ʻನಿಮ್ಮಿಂದ ಪಮಿರ್ಷನ್ ತೆಗೆದುಕೊಂಡು ನನ್ನ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳಬೇಕಾ? ನನ್ನ ಪ್ರತಿ ನಿರ್ಧಾರಕ್ಕೂ ನಿಮ್ಮ ಅನುಮತಿ ಪಡೆಯಬೇಕಾ?ʼ ಎಂದು ನಟ ಸುದೀಪ್ ಪುತ್ರಿ ಹಾಗೂ ಗಾಯಕಿ ಸಾನ್ವಿ ಸುದೀಪ್ (Sanvi Sudeep) ನಟ್ಟಿಗರ ವಿರುದ್ಧ ಗರಂ ಆಗಿದ್ದಾರೆ.
ಸಾನ್ವಿ ಅವರು ತಮ್ಮ ಬೆನ್ನಿನ ಮೇಲೆ ಗಣೇಶನ ಟ್ಯಾಟೂ (Sanvi Sudeep Ganesha Tattoo) ಹಾಕಿಸಿಕೊಂರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ತಮ್ಮ ನಡೆಯನ್ನ ಸಮರ್ಥಿಸಿಕೊಂಡಿರುವ ಅವರು, ನೀವೇನೇ ಕಾಮೆಂಟ್ ಮಾಡಿದರೂ ನಾನು ಕೇರ್ ಮಾಡಲ್ಲ. ಆದರೆ ನನ್ನೊಬ್ಬಳ ಬಗ್ಗೆ ಟ್ರೋಲ್ ಮಾಡಲು ಅದೆಷ್ಟು ಎನರ್ಜಿ ವೇಸ್ಟ್ ಮಾಡುತ್ತಿದ್ದೀರಲ್ಲಾ? ಅದು ಶೋಚನೀಯ. ಜನರ ಗಮನ ಸೆಳೆಯಲು ಹೀಗೆಲ್ಲಾ ಮಾಡಿರಬಹುದು. ಆ ಆಸೆಯೂ ಈಡೇರಲಿ ಎಂದಿದ್ದಾರೆ. ಇದನ್ನೂ ಓದಿ: ಬಾಸ್ ಚಿತ್ರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್,ವಿಜಯಲಕ್ಷ್ಮೀ

ಇತ್ತೀಚಿಗೆ ಸಾನ್ವಿ ತನ್ನ ತಂದೆಯನ್ನು ಓಲ್ಡ್ ಮ್ಯಾನ್ ಅಂತ ಕರೆದಿದ್ದಕ್ಕೆ ಒಂದಿಷ್ಟು ಮಂದಿ ತಗಾದೆ ತೆಗೆದಿದ್ದರು. ಇದಕ್ಕೂ ಪ್ರತಿಕ್ರಿಯಿಸಿದ್ದು, ನಾನು ಸುದೀಪ್ ಮಗಳು. ನನ್ನ ಪಾಲಿಗೆ ಅವರು ಯಾವತ್ತೂ ಓಲ್ಡ್ ಮ್ಯಾನ್ ಆಗಿರುತ್ತಾರೆ. ದ್ವೇಷಿಸಲು ನಿಮಗೊಂದು ಸಣ್ಣ ಕಾರಣ ಸಿಕ್ಕರೂ ಸಾಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ಯಾನ್ ಕರ್ನಾಟಕ ಫಿಲ್ಮ್ ಕನಸು, ಜೂನ್ 21ಕ್ಕೆ ಮುಹೂರ್ತ- ಗಿಲ್ಲಿ ಸಿನಿಮಾಗೆ KVN ಪ್ರೊಡಕ್ಷನ್ ಸಾಥ್
ಏನೂ ಸಾಧನೆ ಮಾಡದೇ ಎಷ್ಟೆಲ್ಲಾ ಮಾತನಾಡುತ್ತಾಳೆ ಬ್ಲಾ ಬ್ಲಾ ಅಂತೆಲ್ಲಾ ನೀವು ಹೇಳಬಹುದು. ನಿಮ್ಮ ಮಾತು ನಿಜ. ಹಾಗೆಂದು ನೀವು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಇರಲಿಕ್ಕೆ ಸಾಧ್ಯವಿಲ್ಲ. ನೀವು ತೆರೆಯ ಹಿಂದೆ ಹೇಡಿಗಳ ರೀತಿ ಅವಿತು ಕುಳಿತು ನಮ್ಮ ಬಗ್ಗೆ ಮಾತನಾಡುತ್ತೀರಿ. ನಮ್ಮ ಬದುಕಿನ ಪ್ರತೀ ಸನ್ನೀವೇಶವನ್ನೂ ಇದೇ ರೀತಿ ನೋಡುತ್ತೀರಿ. ನಿಮ್ಮಿಂದಾಗಿ ಅಪ್ಪನ ಹುಟ್ಟುಹಬ್ಬ ಆಚರಿಸಲು ಅಥವಾ ಆಪ್ತರ ಕೊನೆಯ ಕ್ಷಣಗಳಲ್ಲಿ ನಮಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ. ನಮ್ಮ ಕುಟುಂಬವನ್ನು ನಿಮ್ಮ ಮನರಂಜನೆಗೆ ಬಳಸಿಕೊಂಡಿದ್ದೀರಿ ಎಂದು ಬೇಸರ ಹೊರಹಾಕಿದ್ದಾರೆ.

ನೀವ್ಯಾರು ಅಂತ ನನಗೆ ಗೊತ್ತಿಲ್ಲ ಎಂದುಕೊಳ್ಳಬೇಡಿ. ಅನೇಕ ಬಾರಿ ನನ್ನನ್ನು ಭೇಟಿಯಾಗಿ ನಮ್ಮ ಜೊತೆ ಫೋಟೋ ತೆಗಿಸಿಕೊಳ್ಳಲು ಕೇಳುತ್ತೀರಿ. ಸೋ ಸ್ಯಾಡ್ ಎಂದು ಸಾನ್ವಿ ತಮ್ಮ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡುವವರಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ರಶ್ಮಿಕಾ ಮಂದಣ್ಣ, ಕೃತಿ ಸನೋನ್!
