ಬೆಂಗಳೂರು: ತನ್ನ ಲಿವ್ ಇನ್ ಗೆಳತಿಯನ್ನ (Live-in Girlfriend) ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅನುಷಾ (20) ಕೊಲೆಯಾದ ಯುವತಿಯಾಗಿದ್ದು, ಶರತ್(25) ಬಂಧಿತ ಆರೋಪಿಯಾಗಿದ್ದಾನೆ. ಘಟನೆ ಸಂಬಂಧ ಈಗಾಗಲೇ ಆರೋಪಿಯನ್ನ (Accused) ಬಂಧಿಸಲಾಗಿದೆ. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ಟೆಕ್ಕಿ ಅನುಮಾನಾಸ್ಪದ ಸಾವು – ಹೋಂಸ್ಟೇ ಕೊಠಡಿಯಲ್ಲಿ ಮಹಿಳೆ ಶವ ಪತ್ತೆ

ಶರತ್ ಹಾಗೂ ಅನುಷಾ ಹಾಸನ ಮೂಲದವರು, ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಶರತ್ ವಾಟರ್ ಟ್ಯಾಂಕ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. 6 ತಿಂಗಳಿನಿಂದ ಇ ಜೋಡಿ ಮಲ್ಲೇಶ್ವರದಲ್ಲಿ ಲಿವ್ ಇನ್‌ನಲ್ಲೇ ವಾಸವಿದ್ದರು. ಆದ್ರೆ ವೈಯಕ್ತಿಕ ವಿಚಾರಕ್ಕೆ ಜಗಳ ನಡೆದು ಕೊಲೆಯಾಗಿದೆ. ಇದನ್ನೂ ಓದಿ: ಪ್ರಿಯತಮೆ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ – 1 ವರ್ಷದ ಹಿಂದೆ ಕದ್ದುಮುಚ್ಚಿ ಮದ್ವೆಯಾಗಿದ್ದ ಭವಾನಿ – ಚಂದ್ರಶೇಖರ್
ಕೊಲೆಯಾದ ಬಗ್ಗೆ ಶರತ್ ಸೋಮವಾರ ವಕೀಲರಿಗೆ ವಿಚಾರ ತಿಳಿಸಿದ್ದ. ಬಳಿಕ ವಕೀಲರು ಪೊಲೀಸರಿಗೆ ವಿಚಾರ ತಿಳಿಸಿದ್ರು. ಬಳಿಕ ಶೇಷಾದ್ರಿಪುರಂ ಪೊಲೀಸರು ಪರಿಶೀಲನೆ ನಡೆಸಿ, ಕೇಸ್ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿದ್ರು.
ಸದ್ಯ ಅನುಷಾ ಮೃತದೇಹವನ್ನ ಪೋಷಕರಿಗೆ ಹಸ್ತಾಂತರಿಸಿದ್ದು, ಆರೋಪಿ ಶರತ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಬಾಲಕಿ ವೆನ್ನಿಲಾ ಕೊಲೆ ಕೇಸ್ – ಪ್ರಿಯಾಂಕಾಳ ಸುಳ್ಳುಪತ್ತೆ ಪರೀಕ್ಷೆಗೆ ಸಿದ್ಧತೆ
