲು ಮಣ್ಣು ಬೀಳುತ್ತಿದ್ದು, ಕಾರ್ಮಿಕರು ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ಮಂಗಳೂರು-ಬೆಂಗಳೂರು ರೈಲು ಸಂಚಾರವನ್ನು ಎರಡು ದಿನ ಸ್ಥಗಿತಗೊಳಿಸಲಾಗಿದೆ.

190507kpn74

ವಿಜಯಪುರ ಜಿಲ್ಲೆ ಶಿವಣಗಿಯಲ್ಲಿ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ಉಡುಪಿಯಲ್ಲಿ 101 ಎಂಎಂ, ಕುಂದಾಪುರದಲ್ಲಿ 99.02 ಎಂಎಂ, ಕಾರ್ಕಳದಲ್ಲಿ 105 ಮಿಲಿಮೀಟರ್ ದಾಖಲೆ ಮಳೆ ಆಗಿದೆ. ಉಡುಪಿಯ ಸಮುದ್ರಕ್ಕೆ ಇಳಿದಂತೆ ಮೀನುಗಾರರಿಗೆ ವಾರ್ನಿಂಗ್ ಕೊಡಲಾಗಿದೆ. ಬೆಂಗಳೂರು ಮತ್ತು ಸುತ್ತಮುತ್ತ ತುಂತುರು ಮಳೆ, ಮೋಡ ಕವಿದ ವಾತಾವರಣವಿದೆ.

bihar flood 4

ಆದರೆ ಕರಾವಳಿಯಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಶನಿವಾರ ಹವಾಮಾನ ಇಲಾಖೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಎಚ್ಚರಿಕೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ ಕರಾವಳಿಯ ಕೆಲವು ಭಾಗದಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದ್ದು, ನೇತ್ರಾವತಿ ಇನ್ನೂ ತುಂಬಿಕೊಂಡಿಲ್ಲ. ಅಲ್ಲದೆ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಹಾಗೆಯೆ ವಾಯುಭಾರ ಕುಸಿತದಿಂದಾಗಿ ಇನ್ನೂ ಎರಡು ದಿನ ಮಳೆಯಾಗುವ ಮುನ್ಸೂಚನೆ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಭಾರಿ ಮಳೆಯ ಪ್ರಮಾಣ ತುಂಬ ಕಮ್ಮಿಯಾಗಿದೆ. ಇತ್ತ ಚಿಕ್ಕಮಗಳೂರಿನಲ್ಲೂ ಸಹ ನಿರೀಕ್ಷಿಸಿದಷ್ಟೂ ಮಳೆಯಾಗಿಲ್ಲ.

bihar flood 5

ಇನ್ನು ಬಿಹಾರದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ರಾಜ್ಯದ 12 ಜಿಲ್ಲೆಗಳಿಗೆ ಪ್ರವಾಹ ವ್ಯಾಪಿಸಿದ್ದು, 67 ಲಕ್ಷ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈವರೆಗೆ ಒಟ್ಟು 97 ಸಾವನ್ನಪ್ಪಿದ್ದು, ಕಳೆದ 24 ಗಂಟೆಯಲ್ಲೇ 19 ಮಂದಿ ಪ್ರಾಣ ಬಿಟ್ಟಿದ್ದಾರೆ. ರಸ್ತೆ, ಹೊಲ, ಮನೆ ಹೀಗೆ ಎಲ್ಲೆಲ್ಲೂ ನೀರು ವ್ಯಾಪಿಸಿದ್ದು, ಜನ ದಿಕ್ಕೇ ತೋಚದಂತಾಗಿದ್ದಾರೆ.

assam flood 4

ಈಶಾನ್ಯ ರಾಜ್ಯಗಳಲ್ಲೂ ಪರಿಸ್ಥಿತಿ ಏನೂ ಭಿನ್ನವಾಗಿಲ್ಲ. ಅದರಲ್ಲೂ ಅಸ್ಸಾಂನಲ್ಲಂತೂ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ರಾಜ್ಯದ 33 ಜಿಲ್ಲೆಗಳ ಪೈಕಿ 27ರಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಒಟ್ಟು 3,700ಕ್ಕೂ ಹೆಚ್ಚು ಗ್ರಾಮಗಳು ನೀರಿನಲ್ಲಿ ಮುಳುಗಿಹೋಗಿವೆ. 48 ಲಕ್ಷ ಮಂದಿ ಸಂಕಷ್ಟಕ್ಕೀಡಾಗಿದ್ದು, ಈವರೆಗೆ 59 ಮಂದಿ ಸಾವನ್ನಪ್ಪಿದ್ದಾರೆ. 2 ಲಕ್ಷದ 26 ಸಾವಿರ ಮಂದಿ ಸಂತ್ರಸ್ಥರನ್ನು 1600 ನಿರಾಶ್ರಿತ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. ಅದ್ರಲ್ಲೂ ಕಾಜಿರಂಗ ಉದ್ಯಾನವನ ಜಲಾವೃತಗೊಂಡಿದ್ದು, ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಈಜುತ್ತಿರುವ ದೃಶ್ಯ ಕರಳು ಕಿತ್ತುಬರುವಂತಿದೆ.

assam 2

ಇನ್ನು ಪಕ್ಕದ ಕೇರಳದಲ್ಲೂ ಮಳೆಯಬ್ಬರ ಜೋರಾಗಿದ್ದು, ಈವರೆಗೆ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಇಡುಕ್ಕಿ, ಮಲಪ್ಪುರಂ, ಕೋಝಿಕೋಡ್, ವಯನಾಡ್, ಕಣ್ಣೂರಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜುಲೈ 23ರವರೆಗೆ ಭಾರಿ ಮಳೆಯಾಗಲಿದ್ದು, ಮುಂದಿನ 24 ಗಂಟೆಗಳಲ್ಲಿ 200 ಮಿಲಿಮೀಟರ್ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಮೀನುಗಾರಿಕೆಗೆ ತೆರಳಿದ್ದ ತಮಿಳುನಾಡಿನ ಮೂವರು ನಾಪತ್ತೆಯಾಗಿದ್ದಾರೆ.

TAGGED:AssambengaluruBiharkarnatakaPublic TVrainಅಸ್ಸಾಂಕರ್ನಾಟಕಪಬ್ಲಿಕ್ ಟಿವಿಬಿಹಾರಬೆಂಗಳೂರುಮಳೆ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Women hitting young men with chappals Hubballi
Dharwad

ತುಮ್ಹಾರ ಫೋನ್ ನಂಬರ್ ದೇದೋ ಎಂದ ಯುವಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

Public TV
By Public TV
1 minute ago
Cooper Connolly and Priyansh Arya of Punjab Kings scored 32 runs Aiden Markram single over
Cricket

ಒಂದೇ ಓವರ್‌ನಲ್ಲಿ 32 ರನ್‌ – ಕೊನೊಲಿ, ಪ್ರಿಯಾಂಶ್‌ ಆಟಕ್ಕೆ ಮಾರ್ಕ್ರಾಮ್ ಪಂಚರ್‌

Public TV
By Public TV
60 minutes ago
Tamil Nadu factory blast 20 killed several injured as massive blast rips through firecracker factory in Virudhunagar
Crime

ತಮಿಳುನಾಡಿನಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ – 23 ಸಾವು, ಹಲವರ ಸ್ಥಿತಿ ಚಿಂತಾಜನಕ

Public TV
By Public TV
1 hour ago
Kuvempu University
Districts

ಕುವೆಂಪು ವಿವಿ ಸ್ಮಾರ್ಟ್ ಕ್ಲಾಸ್ ಹಗರಣ – ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇಮಿಸಿ ರಾಜ್ಯಪಾಲರ ಆದೇಶ

Public TV
By Public TV
1 hour ago
D.K Shivakumar Mukthi Mandira Mutt
Districts

ಗದಗದ ಮುಕ್ತಿಮಂದಿರ ಮಠಕ್ಕೆ ಡಿಕೆಶಿ ದಿಢೀರ್ ಭೇಟಿ

Public TV
By Public TV
2 hours ago
Water Board gears up to implement Indias largest biogas project bengaluru BWSSB Sewage Waste
Bengaluru City

ಭಾರತದ ಅತಿದೊಡ್ಡ ಬಯೋ-ಗ್ಯಾಸ್ ಯೋಜನೆ ಅನುಷ್ಠಾನಕ್ಕೆ ಬೆಂಗಳೂರು ಜಲಮಂಡಳಿ ಸಜ್ಜು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?