Tuesday, 23rd April 2019

ಕುಮಾರಸ್ವಾಮಿಗೆ ಟಿಪ್ಪು ಬದ್ಲು ಸಿದ್ದರಾಮಯ್ಯನ ಜಯಂತಿ ಮಾಡ್ಬೋದಿತ್ತು- ನಳಿನ್ ವ್ಯಂಗ್ಯ

ಮಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಟಿಪ್ಪು ಜಯಂತಿ ಮಾಡೋ ಬದಲು ಸಿದ್ದರಾಮಯ್ಯನ ಜಯಂತಿ ಮಾಡಬಹುದಿತ್ತು ಅಂತ ಸಂಸದ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ರಾಜ್ಯಸರ್ಕಾರದ ವತಿಯಿಂದ ಶನಿವಾರ ನಡೆಯಲಿರುವ ಟಿಪ್ಪು ಜಯಂತಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ದರಾಮಯ್ಯ ಅಂತ ಸಂಸದ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.

ಅಪ್ಪನಿಗೆ ಬೈದ ಋಣ ತೀರಿಸಲು ಸಿದ್ದರಾಮಯ್ಯ ಮಗನಿಗೆ ಅಧಿಕಾರ ಕೊಟ್ಟವರಾಗಿದ್ದಾರೆ. ಮತಾಂಧ ಟಿಪ್ಪುವಿನ ಜಯಂತಿಯನ್ನು ಸಿದ್ದರಾಮಯ್ಯ ಮಾಡಿದ್ರು. ಹಾಗಾಗಿ ಕುಮಾರಸ್ವಾಮಿ ಟಿಪ್ಪು ಬದಲು ಸಿದ್ದರಾಮಯ್ಯನ ಜಯಂತಿ ಮಾಡಬಹುದಿತ್ತು ಅಂತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಟಿಪ್ಪು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಂಡಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸದೇ ಆಚೆಯೂ ಅಲ್ಲ ಈಚೆಯೂ ಅಲ್ಲ ಅಂತಿದ್ದಾರೆ. ಕುಮಾರಸ್ವಾಮಿ ಗಂಡೂ ಅಲ್ಲ, ಹೆಣ್ಣೂ ಅಲ್ಲ ಎಂಬುದನ್ನು ತೋರಿಸಿದ್ದಾರೆ. ಟಿಪ್ಪುವಿನ ಖಡ್ಗ ಪಡೆದ ವಿಜಯ ಮಲ್ಯ ಸೋತು ಸುಣ್ಣವಾದ್ರು. ಟಿಪ್ಪು ಜಯಂತಿ ಮಾಡಿದ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ್ರು. ಮುಂದೆ ಕುಮಾರಸ್ವಾಮಿಯೂ ಅಧಿಕಾರ ಕಳ್ಕೊಂಡು ಕಾಡಿಗೆ ಹೋಗಲಿದ್ದಾರೆ ಎಂದು ಕಟೀಲ್ ಭವಿಷ್ಯ ನುಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *